ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಐಪಿಎಲ್ ಮುಗಿಯುತ್ತಿದ್ದಂತೆ ಆರಂಭವಾದ ಆಫ್ರಿಕಾ ಸರಣಿ ಲೆಕ್ಕಾಚಾರ. ಬಿಸಿಸಿಐ ಕಡೆಯಿಂದ ಮಹತ್ವದ ಘೋಷಣೆ. ಆಟಗಾರರು ಫುಲ್ ಕುಶ್. ಯಾಕೆ ಗೊತ್ತೇ??

110

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಈ ಬಾರಿಯ ಆವೃತ್ತಿಯನ್ನು ಮುಗಿಸಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಪಂದ್ಯಗಳನ್ನು ಈಗಾಗಲೇ ಮಾಡಿಕೊಳ್ಳಬೇಕಾಗಿದೆ. ಸದ್ಯಕ್ಕೆ ನೋಡುವುದಾದರೆ ಭಾರತೀಯ ಕ್ರಿಕೆಟ್ ತಂಡ ಐಪಿಎಲ್ ನಂತರ ತನ್ನ ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ಭಾರತ ದೇಶದಲ್ಲಿಯೇ ಸೌತ್ ಆಫ್ರಿಕಾ ವಿರುದ್ಧ ಆಡಲಿದೆ. ಹೌದು ಗೆಳೆಯರೆ ಸೌತ್ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡ ಆಡಲಿದೆ.

ಇದಾದ ನಂತರ ಇಂಗ್ಲೆಂಡ್ ಪ್ರವಾಸ ಸೇರಿದಂತೆ ಹಲವಾರು ಸರಣಿಗಳು ಭಾರತೀಯ ಕ್ರಿಕೆಟ್ ತಂಡದ ಮುಂದೆ ಕಾದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈ ಮಹಾಮಾರಿ ಕಾರಣದಿಂದಾಗಿ ಆಟಗಾರರು ಕೇವಲ ಐಪಿಎಲ್ ನಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೂಡ ಬಯೋ ಬಬಲ್ ನಲ್ಲಿ ಇರಬೇಕಾದಂತಹ ಪರಿಸ್ಥಿತಿಯಿತ್ತು. ಈ ಸಂದರ್ಭದಲ್ಲಿ ಆಟಗಾರರ ಮೇಲೆ ಸಾಮಾನ್ಯವಾಗಿ ಮಾನಸಿಕ ಒತ್ತಡವು ಕೂಡ ಬಿಡುತ್ತಿತ್ತು.

ಯಾಕೆಂದರೆ ಅಂತಹ ಕಟ್ಟುನಿಟ್ಟಿನ ವಾತಾವರಣದಲ್ಲಿ ಪಂದ್ಯದ ನಂತರ ಇರುವುದು ನಿಜಕ್ಕೂ ಕೂಡ ಮಾನಸಿಕವಾಗಿ ಸಾಕಷ್ಟು ಕಷ್ಟದ ಮನೋಭಾವವನ್ನು ಉಂಟುಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲವಾಗಿತ್ತು. ಆದರೆ ಈಗ ಬಿಸಿಸಿಐ ಹೊಸ ನಿಯಮವನ್ನು ಘೋಷಿಸಿದೆ. ಹೌದು ಗೆಳೆಯರೇ ಬಿಸಿಸಿಐ ನ ಕಾರ್ಯದರ್ಶಿಯಾಗಿರುವ ಜಯ್ ಶಾ ರವರು ಘೋಷಿಸಿರುವಂತೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಆಟಗಾರರಿಗೆ ಕಡ್ಡಾಯ ಕೋವಿ’ಡ್ ಪರೀಕ್ಷೆ ಮಾಡಲಾಗುತ್ತದೆ ಆದರೆ ಯಾವುದೇ ರೀತಿಯಲ್ಲಿ ಬಯೋ ಬಬಲ್ ಇರುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ಕಟ್ಟುನಿಟ್ಟಿನ ಬಯೋ ಬಬಲ್ ನಲ್ಲಿ ಆಟಗಾರರು ತಮ್ಮ ಮಾನಸಿಕ ಸಂತುಲನೆಯನ್ನು ಕಳೆದುಕೊಳ್ಳುವ ಅಗತ್ಯತೆ ಮೂಡಿಬರುವುದಿಲ್ಲ ಎಂದು ಹೇಳಬಹುದಾಗಿದೆ. ಬಿಸಿಸಿಐ ಘೋಷಿಸಿರುವ ಈ ಹೊಸ ನಿಯಮದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.