ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೊದಲ ಸೋಲಿನ ಬೆನ್ನಲ್ಲೇ ಶುರುವಾದ ಲೆಕ್ಕಾಚಾರ. ಆತನನ್ನು ಬದಲಿಸದೇ ಹೋದರೆ ಪಂದ್ಯ ಅಲ್ಲ ಸರಣಿ ಸೋಲು ಎಂದ ನೆಟ್ಟಿಗರು. ಯಾರನ್ನು ಬದಲಾಯಿಸಬೇಕಂತೆ ಗೊತ್ತೇ?

12,346

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಈಗಾಗಲೇ ಐಪಿಎಲ್ ಮುಗಿದಿದ್ದು ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ 5 ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನು ಪ್ರಾರಂಭಿಸಿದ್ದು ಮೊದಲ ಪಂದ್ಯದಲ್ಲಿಯೇ ಸೌತ್ ಆಫ್ರಿಕಾ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಸೋಲನ್ನು ಅನುಭವಿಸಿದೆ. ಹೌದು ಗೆಳೆಯರೆ ನಿನ್ನೆ ನಡೆದ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ರಿಷಬ್ ಪಂತ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಇಶಾನ್ ಕಿಶನ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಲ್ಲಿ 4 ವಿಕೆಟಿಗೆ 211 ರನ್ನುಗಳನ್ನು ಗಳಿಸಲು ಶಕ್ತವಾಯಿತು.

ಸೌತ್ ಆಫ್ರಿಕಾ ಗೆ 212 ರನ್ನುಗಳ ಕಠಿಣ ಗುರಿಯನ್ನು ಭಾರತೀಯ ಕ್ರಿಕೆಟ್ ತಂಡ ನೀಡಿತ್ತು. ಇದನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕ್ರಿಕೆಟ್ ತಂಡ ಐದು ಎಸೆತಗಳು ಉಳಿದಿರುವಂತೆ ಈ ಕಠಿಣ 212 ರನ್ನುಗಳ ಗುರಿಯನ್ನು ಸಾಧಿಸಿತು. ಸೌತ್ ಆಫ್ರಿಕಾ ತಂಡದ ಪರವಾಗಿ ಡೇವಿಡ್ ಮಿಲ್ಲರ್ ಹಾಗೂ ವಾನ್ ಡರ್ ಡಸನ್ ಜೋಡಿ ಉತ್ತಮ ಜೊತೆಯಾಟವನ್ನು ಭಾರತೀಯ ಕ್ರಿಕೆಟ್ ತಂಡದ ಸೋಲಿಗೆ ಕಾರಣವಾಯಿತು. ಈ ಪಂದ್ಯವನ್ನು ಗೆದ್ದಿದ್ದರೆ ಸತತವಾಗಿ 13 ಟಿ-ಟ್ವೆಂಟಿ ಪಂದ್ಯಗಳನ್ನು ಜೊತೆಯಾಗಿ ಗೆದ್ದ ತಂಡ ಎನ್ನುವ ದಾಖಲೆಗೆ ಭಾರತೀಯ ಕ್ರಿಕೆಟ್ ತಂಡ ಪಾತ್ರ ವಾಗುತ್ತಿತ್ತು. ಈ ಪಂದ್ಯವನ್ನು ಸೋತ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಆತನನ್ನು ತಂಡದಿಂದ ಹೊರಕ್ಕೆ ಹಾಕಿ ಇಲ್ಲದಿದ್ದರೆ ಸರಣಿ ಸೋಲಿಗೆ ಕಾರಣವಾಗುತ್ತಾನೆ ಎಂಬುದಾಗಿ ಒಬ್ಬ ಆಟಗಾರನ ಮೇಲೆ ಟೀಕೆಗಳ ಸುರಿಮಳೆ ಸುರಿಸಿದ್ದಾರೆ.

ಹೌದು ಗೆಳೆಯರೇ ನಾಯಕ ರಿಷಬ್ ಪಂತ್ ರವರನ್ನು ಸೋಲಿಗೆ ದೂಷಿಸುತ್ತಾ ಸರಿಯಾದ ಸಂದರ್ಭದಲ್ಲಿ ಬೌಲರ್ಗಳನ್ನು ಬಳಕೆ ಮಾಡಲು ಅವರಿಗೆ ಬರುವುದಿಲ್ಲ ಅವರನ್ನು ಹೇಗೆ ನೀವು ಭವಿಷ್ಯದ ನಾಯಕ ಹಾಗೂ ಮಹೇಂದ್ರ ಸಿಂಗ್ ಧೋನಿ ರವರಿಗೆ ಉತ್ತಮ ರಿಪ್ಲೇಸ್ಮೆಂಟ್ ಎಂಬುದಾಗಿ ಹೇಳುತ್ತೀರಿ ಎಂಬುದಾಗಿ ಟೀಕಿಸಿದ್ದಾರೆ. ರಿಷಬ್ ಪಂತ್ ಈಗಾಗಲೇ ತಮ್ಮ ಕಳಪೆ ನಾಯಕತ್ವದ ಪ್ರದರ್ಶನವನ್ನು ಐಪಿಎಲ್ ನಲ್ಲಿ ತೋರಿಸಿದ್ದಾರೆ ಮತ್ತೆ ಅದನ್ನು ಇವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಂದುವರಿಸುವುದು ಬೇಡ ಎಂಬುದಾಗಿ ಕೂಡಾ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಮಿಸ್ ಮಾಡ್ದೆ ಹಂಚಿಕೊಳ್ಳಿ.

Get real time updates directly on you device, subscribe now.