ಅಗತ್ಯ ಸಾಮರ್ಥ್ಯ ಇದ್ದರೂ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯ ಕೂಡ ಆಡದೇ ಮೂಲೆಗುಂಪಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?

ಅಗತ್ಯ ಸಾಮರ್ಥ್ಯ ಇದ್ದರೂ ಕೂಡ ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯ ಕೂಡ ಆಡದೇ ಮೂಲೆಗುಂಪಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ 2022 15ನೇ ಆವೃತ್ತಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯಾಟದ ನಂತರ ಗುಜರಾತ್ ತಂಡದ ಗೆಲುವಿನ ಮೂಲಕ ಅಂತ್ಯಗೊಂಡಿದೆ. ಈ ಬಾರಿ ಪ್ರತಿಯೊಂದು ಪಂದ್ಯವು ಕೂಡ ಐಪಿಎಲ್ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಮನೋರಂಜನೆ ಹಾಗೂ ರೋಚಕತೆಯನ್ನು ಕೂಡ ನೀಡಿತು ಎಂದರೆ ತಪ್ಪಾಗಲಾರದು. ಆದರೂ ಕೂಡ ಐಪಿಎಲ್ನಲ್ಲಿ 5 ಅತ್ಯಂತ ಪ್ರತಿಭಾನ್ವಿತ ಸ್ಟಾರ್ ಆಟಗಾರರಿಗೆ ಒಂದು ಪಂದ್ಯವನ್ನು ಆಡುವ ಅವಕಾಶ ಕೂಡ ಸಿಗಲಿಲ್ಲ ಎನ್ನುವ ವಿಚಾರ ಸಾಕಷ್ಟು ವಿಷಾದನೀಯ ವಾಗಿದ್ದು ಅವರು ಯಾರ್ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಮೊಹಮ್ಮದ್ ನಬಿ; ಆಫ್ಘಾನಿಸ್ತಾನ ತಂಡದ ಮಾಜಿ ಕಪ್ತಾನ ಹಾಗೂ ಆಲ್-ರೌಂಡರ್ ಆಗಿರುವ ಮೊಹಮ್ಮದ್ ನಬಿ ರವರು ಈ ಹಿಂದೆ ಐಪಿಎಲ್ ನಲ್ಲಿ ಹಲವಾರು ಬಾರಿ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿರುವುದು ಕೂಡ ಇದೆ. ಈ ಬಾರಿ ಒಂದು ಕೋಟಿ ರೂಪಾಯಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದ ಮೋಹಮ್ಮದ್ ನಬಿ ಅಂದ್ರೆ ರಸೆಲ್ ಹಾಗೂ ಸುನಿಲ್ ನಾರಾಯಣ್ ರವರು ಇದ್ದ ಕಾರಣದಿಂದಾಗಿ ತಂಡದಲ್ಲಿ ಆಲ್ರೌಂಡರ್ ವಿಭಾಗದಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವೂ ಕೂಡ ಸಿಗಲಿಲ್ಲ. ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ 4996 ರನ್ನುಗಳನ್ನು ಹಾಗೂ 302 ವಿಕೆಟ್ಗಳನ್ನು ಕಬಳಿಸಿರುವ ಸಾಧನೆಯನ್ನು ಈಗಾಗಲೇ ಮಾಡಿರುವ ಆಟಗಾರ ಈ ಬಾರಿ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಆಡದಿರುವುದು ನಿಜಕ್ಕೂ ಬೇಸರದ ವಿಚಾರ.

ಎರಡನೇದಾಗಿ ಲುಂಗಿ ಎನ್ಗಿಡಿ; ಸೌತ್ ಆಫ್ರಿಕಾ ಮೂಲದ ಆಟಗಾರ ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಟವನ್ನು ಆಡಿದ್ದರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರನ್ನು 50 ಲಕ್ಷ ರೂಪಾಯಿ ಖರೀದಿಸಿದ್ದರು ಕೂಡ ಒಂದೇ ಒಂದು ಪಂದ್ಯದಲ್ಲಿ ಇವರನ್ನು ಆಡಿಸಿರಲಿಲ್ಲ. ಇದು ನಿಜಕ್ಕೂ ಕೂಡ ಇವರ ಅಭಿಮಾನಿಗಳಿಗೆ ಬೇಸರವನ್ನು ತರಿಸಿತ್ತು. 14 ಐಪಿಎಲ್ ಪಂದ್ಯಗಳನ್ನು ಆಡಿ 25 ವಿಕೆಟ್ ಬೆಳೆಸಿರುವ ಸಾಧನೆಯನ್ನು ಈತ ಮಾಡಿದ್ದಾರೆ.

ಇಶಾನ್ ಪೋರೆಲ್; ದೇಸಿ ಕ್ರಿಕೆಟ್ನಲ್ಲಿ ಸಾಕಷ್ಟು ಅದ್ಭುತ ಕ್ರಿಕೆಟನ್ನು ಪ್ರದರ್ಶಿಸಿರುವ ಇಶಾನ್ ಪೋರೆಲ್ ರವರು ಕಳೆದ ಮೂರು ಸೀಸನ್ ಗಳಲ್ಲಿ ಕೂಡ ಪಂಜಾಬ್ ತಂಡದ ಪರವಾಗಿ ಆಡಿದ್ದಾರೆ. ಇನ್ನು ಈ ಬಾರಿ ಕೂಡ ಪಂಜಾಬ್ ತಂಡದ ಪರವಾಗಿ 25 ಲಕ್ಷಕ್ಕೆ ಮಾರಾಟವಾಗಿದ್ದಾರೆ. ಈಗಾಗಲೆ ತಂಡದಲ್ಲಿ ಹೆಚ್ಚಿನ ವೇಗಿಗಳು ಇದ್ದ ಕಾರಣದಿಂದಾಗಿ ತಂಡದಲ್ಲಿ ಆಡಲು ಇವರಿಗೆ ಅವಕಾಶ ಸಿಗಲಿಲ್ಲ. ಇನ್ನು ಇವರು ಭಾರತೀಯ ಕ್ರಿಕೆಟ್ ತಂಡದ ನೆಟ್ ಬೌಲರ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿನ್ನಿ ಹೋವೆಲ್; ಆಂಗ್ಲ ಮೂಲದ ಆಲ್-ರೌಂಡರ್ ಆಟಗಾರ ಆಗಿರುವ ಬಿನ್ನಿ ಹೋವೆಲ್ ರವರು ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದರು. ಇವರು ಕಳೆದ ವರ್ಷವಷ್ಟೇ ವಿದೇಶಿ ಕ್ರಿಕೆಟ್ ಲೀಗ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನವನ್ನು ನೀಡುವ ಮೂಲಕ ಸಾಕಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ತಂಡದಲ್ಲಿ ಒಂದು ಪಂದ್ಯವನ್ನು ಆಡಲು ಕೂಡ ಇವರಿಗೆ ಅವಕಾಶ ಸಿಗಲಿಲ್ಲ.

ಜೇಸೆನ್ ಬೆಹ್ರೇನ್ಡ್ರಾಫ್; ಆಸ್ಟ್ರೇಲಿಯ ಮೂಲದ ಆಟಗಾರ ಆಗಿರುವ ಈತ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ 25 ಲಕ್ಷ ರೂಪಾಯಿಗೆ ಸೇಲ್ ಆಗಿದ್ದರು. ಬಿಗ್ ಬಾಶ್ ಕ್ರಿಕೆಟ್ ಲೀಗ್ ನಲ್ಲಿ ಪಾರ್ಟ್ ಸ್ಕ್ರಾಚರ್ಸ್ ತಂಡದ ಪರವಾಗಿ ಅದ್ಭುತವಾಗಿ ಬೌಲಿಂಗ್ ಮಾಡಿರುವ ಈತ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಕೂಡ ಕಾಣಿಸಿಕೊಂಡಿಲ್ಲ ಮುಂದಿನ ಐಪಿಎಲ್ ನಲ್ಲಿ ಆರ್ಸಿಬಿ ತಂಡದಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಈ ಐದು ಪ್ರತಿಭಾನ್ವಿತ ಆಟಗಾರರು ಈ ಬಾರಿ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡಲು ಕೂಡ ಅವಕಾಶವನ್ನು ಗಿಟ್ಟಿಸಿಕೊಂಡಿಲ್ಲ.