ಹರ್ಷಲ್ ಪ್ರದರ್ಶನ ನೋಡಿ ಹರಾಜಿನ ಬೆಲೆ ಕುರಿತು ವಿವರಣೆ ನೀಡಿದ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಹರ್ಷಲ್ ರವರಿಗೆ ಎಷ್ಟು ಕೋಟಿ ಕೊಡಬೇಕಂತೆ ಗೊತ್ತೇ?

ಹರ್ಷಲ್ ಪ್ರದರ್ಶನ ನೋಡಿ ಹರಾಜಿನ ಬೆಲೆ ಕುರಿತು ವಿವರಣೆ ನೀಡಿದ ಸೆಹ್ವಾಗ್ ಹೇಳಿದ್ದೇನು ಗೊತ್ತೇ?? ನಿಜಕ್ಕೂ ಹರ್ಷಲ್ ರವರಿಗೆ ಎಷ್ಟು ಕೋಟಿ ಕೊಡಬೇಕಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ತಂಡದ ವಿರುದ್ಧ ಸಾಧಿಸಿರುವ ರೋಚಕ ಗೆಲುವಿನ ಕುರಿತಂತೆ ಪ್ರತಿಯೊಬ್ಬರು ಕೂಡ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ನಿಜಕ್ಕೂ ಕೂಡ ಈ ಪಂದ್ಯ ಎಲಿಮಿನೇಟರ್ ಸಂದರ್ಭದಲ್ಲಿ ಇಷ್ಟೊಂದು ರೋಚಕವಾಗಿ ಸಾಗಿ ಬರುತ್ತಿದೆ ಎಂಬುದಾಗಿ ಯಾರು ಕೂಡ ಊಹಿಸಿರಲಿಲ್ಲ. ಹೌದು ಗೆಳೆಯರೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಆಘಾತವನ್ನು ಪಡೆದುಕೊಂಡರು ಸಹ ರಜತ್ ಪಾಟಿದಾರ್ ರವರ ಅಜೇಯ ಶತಕ ಹಾಗೂ ದಿನೇಶ್ ಕಾರ್ತಿಕ್ ರವರ ಅತ್ಯಂತ ವೇಗದ ಬ್ಯಾಟಿಂಗ್ ಸಹಾಯದಿಂದಾಗಿ 207 ರನ್ನುಗಳನ್ನು ಗಳಿಸಲು ಶಕ್ತವಾಯಿತು.

ಇನ್ನು 208 ರನ್ನುಗಳ ಗುರಿಯನ್ನು ಬೆನ್ನತ್ತಲು ಪ್ರಾರಂಭಿಸಿದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಕೊನೆಗೂ 14 ರನ್ನುಗಳ ಸೋಲನ್ನು ಒಪ್ಪಿಕೊಳ್ಳಲೇಬೇಕಾಯಿತು. ನಿಜಕ್ಕೂ ಕೂಡ ಕೊನೆಯತನಕವೂ ಕೂಡ ಲಕ್ನೋ ಹಾಗೂ ಆರ್ಸಿಬಿ ತಂಡಗಳ ನಡುವಿನ ಪಂದ್ಯ ಅಭಿಮಾನಿಗಳ ಹೃದಯದ ಬಡಿತವನ್ನು ನಿಲ್ಲಿಸುವ ಹಾಗೆ ಮಾಡಿತ್ತು ಎಂದರೆ ತಪ್ಪಾಗಲಾರದು. ಅದರಲ್ಲೂ ಈ ಪಂದ್ಯ ಗೆಲ್ಲುವಲ್ಲಿ ಆರ್ಸಿಬಿ ಬೌಲರ್ ಹರ್ಷಲ್ ಪಟೇಲ್ ರವರ ಬೌಲಿಂಗ್ ಕರಾಮತ್ತು ಚೆನ್ನಾಗಿತ್ತು ಎಂದರೆ ತಪ್ಪಾಗಲಾರದು‌. ಹೌದು ಗೆಳೆಯರೆ ಮೊದಲ ಎರಡು ಓವರ್ ಗಳನ್ನು ಕೇವಲ 8 ರನ್ನುಗಳ ಒಳಗೆ ಅಂದರೆ ಪ್ರತಿ ಓವರ್ಗೆ 4 ರನ್ನು ಗಳಂತೆ ಹರ್ಷಲ್ ಪಟೇಲ್ ರವರು ನೀಡಿದ್ದರು. ದೀಪಕ್ ಕೂಡಾ ಕೆ ಎಲ್ ರಾಹುಲ್ ಮಾರ್ಕಸ್ ಸ್ಟೊಯಿನಿಸ್ ಅವರಂತಹ ದೊಡ್ಡ ಹಿಟ್ಟರ್ ಗಳಿದ್ದರೂ ಕೂಡ ಹರ್ಷಲ್ ಪಟೇಲ್ ರವರು ಹೆಚ್ಚು ರನ್ನು ನೀಡಲಿಲ್ಲ.

ಮೂರನೇ ಓವರ್ನಲ್ಲಿ ಕೇವಲ 5 ರನ್ನುಗಳನ್ನು ಮಾತ್ರ ಬಿಟ್ಟುಕೊಟ್ಟರು. ಈ ಸಂದರ್ಭದಲ್ಲಿ ಸ್ಟೋಯ್ನೀಸ್ ಅವರನ್ನು ಕೂಡ ಔಟ್ ಮಾಡುತ್ತಾರೆ. ಕೊನೆಯ ಓವರ್ ನಲ್ಲಿ 24 ರನ್ನುಗಳು ಬೇಕಾಗಿದ್ದ ಸಂದರ್ಭದಲ್ಲಿ ಕೇವಲ 9 ರನ್ನುಗಳನ್ನು ಮಾತ್ರ ನೀಡುತ್ತಾರೆ. ಈ ಮೂಲಕ ತಂಡ 14 ರನ್ನುಗಳಿಂದ ಗೆಲ್ಲಲು ಸಹಾಯಕವಾಗುತ್ತಾರೆ. ಇನ್ನು ಹರ್ಷಲ್ ಪಟೇಲ್ ರವರ ಕುರಿತಂತೆ ಮಾತನಾಡುತ್ತಾ ವೀರೇಂದ್ರ ಸೆಹವಾಗ್ ರವರು ಅವರನ್ನು ಈ ಬಾರಿ ತಂಡ 10.75 ಕೋಟಿ ರೂಪಾಯಿ ಖರೀದಿಸಿದೆ ಆದರೆ ಅವರ ನಿಜವಾದ ಬೆಲೆ 14ರಿಂದ 15 ಕೋಟಿ ರೂಪಾಯಿ ಎಂಬುದಾಗಿ ಹೊಗಳಿದ್ದಾರೆ. ಆರ್ಸಿಬಿ ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ಅಷ್ಟರಮಟ್ಟಿಗೆ ಮೌಲ್ಯವನ್ನು ಹರ್ಷಲ್ ಪಟೇಲ್ ರವರು ನೀಡುತ್ತಾರೆ ಎಂಬುದಾಗಿ ಕೂಡ ಹೇಳಿದ್ದಾರೆ. ಸೆಹ್ವಾಗ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.