ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದಿನ ಬಾರಿ ಮಾಜಿ CSK ಪ್ಲೇಯರ್ ಗಳಿಗೆ ಗಾಳ ಹಾಕುತ್ತಿದೆಯೇ ಆರ್ಸಿಬಿ, ಇವರಿಬ್ಬರು ಬಂದರೆ ಪಕ್ಕ ಕಪ್ ಆರ್ಸಿಬಿಯದ್ದೇ. ಯಾರ್ಯಾರು ಗೊತ್ತೇ??

158

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಡುಪ್ಲೆಸಿಸ್ ಅವರ ನಾಯಕತ್ವದಲ್ಲಿ ಪ್ಲೇಆಫ್ ಹಂತದವರೆಗೂ ಕೂಡ ಅಂದರೆ ಕ್ವಾಲಿಫೈಯರ್ 2 ಹಂತದವರೆಗೂ ಕೂಡ ಬಂದು ಸೋತು ಹಿಂದಿರುಗಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಗಳು ಈ ಬಾರಿ ಕಪ್ ನಮ್ಮದೇ ಎನ್ನುವುದಾಗಿ ಭರವಸೆ ಹೊಂದಿದ್ದರು. ಕೇವಲ ಹೇಳುವುದಷ್ಟೇ ಮಾತ್ರವಲ್ಲದೆ ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು.

ಆದರೆ ಪ್ರಮುಖ ಹಂತಗಳಲ್ಲಿ ಕೆಲವು ಆಟಗಾರರು ಕಳಪೆ ಪ್ರದರ್ಶನ ನೀಡಿರುವ ಕಾರಣದಿಂದಾಗಿ ತಂಡ ಈ ಬಾರಿ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿದೆ. ಇನ್ನು ಈ ಬಾರಿ ಕೆಲವು ಆಟಗಾರರು ತೋರಿರುವ ಪ್ರದರ್ಶನದಿಂದ ಮುಂದಿನ ಬಾರಿ ತಂಡದಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ಸೀಸನ್ ನಲ್ಲಿ ಹಲವಾರು ಆಟಗಾರರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಮುಂದಿನ ಸೀಸನ್ನಲ್ಲಿ ಇಬ್ಬರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಡುಪ್ಲೆಸಿಸ್ ಹಾಗೂ ಜೋಶ್ ಹೆಝಲ್ ವುಡ್ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಳಯವನ್ನು ಸೇರಿದ್ದಾರೆ. ಹಾಗಿದ್ದರೆ ಮುಂದಿನ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಯಾರೆಲ್ಲ ಸೇರಲಿದ್ದಾರೆ ನೋಡೋಣ ಬನ್ನಿ.

ಹೌದು ಗೆಳೆಯರೇ ಮುಂದಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿರುವ ರವೀಂದ್ರ ಜಡೇಜಾ ಹಾಗೂ ಸುರೇಶ್ ರೈನಾ ಅವರು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿ ಐಪಿಎಲ್ ನಲ್ಲಿ ಸುರೇಶ್ ರೈನ ರವರು ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದರು ರವೀಂದ್ರ ಜಡೇಜಾ ರವರು ಟೂರ್ನಿಯ ಅರ್ಧದಲ್ಲಿಯೇ ತಂಡವನ್ನು ಬಿಟ್ಟು ಹೊರ ಹೋಗಿದ್ದರು. ಇಂಜುರಿಯ ಕಾರಣವನ್ನು ನೀಡಿದ್ದರು ಕೂಡ ರವೀಂದ್ರ ಸಿಂಗ್ ಜಡೇಜಾ ತಂಡದೊಂದಿಗೆ ಅಸಮಾಧಾನವನ್ನು ಹೊಂದಿದ್ದಾರೆ ಎಂಬುದಾಗಿ ಪರೋಕ್ಷವಾಗಿ ತಿಳಿದುಕೊಳ್ಳಲಾಗಿದೆ. ಹೀಗಾಗಿ ಮುಂದಿನ ಐಪಿಎಲ್ ನಲ್ಲಿ ಇವರಿಬ್ಬರೂ ಕೂಡ ಆರ್ಸಿಬಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಖಂಡಿತವಾಗಿ ಇವರಿಬ್ಬರು ತಂಡಕ್ಕೆ ಬಂದರೆ ಮುಂದಿನ ಸಲ ಕಪ್ ನಮ್ದೇ.