ರನ್ ಗಳಿಸುತ್ತಿದ್ದರೂ ಕೂಡ ಇಲ್ಲಾ ನೆಮ್ಮದಿ, ಒಂದು ಕಡೆ ಸೋಲು ಮತ್ತೊಂದು ಕಡೆ ರಾಹುಲ್ ರವರಿಗೆ ಶಾಕ್ ನೀಡುತ್ತಿದೆ ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಏನು ಗೊತ್ತೇ??
ರನ್ ಗಳಿಸುತ್ತಿದ್ದರೂ ಕೂಡ ಇಲ್ಲಾ ನೆಮ್ಮದಿ, ಒಂದು ಕಡೆ ಸೋಲು ಮತ್ತೊಂದು ಕಡೆ ರಾಹುಲ್ ರವರಿಗೆ ಶಾಕ್ ನೀಡುತ್ತಿದೆ ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಎಲಿಮಿನೇಟರ್ ಪಂದ್ಯದ ಕುರಿತಂತೆ ನಿಮಗೆಲ್ಲ ತಿಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ರಾಹುಲ್ ನಾಯಕತ್ವದ ಬಲಿಷ್ಠ ತಂಡದ ಎದುರು 14 ರನ್ನುಗಳ ಗೆಲುವು ಸಾಧಿಸುವ ಮೂಲಕ ಕ್ವಾಲಿಫೈಯರ್ 2 ಹಂತಕ್ಕೆ ತೇರ್ಗಡೆ ಆಗಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ವಿಕೆಟ್ ನ್ನು ಡುಪ್ಲೆಸಿಸ್ ರವರ ರೂಪದಲ್ಲಿ ಕಳೆದುಕೊಳ್ಳುವ ಮೂಲಕವೂ ಕೂಡ ರಜತ್ ಪಾಟಿದಾರ್ ರವರ ಶತಕ ಹಾಗೂ ದಿನೇಶ್ ಕಾರ್ತಿಕ್ ರವರ ಅಮೋಘ ಆಟದಿಂದಾಗಿ 207 ರನ್ನುಗಳನ್ನು 20 ಓವರ್ಗಳಲ್ಲಿ ಗಳಿಸಲು ಸಾಧ್ಯವಾಯಿತು.
208 ರನ್ನುಗಳ ಗುರಿಯನ್ನು ಬೆನ್ನತ್ತಿದ ಲಕ್ನೋ ತಂಡಕ್ಕೆ ಕ್ವಿಂಟನ್ ಡಿ ಕಾಕ್ ಅವರ ಆರಂಭಿಕ ಆಘಾತ ಆರಂಭದಲ್ಲೇ ಅಡ್ಡಿಯಾಗುತ್ತದೆ. ಕೆ ಎಲ್ ರಾಹುಲ್ ರವರು ಲಕ್ನೋ ತಂಡದ ಪರವಾಗಿ ಎಲಿಮಿನೇಟರ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ನುಗಳನ್ನು ಗಳಿಸಿದ್ದಾರೆ ನಿಜ, ಆದರೆ ಅವರು ಇದನ್ನು ವೇಗವಾಗಿ ಆಡಬಹುದು ಆಗಿತ್ತಾದರೂ ಕೂಡ ನಿಧಾನವಾಗಿ ಆಡುವ ಮೂಲಕ ತಂಡದ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಹೇಳಬಹುದಾಗಿದೆ. ಈಗಾಗಲೇ ಜಾಸ್ ಬಟ್ಲರ್ ರವರನ್ನು ಬಿಟ್ಟರೆ ಈ ಬಾರಿಯ ಟೂರ್ನಮೆಂಟಿನಲ್ಲಿ ಅತ್ಯಂತ ಹೆಚ್ಚು ರನ್ನುಗಳಿಸಿರುವ ಆಟಗಾರ ಎಂದರೆ ಅದು ಕೆ ಎಲ್ ರಾಹುಲ್.
ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಅವರು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ತಂಡದ ಸೋಲಿಗೆ ಕಾರಣವಾಯಿತು ಎಂದು ಹೇಳಬಹುದಾಗಿದೆ. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಕೆಲ ದಿಗ್ಗಜ ಕ್ರಿಕೆಟಿಗರು ಕೂಡ ಕೆ ಎಲ್ ರಾಹುಲ್ ರವರ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು, ಈ ರೀತಿ ಆಟವಾಡಿದರೆ ಮುಂದೆ ಭಾರತ ತಂಡಕ್ಕೆ ತೊಂದರೆಯಾಗುತ್ತದೆ, ಪಂದ್ಯವನ್ನು ಗೆಲ್ಲಬೇಕು ಎಂದ ವೇಗವಾಗಿ ರನ್ ಗಳಿಸಬೇಕು ಎಂದು ರಾಹುಲ್ ರವರಿಗೆ ಸಲಹೆ ನೀಡಿದ್ದಾರೆ. ಪಂದ್ಯ ಮುಗಿದ ನಂತರ ಮಾತನಾಡಿದ್ದ ಕೆಎಲ್ ರಾಹುಲ್ ರವರು ನಾವು ಮೊದಲ ಸೀಸನ್ ನಲ್ಲಿಯೇ ಹೊಸ ತಂಡವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಕೊನೆಯ ಹಂತದಲ್ಲಿ ಎಡವಿದ್ದೇವೆ ಈ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಸೀಸನ್ನಲ್ಲಿ ಇನ್ನಷ್ಟು ಶಕ್ತಿಯುತವಾಗಿ ಕಂಬ್ಯಾಕ್ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ತಂಡದ ಯುವ ಬೌಲರ್ ಆಗಿರುವ ಮೋಸಿನ್ ಖಾನ್ ರವರ ಕುರಿತಂತೆ ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.