ಸೋತ ಬೆನ್ನಲ್ಲೇ ಲೆಕ್ಕಾಚಾರ ಆರಂಭಿಸಿತೇ ಆರ್ಸಿಬಿ. ತಂಡಕ್ಕೆ ಮೇಜರ್ ಸರ್ಜರಿ ಫಿಕ್ಸ್?? ತಂಡದಿಂದ ಹೊರಹಾಕುವ ಆಟಗಾರರು 6 ಯಾರ್ಯಾರು ಗೊತ್ತೇ??

ಸೋತ ಬೆನ್ನಲ್ಲೇ ಲೆಕ್ಕಾಚಾರ ಆರಂಭಿಸಿತೇ ಆರ್ಸಿಬಿ. ತಂಡಕ್ಕೆ ಮೇಜರ್ ಸರ್ಜರಿ ಫಿಕ್ಸ್?? ತಂಡದಿಂದ ಹೊರಹಾಕುವ ಆಟಗಾರರು 6 ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವ ಕನಸನ್ನು ನನಸು ಮಾಡುವಲ್ಲಿ ಒಂದು ಗೆಲುವಿನಿಂದ ವಂಚಿತವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಮುಂದಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೀಮ್ ಮ್ಯಾನೇಜ್ಮೆಂಟ್ ಆರು ಆಟಗಾರರನ್ನು ತಂಡದಿಂದ ಹೊರಕ್ಕೆ ಕಳಿಸಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹಾಗಿದ್ದರೆ ಆ ಆಟಗಾರರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಫಿನ್ ಆಲೆನ್; ಫಿನ್ ಆಲೆನ್ ರವರು ಕಳೆದ ಎರಡು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಳೆಯದಲ್ಲಿ ಇದ್ದಾರೆ. ಇವರು ತಂಡದಲ್ಲಿ ಇರುವುದಕ್ಕೆ ಮುಖ್ಯ ಕಾರಣ ತಂಡದ ಡೈರೆಕ್ಟರ್ ಆಗಿರುವ ಮೈಕ್ ಹೆಸೆನ್ ರವರ ಕಾರಣದಿಂದ ಎಂದು ಹೇಳಬಹುದು. ಇಬ್ಬರೂ ಕೂಡ ನ್ಯೂಜಿಲೆಂಡ್ ಮೂಲದವರಾಗಿದ್ದು ಅಲೆನ್ ರವರ ಆಟದ ಕುರಿತಂತೆ ಮೈಕ್ ಹೆಸೆನ್ ರವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಫಿನ್ ಆಲೆನ್ ರವರಿಗೆ ಸಾಕಷ್ಟು ಅವಕಾಶಗಳು ತಂಡದಲ್ಲಿ ಸಿಗುತ್ತಿಲ್ಲ ಹೀಗಾಗಿ ಮುಂದಿನ ವರ್ಷದಿಂದ ಅವರನ್ನು ತಂಡದಿಂದ ಹೊರಹಾಕುವುದು ಖಚಿತ ಎಂಬ ಮಾಹಿತಿ ದೊರಕುತ್ತಿದ್ದು ಹಲವಾರು ಐಪಿಎಲ್ ತಂಡಗಳು ಅಗ್ರೆಸ್ಸಿವ್ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಅನ್ನು ಹುಡುಕುತ್ತಿದ್ದಾರೆ ಅವರಿಗೆ ಫಿನ್ ಆಲೆನ್ ಉತ್ತಮ ಆಯ್ಕೆ ಎನ್ನಬಹುದಾಗಿದೆ.

ಡೇವಿಡ್ ವಿಲ್ಲಿ ಅಥವಾ ಜೇಸನ್ ಬೆಹ್ರೆನ್ಡ್ರೋಫ್; ಇವರಿಬ್ಬರ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿದೇಶಿ ಬೌಲರ್ ಆಗಿ ಜೋಷ್ ಹೆಝಲ್ ವುಡ್ ರವರು ಅತ್ಯುತ್ತಮವಾಗಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಇವರಿಬ್ಬರನ್ನು ಅಥವಾ ಇವರಿಬ್ಬರಲ್ಲಿ ಒಬ್ಬರನ್ನು ಮುಂದಿನ ಐಪಿಎಲ್ ನಲ್ಲಿ ಆರ್ಸಿಬಿ ತಂಡ ಕೈಬಿಡಲಿದೆ. ಅದರಲ್ಲೂ ಡೇವಿಡ್ ವಿಲ್ಲಿ ಕೇವಲ ಬೌಲಿಂಗ್ನಲ್ಲಿ ಮಾತ್ರವಲ್ಲದೇ ಮೂರು ಅಥವಾ ನಾಲ್ಕು ಇಲ್ಲವೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಅನ್ನು ಕೂಡ ಮಾಡಬಹುದಾದಂತಹ ಸಾಮರ್ಥ್ಯವನ್ನು ಹೊಂದಿದ್ದು ಬೇರೆ ಐಪಿಎಲ್ ತಂಡಗಳು ಇವರನ್ನು ಖಂಡಿತವಾಗಿ ಖರೀದಿಸಲು ಆಸಕ್ತಿ ತೋರಿಸಬಹುದಾಗಿದೆ.

ಕರಣ್ ಶರ್ಮಾ; ಕರಣ್ ಶರ್ಮಾ ರವರನ್ನು ಐಪಿಎಲ್ನಲ್ಲಿ ಚಾರ್ಮಿಂಗ್ ಆಟಗಾರ ಎನ್ನುವುದಾಗಿ ಕರೆಯಲಾಗುತ್ತಿದ್ದು ಇವರು ಇದುವರೆಗೂ ಆಡಿದ ತಂಡ ಐಪಿಎಲ್ ನಲ್ಲಿ ಹಲವಾರು ಬಾರಿ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಿದೆ ಎಂಬುದಾಗಿ ಹೇಳಲಾಗುತ್ತದೆ. ಆದರೆ ಈ ಬಾರಿ ಆರ್ಸಿಬಿ ತಂಡಕ್ಕೆ ಆಯ್ಕೆ ಆಗಿರುವ ಕರಣ್ ಶರ್ಮಾ ರವರಿಗೆ ಆಟವಾಡಲು ಅವಕಾಶವೇ ಸಿಗಲಿಲ್ಲ. ಆರ್ಸಿಬಿ ತಂಡದಲ್ಲಿ ವನಿಂದು ಹಸರಂಗ ಶಹಬಾಜ್ ಅಹಮದ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಇವರು ಇನ್ ವಿಭಾಗದಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡುತ್ತಿದ್ದು ಇವರ ಬದಲಿಗೆ ಕರಣ್ ಶರ್ಮ ರವರಿಗೆ ತಂಡದಲ್ಲಿ ಒಳಬರಲು ಅವಕಾಶ ಸಿಗುವ ಚಾನ್ಸೇ ಇಲ್ಲ. ಹೀಗಾಗಿ ಮುಂದಿನ ಐಪಿಎಲ್ ನಿಂದ ಇವರು ತಂಡದಿಂದ ಹೊರ ಹೋಗಬಹುದಾಗಿದೆ.

ಸಿದ್ದಾರ್ಥ್ ಕೌಲ್; ವಿರಾಟ್ ಕೊಹ್ಲಿ ರವರ ಅಂಡರ್-19 ತಂಡದ ಸಹ ಆಟಗಾರ ಆಗಿರುವ ಸಿದ್ಧಾರ್ಥ್ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇರುವಾಗ ಸಾಕಷ್ಟು ಉತ್ತಮ ಮಟ್ಟದ ಬೌಲಿಂಗ್ ಪ್ರದರ್ಶನವನ್ನು ನೀಡಿದರು ಆದರೆ ಈ ಬಾರಿ ಆರ್ಸಿಬಿ ತಂಡದಲ್ಲಿ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಒಂದು ಪಂದ್ಯದಲ್ಲಿ ಸಿರಾಜ್ ಅವರ ಬದಲಿಗೆ ಬೌಲಿಂಗ್ ಮಾಡಿದ ಸಿದ್ಧಾರ್ಥ್ ಸಾಕಷ್ಟು ದುಬಾರಿಯಾಗಿ ಕಾಣಿಸಿಕೊಂಡಿದ್ದರು ಹೀಗಾಗಿ ಖಂಡಿತವಾಗಿ ಅವರು ಮುಂದಿನ ವರ್ಷದಲ್ಲಿ ತಂಡದಲ್ಲಿ ಮುಂದುವರೆಯುವುದು ಸಂಪೂರ್ಣ ಅನುಮಾನ ಎನ್ನಬಹುದಾಗಿದೆ.

ಅನುಜ್ ರಾವತ್; ತಂಡದ ಆರಂಭಿಕ ಆಟಗಾರನಾಗಿ ಐಪಿಎಲ್ನ ಪ್ರಥಮಾರ್ಧದಲ್ಲಿ ಆಯ್ಕೆಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ಅನುಜ್ ರವತ್ ಒಂದೆರಡು ಪಂದ್ಯಗಳಲ್ಲಿ ಸಮಾಧಾನಕರ ಪ್ರದರ್ಶನವನ್ನು ನೀಡಿದರು. ಬರೋಬ್ಬರಿ ಎಂಟು ಪಂದ್ಯಗಳನ್ನು ಡುಪ್ಲೆಸಿಸ್ ನಾಯಕತ್ವದ ಟೀಮ್ ಮ್ಯಾನೇಜ್ಮೆಂಟ್ ಅನುಜ್ ರಾವತ್ ರವರಿಗೆ ಆಡಲು ನೀಡಿತ್ತು. ಆದರೆ ಕೇವಲ 8 ಪಂದ್ಯಗಳಿಂದ ಅನುಜ್ ರಾವತ್ ಗಳಿಸಿದ್ದು ಕೇವಲ 129 ರನ್ನುಗಳನ್ನು ಮಾತ್ರ. ಅವರ ಬದಲಿಗೆ ತಂಡದಲ್ಲಿ ಕಾಣಿಸಿಕೊಂಡ ರಜತ್ ಪಾಟಿದಾರ್ ಈಗ ಖಂಡಿತವಾಗಿ ಖಾಯಂ ಆಟಗಾರನಾಗಿ ಮುಂದಿನ ಸೀಸನ್ ನಲ್ಲಿಯೂ ಕೂಡ ಮುಂದುವರೆಯುವುದು ಪಕ್ಕಾ ಆಗಿದೆ. ಹೀಗಾಗಿ ಅನುಜ್ ರಾವತ್ ರವರಿಗೆ ತಂಡದಿಂದ ಗೇಟ್ ಪಾಸ್ ಸಿಗಬಹುದಾಗಿದೆ.

ಮೊಹಮ್ಮದ್ ಸಿರಾಜ್; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇವರಿಗೆ ಸಿಕ್ಕ ಅವಕಾಶ ಯಾರಿಗೂ ಕೂಡ ಸಿಕ್ಕಿಲ್ಲ ಎಂದು ಹೇಳಬಹುದಾಗಿದೆ. ಪ್ರಾರಂಭಿಕ ವರ್ಷಗಳಿಂದಲೂ ಕೂಡ ಸಿರಾಜ್ ರವರು ಕಳಪೆ ಬೌಲಿಂಗ್ ಗೆ ಹೆಸರುವಾಸಿಯಾಗಿದ್ದರು. ಇವರಿಗೆ ಹಲವಾರು ಅವಕಾಶ ನೀಡಿದರೂ ಕೂಡ ಈ ಬಾರಿ ಸಂಪೂರ್ಣವಾಗಿ ಕಳಪೆ ಬೌಲಿಂಗ್ ಪ್ರದರ್ಶನವನ್ನು ತೋರಿಸಿದ್ದಾರೆ. ಅದರಲ್ಲೂ ಈ ಬಾರಿ ಅವರನ್ನು ಚಹಾಲ್ ರವರ ಬದಲಿಗೆ 9 ಕೋಟಿ ರೂಪಾಯಿ ನೀಡಿ ರಿಟೈನ್ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಐಪಿಎಲ್ ನಲ್ಲಿ ಅತ್ಯಂತ ಕಳಪೆ ಬೌಲರ್ ಸಾಲಿನಲ್ಲಿ ಮೊಹಮ್ಮದ್ ಸಿರಾಜ್ ರವರು ಪ್ರಥಮ ಸ್ಥಾನದಲ್ಲಿ ಕಾಣಸಿಗುತ್ತಾರೆ. ಹೀಗಾಗಿ ಇವರನ್ನು ಕೂಡ ಮುಂದಿನ ಐಪಿಎಲ್ ನಿಂದ ತಂಡ ಹೊರ ಹಾಕಬಹುದಾದ ಸಾಧ್ಯತೆ ದಟ್ಟವಾಗಿದೆ.