ರಾಜ ಪಾಟಿದಾರ್ ಅವರ ಮೇಲೆ ನಂಬಿಕೆ ಇಟ್ಟು ಬೆಳೆಸಿದ್ದು ಯಾರು ಗೊತ್ತೆ?? ಮಹಾ ನಾಯಕ ಯಾರಂತೆ ಗೊತ್ತೇ?? ಆತನಿಂದಲೇ ರಜತ್ ಇಂದು ಸ್ಟಾರ್ ಆಗಿದ್ದು.
ರಾಜ ಪಾಟಿದಾರ್ ಅವರ ಮೇಲೆ ನಂಬಿಕೆ ಇಟ್ಟು ಬೆಳೆಸಿದ್ದು ಯಾರು ಗೊತ್ತೆ?? ಮಹಾ ನಾಯಕ ಯಾರಂತೆ ಗೊತ್ತೇ?? ಆತನಿಂದಲೇ ರಜತ್ ಇಂದು ಸ್ಟಾರ್ ಆಗಿದ್ದು.
ನಮಸ್ಕಾರ ಸ್ನೇಹಿತರೇ ಲಕ್ನೋ ಪಂದ್ಯದ ಮುನ್ನ ರಜತ್ ಪಾಟಿದಾರ್ ಅವರ ಹೆಸರನ್ನು ಕೇಳಿದ್ದು ಕೆಲವೇ ಮಂದಿ ಆದರೆ ಲಕ್ನೋ ತಂಡದ ವಿರುದ್ಧ ಶತಕವನ್ನು ಬಾರಿಸಿದ ಮೇಲೆ ಇಡೀ ಕ್ರಿಕೆಟ್ ಜಗತ್ತಿಗೆ ಅಜತ್ ಪಾಟಿದಾರ್ ಅವರ ಪರಿಚಯ ಆಗಿದೆ ಎಂದರೆ ತಪ್ಪಾಗಲಾರದು. ತಂಡದ ಬದಲಿ ಆಟಗಾರರಾಗಿದ್ದ ರಜತ್ ಪಾಟಿದಾರ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಯಾರೂ ಕೂಡ ಊಹಿಸಿರಲೂ ಕೂಡ ಸಾಧ್ಯವಿಲ್ಲ. ಹೌದು ಗೆಳೆಯರೇ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡದ ಎದುರು ಅಜೇಯ ಶತಕವನ್ನು ಬಾರಿಸುವ ಮೂಲಕ ಆರ್ಸಿಬಿ ತಂಡದ ಎಲಿಮಿನೇಟರ್ ಪಂದ್ಯದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ ಎಂದು ಹೇಳಬಹುದಾಗಿದೆ.
ಭಾರತದ ಕ್ರಿಕೆಟ್ ಕಾಶಿ ಆಗಿರುವ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ರಜತ್ ಪಾಟಿದಾರ್ ಅವರು ಬರೋಬ್ಬರಿ 112 ರನ್ನುಗಳನ್ನು ಕೇವಲ 47 ಎಸೆತಗಳನ್ನು ಮುಂದೆ ಬಾರಿಸಿದ್ದಾರೆ. ಇನ್ನು ಇಂದು ಆರ್ಸಿಬಿ ತಂಡ ಈ ಕಾರಣಕ್ಕಾಗಿಯೇ ಕ್ವಾಲಿಫೈಯರ್ 2 ಪಂದ್ಯವನ್ನು ರಾಜಸ್ತಾನ ರಾಯಲ್ಸ್ ತಂಡದ ಎದುರು ಆಡಲು ಸಾಧ್ಯವಾಗಿರುವುದು. ಕಳೆದ ಆವೃತ್ತಿಯಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಲು ಅವಕಾಶ ಪಡೆದುಕೊಂಡಿದ್ದ ರಜತ್ ಪಾಟಿದಾರ್ ಅವರು ಈ ಬಾರಿ ತಂಡದ ಸ್ಟಾರ್ ಆಟಗಾರ ನಾಗಿ ಟೂರ್ನಿಯುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ತಂಡಕ್ಕೆ ಅವರನ್ನು ಆಟಗಾರನಾಗಿ ಸೇರಿಸಿಕೊಂಡಿರಲಿಲ್ಲ.
ನವನೀತ ಸಿಸೋಡಿಯಾ ಅವರು ಇಂಜುರಿಂದ ಹೊರಹೋಗಿದ್ದ ಕಾರಣದಿಂದಾಗಿ ರಜತ್ ಪಾಟಿದಾರ್ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಬದಲಿ ಆಟಗಾರನಾಗಿ ಸೇರಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಮೇಲೆ ನಂಬಿಕೆ ಇರಿಸಿ ಬೆಂಬಲಿಸಿದ್ದಕ್ಕಾಗಿ ಹಿರಿಯ ಆಟಗಾರನೊಬ್ಬನನ್ನು ಸ್ಮರಿಸಿ ಧನ್ಯವಾದಗಳು ತಿಳಿಸಿದ್ದಾರೆ. ಹೌದು ಗೆಳೆಯರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ರಜತ್ ಪಾಟಿದಾರ್ ಅವರು ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ವಿರಾಟ್ ಕೊಹ್ಲಿ ನಿಮಗೆ ಧನ್ಯವಾದಗಳು ಎಂಬುದಾಗಿ ಹೇಳಿ ಕೊಂಡಿದ್ದಾರೆ, . ಇನ್ನು ಕೊಹ್ಲಿ ರವರು ಕೂಡ ಒತ್ತಡದ ಸಂದರ್ಭದಲ್ಲಿ ಇಂತಹ ಅತ್ಯುತ್ತಮ ಇನ್ನಿಂಗ್ಸನ್ನು ಹಾಗೂ ನೆಕ್ಸ್ಟ್ ಲೆವೆಲ್ ಬ್ಯಾಟಿಂಗ್ ಅನ್ನು ರಜತ್ ಪಾಟಿದಾರ್ ಅವರಿಂದ ನಮಗೆ ನೋಡಲು ಸಾಧ್ಯವಾಯಿತು ಎಂಬುದಾಗಿ ಹೊಗಳಿದ್ದಾರೆ.