ಈ ಬಾರಿಯೂ ಕೊಹ್ಲಿ ರವರ ಕೈ ಹಿಡಿಯದ ಅದೃಷ್ಟ; ಐಪಿಎಲ್ ಚಾಂಪಿಯನ್ ತಂಡದಲ್ಲಿ 17 ಆಸ್ಟ್ರೇಲಿಯನ್ ಆಟಗಾರರು.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಗುಜರಾತ್ ಟೈಟನ್ಸ್ ತಂಡ ತನ್ನ ಚೊಚ್ಚಲ ಐಪಿಎಲ್ ನಲ್ಲಿಯೇ ಚಾಂಪಿಯನ್ ಆಗುವ ಮುಖಾಂತರ ಸಾಧನೆಯನ್ನು ಗೈದಿದೆ ಎಂದು ಹೇಳಬಹುದಾಗಿದೆ. ಐಪಿಎಲ್ ಪ್ರಾರಂಭವಾಗಿ 15 ಸೀಸನ್ ಗಳು ಕಳೆದಿದೆ. ಆದರೂ ಇದುವರೆಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ರವರು ಇದುವರೆಗೂ ಒಂದೇ ಒಂದು ಬಾರಿ ಕೂಡ ಕಪ್ ಗೆದ್ದಿರುವ ತಂಡದ ಭಾಗವಾಗಿಲ್ಲ. ಆದರೆ ಇದುವರೆಗೂ ಸರಿಯಾಗಿ ಗಮನಿಸಿದರೆ ಐಪಿಎಲ್ ನಲ್ಲಿ ಕಪ್ ಗೆದ್ದಿರುವ ಚಾಂಪಿಯನ್ ತಂಡಗಳಲ್ಲಿ ಇದುವರೆಗೂ 17 ಆಸ್ಟ್ರೇಲಿಯನ್ ಆಟಗಾರರು ಕಾಣಿಸಿಕೊಂಡಿದ್ದಾರೆ.

ಹೌದು ಗೆಳೆಯರೆ ಮೊದಲಿಗೆ ಗಮನಿಸುವುದಾದರೆ ಐಪಿಎಲ್ ನ ಮೊದಲ ಕಪ್ ಗೆದ್ದಿರುವ ನಾಯಕ ರಾಜಸ್ಥಾನ ರಾಯಲ್ಸ್ ತಂಡದ ಶೇನ್ ವಾರ್ನ್. 2008 ರಿಂದ ಇಲ್ಲಿಯವರೆಗೂ 17 ಆಸ್ಟ್ರೇಲಿಯನ್ ಆಟಗಾರರು ಚಾಂಪಿಯನ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಶೇನ್ ವಾರ್ನ್ ರವರಿಂದ ಪ್ರಾರಂಭಿಸಿ ಈ ವರ್ಷದ ಗುಜರಾತ ಟೈಟನ್ಸ್ ತಂಡದ ಮ್ಯಾಥ್ಯು ವೆಡ್ ಅವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಜೋಶ್ ಹೆಝಲ್ ವುಡ್ 2020 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ನತನ್ ಕೌಲ್ಟರ್ ನೈಲ್. 2008 ರಲ್ಲಿ ಶೇನ್ ವಾರ್ನ್ ಜೊತೆಗೆ ಮತ್ತೊಬ್ಬ ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸನ್ ಕೂಡ ಇದ್ದರು. ಅದಾದ ಮುಂದಿನ ವರ್ಷ ಅಂದರೆ 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಂಡ್ರೂ ಸೈಮಂಡ್ಸ್ ಆಡಮ್ ಗಿಲ್ ಕ್ರಿಸ್ಟ್ ಹಾಗೂ ರಿಯಾನ್ ಹ್ಯಾರಿಸ್ ಅವರು ಕೂಡ ಇದ್ದರು.

ಅದಾದ ಮುಂದಿನ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆದಾಗ ಮ್ಯಾಥ್ಯೂ ಹೇಡನ್ ಡಗ್ ಬೋಲಿಂಜರ್ ಅದಾದ ನಂತರ ಮುಂದಿನ ವರ್ಷ ಚೆನ್ನೈ ಚಾಂಪಿಯನ್ ಆದಾಗ ಬೋಲಿಂಜರ್ ಜೊತೆಗೆ ಮೈಕ್ ಹಸ್ಸಿ ಕೂಡ ಇದ್ದರು. 2012 ರಲ್ಲಿ ಕೊಲ್ಕತ್ತಾ ಜೊತೆಗೆ ಬ್ರೆಟ್ ಲೀ ಹಾಗೂ 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಿಚಲ್ ಜಾನ್ಸನ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್, 2016 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕಪ್ತಾನನಾಗಿ ಡೇವಿಡ್ ವಾರ್ನರ್ ತಂಡದಲ್ಲಿ ಪ್ರಮುಖ ಆಟಗಾರರಾದ ಮೊಯಿಸಸ್ ಹೆನ್ರಿಕ್ಸ್ ಹಾಗೂ ಬೆನ್ ಕಟಿಂಗ್ ಕೂಡ ಕಾಣಿಸಿಕೊಂಡಿದ್ದರು. 2017 ರಲ್ಲಿ ಮತ್ತೆ ಮಿಚೆಲ್ ಜಾನ್ಸನ್ ಹಾಗೂ 2018 ರಲ್ಲಿ ಚೆನ್ನೈ ಪರವಾಗಿ ಶೇನ್ ವಾಟ್ಸನ್ ಚಾಂಪಿಯನ್ ಆಟವನ್ನು ಪ್ರದರ್ಶಿಸಿದ್ದರು. ಒಟ್ಟಾರೆಯಾಗಿ 17 ಆಸ್ಟ್ರೇಲಿಯನ್ ಆಟಗಾರರು ಐಪಿಎಲ್ ಚಾಂಪಿಯನ್ ತಂಡಗಳ ಭಾಗವಾಗಿದ್ದಾರೆ ಆದರೆ ಚಾಂಪಿಯನ್ ಆಟಗಾರರಾಗಿರುವ ವಿರಾಟ್ ಕೊಹ್ಲಿ ಒಮ್ಮೆಯೂ ಕೂಡ ಚಾಂಪಿಯನ್ ತಂಡದ ಭಾಗವಾಗಿಲ್ಲ.