ಗರುಡ ಪುರಾಣದ ಪ್ರಕಾರ ವ್ಯಕ್ತಿಯ ಈ ತಪ್ಪುಗಳು ಬಡತನಕ್ಕೆ ಕಾರಣ. ನೀವು ಈ ತಪ್ಪು ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ಇಲ್ಲವಾದರೆ ಬಡತನ ಕಟ್ಟಿಟ್ಟಬುತ್ತಿ.

ಗರುಡ ಪುರಾಣದ ಪ್ರಕಾರ ವ್ಯಕ್ತಿಯ ಈ ತಪ್ಪುಗಳು ಬಡತನಕ್ಕೆ ಕಾರಣ. ನೀವು ಈ ತಪ್ಪು ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ಇಲ್ಲವಾದರೆ ಬಡತನ ಕಟ್ಟಿಟ್ಟಬುತ್ತಿ.

ನಮಸ್ಕಾರ ಸ್ನೇಹಿತರೇ ಭೂಲೋಕದಲ್ಲಿ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಅತ್ಯಂತ ಉತ್ತಮವಾದ ಗಳಿಕೆಯನ್ನು ಕಾಣುವ ಕನಸನ್ನು ಕಾಣುತ್ತಾರೆ ಅದಕ್ಕಾಗಿಯೇ ಶ್ರಮವಹಿಸಿ ಕೆಲಸವನ್ನು ಕೂಡ ಮಾಡುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಲಕ್ಷ್ಮಿದೇವಿ ಕೃಪೆ ಇದ್ದರೆ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಆದರೆ ಪ್ರಾಚೀನ ಗ್ರಂಥವಾಗಿರುವ ಗರುಡ ಪುರಾಣದ ಪ್ರಕಾರ ಕೆಲವೊಂದು ಕೆಲಸವನ್ನು ಮಾಡುವುದರಿಂದಾಗಿ ದುರಾದೃಷ್ಟ ಎನ್ನುವುದು ನಿಮ್ಮ ಜೀವನದಲ್ಲಿ ಸೇರಿಕೊಳ್ಳುವುದರಿಂದ ಆರ್ಥಿಕ ಜೀವನದಲ್ಲಿ ನೀವು ಹಿನ್ನಡೆಯನ್ನು ಸಾಧಿಸುತ್ತೀರಿ. ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಯಾವ 5 ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಲಕ್ಷ್ಮೀದೇವಿ ಮಲಿನಗೊಂಡಿರುವ ಬಟ್ಟೆಯನ್ನು ಧರಿಸುವವರ ಮನೆಯಲ್ಲಿ ನೆಲೆಸಿರುವುದಿಲ್ಲ. ಹೀಗಾಗಿ ದಿನಾಲು ಸ್ನಾನ ಆದಮೇಲೆ ಶುಚಿಗೊಳಿಸಿದ ಬಟ್ಟೆಯನ್ನು ಧರಿಸಿ ಹಾಗೂ ನಿಮ್ಮ ಮನೆಯನ್ನು ಕೂಡ ಸ್ವಚ್ಛವಾಗಿರಿಸಿಕೊಳ್ಳಿ ಖಂಡಿತವಾಗಿ ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ. ಹಾಗೂ ನಿಮ್ಮ ಜೀವನದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಬರದಂತೆ ಕಾಪಾಡುತ್ತಾಳೆ. ಯಾರು ಜೀವನದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾರೆ ಲಕ್ಷ್ಮೀದೇವಿ ಅವರಿಗೆ ಆಶೀರ್ವಾದವನ್ನು ನೀಡುತ್ತಾಳೆ.

ಎರಡನೆಯದಾಗಿ ಯಾವಾಗಲೂ ಅದರಲ್ಲಿಯೂ ವಿಶೇಷವಾಗಿ ರಾತ್ರಿ ಊಟವಾದ ನಂತರ ಎಂಜಲು ಬಟ್ಟಲನ್ನು ಹಾಗೆ ಇಡಬೇಡಿ ಇದರಿಂದಾಗಿ ಶನಿದೇವ ನಿಮ್ಮ ಮೇಲೆ ದೃಷ್ಟಿಯನ್ನು ಬೀರುತ್ತಾನೆ. ಈ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ದರಿದ್ರತೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ನಿಮ್ಮ ಮನೆಯ ಆರ್ಥಿಕ ಸ್ಥಿತಿ ಸೇರಿದಂತೆ ಹಲವಾರು ವಿಚಾರಗಳು ಗಂಭೀರವಾಗಿ ಅಧೋಗತಿಗೆ ಸೇರಬಹುದಾಗಿದೆ. ಹೀಗಾಗಿ ಯಾವತ್ತೂ ಕೂಡ ಊಟ ಆದ ನಂತರ ಎಂಜಲು ಬಟ್ಟಲನ್ನು ಇಡಬೇಡಿ ತೊಳೆದು ಶುಚಿಯಾಗಿಡಿ.

ಮೂರನೇದಾಗಿ ಯಾರ ಬಗ್ಗೆಯೂ ಕೂಡ ನೀವು ಯಾವುದೇ ಕಾರಣಗಳಿಲ್ಲದೇ ಅವರ ಕುರಿತಂತೆ ಕೆಟ್ಟದ್ದನ್ನು ಯೋಚಿಸುವುದು ಅಥವಾ ಕೆಟ್ಟದ್ದನ್ನು ಮಾತನಾಡುವುದನ್ನು ಮಾಡಬಾರದು ಇದರಿಂದಾಗಿ ನಿಮ್ಮ ಮೇಲೆ ಲಕ್ಷ್ಮಿದೇವಿ ಮುನಿಸಿಕೊಳ್ಳುತ್ತಾಳೆ. ಹೌದು ಗೆಳೆಯರೇ ವಿನಾಕಾರಣ ಬೇರೆಯವರ ಕುರಿತಂತೆ ಕೆಟ್ಟದ್ದನ್ನು ಮಾತನಾಡುವುದು ನಿಮ್ಮ ಜೀವನದಲ್ಲಿ ದರಿದ್ರತೆ ಆರಂಭವಾಗುವ ಮೊದಲ ಮುನ್ಸೂಚನೆ ಯಾಗಿರುತ್ತದೆ. ಹೀಗಾಗಿ ಯಾವುದೇ ಕಾರಣಗಳಿಲ್ಲದೇ ಬೇರೆಯವರ ಕುರಿತಂತೆ ಕೆಟ್ಟದ್ದನ್ನು ಯೋಚಿಸುವುದನ್ನು ಅಥವಾ ಕೆಟ್ಟದ್ದನ್ನು ಮಾತನಾಡುವುದನ್ನು ಮಾಡಬಾರದು.

ನಾಲ್ಕನೇದಾಗಿ ಸೂರ್ಯ ಉದಯಿಸಿದ ನಂತರವೂ ಕೂಡ ಹಲವಾರು ಗಂಟೆಗಳ ಕಾಲ ಮಲಗಿ ಇರುವವರನ್ನು ಆಲಸಿಗಳು ಅಥವಾ ಸೋಮಾರಿಗಳು ಎಂಬುದಾಗಿ ಕರೆಯಲಾಗುತ್ತದೆ. ಇವರ ಜೀವನದಲ್ಲಿ ಇವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಯಾವತ್ತೂ ಕೂಡ ಸೂರ್ಯೋದಯ ಆದ ನಂತರ ಹೆಚ್ಚು ಕಾಲಗಳ ಕಾಲ ಹಾಸಿಗೆಯಲ್ಲಿ ಬಿದ್ದಿರ ಬಾರದು ಅಂದರೆ ಮಲಗಿರ ಬಾರದು. ಇಲ್ಲದಿದ್ದರೆ ನಿಮ್ಮ ಜೀವನದಲ್ಲಿ ದರಿದ್ರತೆ ಹೊದ್ದು ಮಲಗುತ್ತದೆ.

ಕೊನೆಯದಾಗಿ ಪರರ ಸಂಪತ್ತಿಗೆ ಯಾವತ್ತೂ ಕೂಡ ನಾಲಿಗೆ ಚಾಚೇ ಬಾರದು. ಯಾರೇ ಆಗಲಿ ಬೇರೆಯವರ ಹಣವನ್ನು ದೋಚಲು ಪ್ರಯತ್ನಿಸಿದರೆ ಖಂಡಿತವಾಗಿ ಅವರು ಜೀವನದಲ್ಲಿ ಸಂತೋಷವಾಗಿ ಇರಲು ಸಾಧ್ಯವೇ ಇಲ್ಲ. ಗರುಡ ಪುರಾಣ ಶಾಸ್ತ್ರದಲ್ಲಿ ಕೂಡ ಇದನ್ನು ಉಲ್ಲೇಖಿಸಲಾಗಿದ್ದು ಬೇರೆಯವರ ಸಂಪತ್ತು ಹಾಗೂ ಸಂತೋಷವನ್ನು ಕದಿಯಲು ಹೋದರೆ ಖಂಡಿತ ವಾಗಿ ಅದು ನಿಮಗೆ ಜೀವನದಲ್ಲಿ ಸಾಕಷ್ಟು ದುಃಖವನ್ನು ಒದಗಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀಗಾಗಿ ಗರುಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಈ 5 ಕಾರ್ಯಗಳನ್ನು ಎಂದಿಗೂ ಕೂಡ ಮಾಡಬೇಡಿ ಇದರಿಂದ ನಿಮ್ಮ ಜೀವನದಲ್ಲಿ ದರಿದ್ರತೆ ಎನ್ನುವುದು ಹೆಚ್ಚಾಗುತ್ತದೆ ಹಾಗೂ ಲಕ್ಷ್ಮಿದೇವಿಯ ಕೃಪಾಕಟಾಕ್ಷದಿಂದ ನೀವು ವಂಚಿತರಾಗುತ್ತೀರಿ. ಹೀಗಾಗಿ ನೀವು ನ್ಯಾಯಮಾರ್ಗದಲ್ಲಿ ನಡೆಯುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಈ ಮೇಲೆ ನೀಡಿರುವ ಸೂಚನೆಗಳ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.