ಸಿರಾಜ್ ಪ್ರದರ್ಶನದ ಕುರಿತು ಮಾತನಾಡಿ ಆರ್ಸಿಬಿ ತಂಡದ ಮೈಕ್ ಹೆಸನ್ ಹೇಳಿದ್ದೇನು ಗೊತ್ತೆ?? ಇವೆಲ್ಲ ಬೇಕಾ ಎಂದ ಆರ್ಸಿಬಿ ಫ್ಯಾನ್ಸ್??

ಸಿರಾಜ್ ಪ್ರದರ್ಶನದ ಕುರಿತು ಮಾತನಾಡಿ ಆರ್ಸಿಬಿ ತಂಡದ ಮೈಕ್ ಹೆಸನ್ ಹೇಳಿದ್ದೇನು ಗೊತ್ತೆ?? ಇವೆಲ್ಲ ಬೇಕಾ ಎಂದ ಆರ್ಸಿಬಿ ಫ್ಯಾನ್ಸ್??

ನಮಸ್ಕಾರ ಸ್ನೇಹಿತರೇ ಬಾರಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಎದುರು ನಮ್ಮೆಲ್ಲರ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿದೆ. ತಂಡದ ಸೋಲಿಗೆ ಹಲವಾರು ಆಟಗಾರರ ಹೆಸರು ಕೇಳಿಬರಬಹುದು. ಆದರೆ ಈ ಒಬ್ಬ ಆಟಗಾರನ ಹೆಸರು ಖಂಡಿತವಾಗಿ ತಂಡದ ಸೋಲಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೌದು ನಾವು ಮಾತನಾಡುತ್ತಿರುವುದು ಮೊಹಮ್ಮದ್ ಸಿರಾಜ್ ಅವರ ಕುರಿತಂತೆ. ಹೌದು ಗೆಳೆಯರೇ ಮೊಹಮ್ಮದ್ ಸಿರಾಜ್ ರವರು ಈ ಬಾರಿಯ ಐಪಿಎಲ್ ಗೂ ಮುನ್ನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 9 ಕೋಟಿ ರೂಪಾಯಿಗೆ ತಂಡದಲ್ಲಿ ರಿಟೈನ್ ಮಾಡಿಕೊಂಡಿತ್ತು.

ಆದರೆ ಈ ಬಾರಿಯ ಐಪಿಎಲ್ ನಲ್ಲಿ ಮೊಹಮ್ಮದ್ ಸಿರಾಜ್ ರವರು ತಮ್ಮ ಬೆಲೆಗೆ ತಕ್ಕಂತೆ ಆಟವಾಡಿರಲಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇದಕ್ಕಾಗಿ ಇವರನ್ನು ಕೊನೆಯ ಲೀಗ್ ಪಂದ್ಯದಲ್ಲಿ ಹೊರಗೆ ಇಟ್ಟಿದ್ದರು ಕೂಡ ಮತ್ತೆ ಪ್ಲೇಆಫ್ ಹಂತದಲ್ಲಿ ಇವರನ್ನು ಮತ್ತು ತಂಡದಲ್ಲಿ ಆಡಿಸಲಾಯಿತು. ಆದರೆ ಮತ್ತೆ ವಿಶ್ರಾಂತಿ ಪಡೆದು ಬಂದ ನಂತರವೂ ಕೂಡ ಮೊಹಮ್ಮದ್ ಸಿರಾಜ್ ರವರು ತೋರಿಸಿದ್ದು ಕಳಪೆ ಆಟವನ್ನೇ. ಇದನ್ನು ಓದಿ: ಸೋತ ಬೆನ್ನಲ್ಲೇ ಲೆಕ್ಕಾಚಾರ ಆರಂಭಿಸಿತೇ ಆರ್ಸಿಬಿ. ತಂಡಕ್ಕೆ ಮೇಜರ್ ಸರ್ಜರಿ ಫಿಕ್ಸ್?? ತಂಡದಿಂದ ಹೊರಹಾಕುವ ಆಟಗಾರರು 6 ಯಾರ್ಯಾರು ಗೊತ್ತೇ??

ಈ ಬಾರಿ ಆಡಿರುವ 15 ಪಂದ್ಯಗಳಲ್ಲಿ ಬರೋಬ್ಬರಿ 10.08 ಎಕಾನಮಿಯಲ್ಲಿ ದುಬಾರಿ ಬೌಲಿಂಗ್ ಮಾಡಿದ್ದಾರೆ. ಈಗಾಗಲೇ ಆರ್ಸಿಬಿ ಅಭಿಮಾನಿಗಳು ಹಲವಾರು ವರ್ಷಗಳಿಂದ ಸಿರಾಜ್ ರವರು ಇದೇ ಕಥೆ ತಂಡದಿಂದ ಅವರನ್ನು ತೆಗೆದು ಹಾಕಿ ಎನ್ನುವುದಾಗಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಆದರೆ ತಂಡದ ಡೈರೆಕ್ಟರ್ ಆಫ್ ಆಪರೇಷನ್ ಆಗಿರುವ ಮೈಕ್ ಹೆಸನ್ ರವರು ಸಿರಾಜ್ ಒಬ್ಬ ಉತ್ತಮ ಆಟಗಾರ ಮುಂದಿನ ಐಪಿಎಲ್ನಲ್ಲಿ ಮತ್ತೆ ಯಶಸ್ವಿಯಾಗಿ ಕಂಬ್ಯಾಕ್ ಮಾಡುತ್ತಾರೆ ಎಂಬುದಾಗಿ ಹೇಳಿದ್ದಾರೆ. ಆದರೆ ಈ ಬಾರಿ ಸಿರಾಜ್ ನೀಡಿರುವಂತಹ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂಬುದನ್ನು ಅರಿತಿರುವ ಅಭಿಮಾನಿಗಳು ಇದೆಲ್ಲ ಬೇಕಾ ಅವರನ್ನು ತೆಗೆದು ಹಾಕಿ ಎಂಬುದಾಗಿ ಒತ್ತಾಯ ಮಾಡುತ್ತಿದ್ದಾರೆ. ಸಿರಾಜ್ ಮತ್ತೆ ತಂಡದಲ್ಲಿ ಆಡುತ್ತಾರೆ ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ.