ಮುಕ್ತಾಯವಾದ ಐಪಿಎಲ್ ನಲ್ಲಿ ಹರಿದಿದೆ ಹಣದ ಹೊಳೆ, ಯಾರ್ಯಾರಿಗೆ ಎಷ್ಟು ಬಹುಮಾನ ಸಿಕ್ಕಿದೆ ಗೊತ್ತಾ?? ಇದು ಹಣದ ಐಪಿಎಲ್.

ಮುಕ್ತಾಯವಾದ ಐಪಿಎಲ್ ನಲ್ಲಿ ಹರಿದಿದೆ ಹಣದ ಹೊಳೆ, ಯಾರ್ಯಾರಿಗೆ ಎಷ್ಟು ಬಹುಮಾನ ಸಿಕ್ಕಿದೆ ಗೊತ್ತಾ?? ಇದು ಹಣದ ಐಪಿಎಲ್.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಐಪಿಎಲ್ 15ನೇ ಆವೃತ್ತಿಯನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಮೊದಲ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಸೋಲಿಸಿ ಗೆದ್ದುಕೊಂಡಿದೆ. ಲೀಗ್ ಪಂದ್ಯದಲ್ಲಿ ಕೂಡ ಬಹುತೇಕ ಹೆಚ್ಚಿನ ಪಂದ್ಯಗಳನ್ನು ಗುಜರಾತ್ ಟೈಟನ್ಸ್ ತಂಡ ಗೆದ್ದಿತ್ತು. ಫೈನಲ್ ವರೆಗೂ ಕೂಡ ತನ್ನ ಡಾಮಿನೇಷನ್ ಅನ್ನು ಸಾಬೀತು ಪಡಿಸಿಕೊಂಡು ಬಂದಿತ್ತು. ಅಂತೂ ಇಂತೂ ಐಪಿಎಲ್ ಮುಗಿದಿದ್ದು ಯಾವ್ಯಾವ ತಂಡಕ್ಕೆ ಹಾಗೂ ಯಾರ್ಯಾರಿಗೆ ಯಾವ ಬಹುಮಾನಗಳು ಹಾಗೂ ಎಷ್ಟು ನಗದು ಬಹುಮಾನಗಳು ಸಿಕ್ಕಿವೆ ಎಂಬುದನ್ನು ನೋಡೋಣ ಬನ್ನಿ.

ಟೂರ್ನಿಯ ವಿನ್ನರ್ ಆಗಿರುವ ಗುಜರಾತ್ ಟೈಟಾನ್ಸ್ ತಂಡ ಮೊದಲ ಸ್ಥಾನಕ್ಕಾಗಿ ಬರೋಬ್ಬರಿ 20 ಕೋಟಿ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದೆ. ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ 13 ಕೋಟಿ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿದೆ. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ಕೋಟಿ ರೂಪಾಯಿ ನಗದು ಬಹುಮಾನಕ್ಕೆ ಭಾಜನವಾಗಿದೆ. ನಾಲ್ಕನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡಕ್ಕೆ 6.5 ಕೋಟಿ ರೂಪಾಯಿ ನಗದು ಬಹುಮಾನ ಸಿಕ್ಕಿದೆ.

ಈ ಬಾರಿ ಅತ್ಯಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಜಾಸ್ ಬಟ್ಲರ್ ಅವರಿಗೆ ಹದಿನೈದು ಲಕ್ಷ ರೂಪಾಯಿ ನಗದು ಬಹುಮಾನ. ಅತ್ಯಂತ ವಿಕೆಟ್ ಕಿತ್ತಿರುವ ಸ್ಪಿನ್ ಬೌಲರ್ ಆಗಿರುವ ರಾಜಸ್ಥಾನ ರಾಯಲ್ಸ್ ತಂಡದ ಯಜುವೇಂದ್ರ ಚಹಾಲ್ ರವರು ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದು ಹದಿನೈದು ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಈ ಬಾರಿ ಐಪಿಎಲ್ ನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲ್ಲಿಕ್ ರವರು ಪಡೆದಿದ್ದು 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. 12 ಲಕ್ಷ ರೂಪಾಯಿ ನಗದು ಬಹುಮಾನ ಹೊಂದಿರುವ ಅತ್ಯಂತ ಮೌಲ್ಯಯುತ ಪ್ಲೇಯರ್ ಆಗಿರುವ ಜಾಸ್ ಬಟ್ಲರ್ ರವರು ಪಡೆದುಕೊಂಡಿದ್ದಾರೆ.

ಅತ್ಯಂತ ಹೆಚ್ಚು ಸಿಕ್ಸ್ ಹಾಗೂ ಈ ಬಾರಿಯ ಐಪಿಎಲ್ ಸೀಸನ್ ನ ಗೇಮ್ ಚೇಂಜರ್ ಪ್ರಶಸ್ತಿಗೆ ತಲಾ 12 ಲಕ್ಷ ರೂಪಾಯಿಯನ್ನು ಆಟಗಾರರು ಪಡೆದುಕೊಂಡಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ರವರು ಸೂಪರ್ ಸ್ಟ್ರೈಕರ್ ಪ್ರಶಸ್ತಿಗೆ ಭಾಜನರಾಗಿದ್ದು ಬರೋಬ್ಬರಿ 15 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಅತಿಶೀಘ್ರದಲ್ಲೇ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿ ಆರಂಭವಾಗಲಿದೆ.