ಈ ಬಾರಿ ಇಲ್ಲ, ಮುಂದಿನ ಬಾರಿ ಮಿಸ್ ಇಲ್ಲ, ಮುಂದಿನ ಐಪಿಎಲ್ ನಲ್ಲಿ ವಾಪಸ್ಸು ಬರಲಿರುವ ಟಾಪ್ 5 ಕ್ರಿಕೆಟ್ ಆಟಗಾರರು ಯಾರ್ಯಾರು ಗೊತ್ತೇ??

ಈ ಬಾರಿ ಇಲ್ಲ, ಮುಂದಿನ ಬಾರಿ ಮಿಸ್ ಇಲ್ಲ, ಮುಂದಿನ ಐಪಿಎಲ್ ನಲ್ಲಿ ವಾಪಸ್ಸು ಬರಲಿರುವ ಟಾಪ್ 5 ಕ್ರಿಕೆಟ್ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನೇನು ಇದೇ ಮೇ 29ಕ್ಕೆ ಫೈನಲ್ ನಡೆಯುವ ಮೂಲಕ ಈ ಬಾರಿಯ ಐಪಿಎಲ್ ಗೆ ತೆರೆ ಬೀಳಲಿದೆ. ನಿಮಗೆ ಗೊತ್ತಿರುವ ಹಾಗೆ ಈ ಬಾರಿ ಹಲವಾರು ಆಟಗಾರರು ಮೆಗಾ ಹರಾಜಿನಲ್ಲಿ ಸೇಲ್ ಆಗಿರಲಿಲ್ಲ ಹಾಗೂ ಇನ್ನು ಕೆಲವರು ಈ ಬಾರಿ ಐಪಿಎಲ್ ಗೆ ತಮ್ಮ ನಾಮನಿರ್ದೇಶನವನ್ನೇ ಮಾಡಿಲ್ಲ. ಹೀಗಾಗಿ ಮುಂದಿನ ಐಪಿಎಲ್ ಅಂದರೆ 2023 ರ ಐಪಿಎಲ್ ನಲ್ಲಿ ಕಂಬ್ಯಾಕ್ ಮಾಡಲಿರುವ 5 ಸ್ಟಾರ್ ಕ್ರಿಕೆಟಿಗರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಸುರೇಶ್ ರೈನ; ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಅವರು ಆರಂಭದಿಂದಲೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರು ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಈ ಬಾರಿ ಅಂಬಾಟಿ ರಾಯ್ಡು ರವರ ನಿವೃತ್ತಿಯಲ್ಲಿ ಗೊಂದಲ ಮಹೇಂದ್ರ ಸಿಂಗ್ ಧೋನಿ ರವೀಂದ್ರ ಸಿಂಗ್ ಜಡೇಜಾ ಹಾಗೂ ಮ್ಯಾನೇಜ್ಮೆಂಟ್ ನಡುವೆ ತಂಡದ ನಾಯಕತ್ವದ ನಡುವಿನ ಗೊಂದಲ ಹೀಗೆ ಹಲವಾರು ಸಮಸ್ಯೆಗಳಿದ್ದು ಮುಂದಿನ ಸೀಸನ್ನಲ್ಲಿ ಸುರೇಶ್ ರೈನ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಜೋಪ್ರಾ ಅರ್ಚರ್; ಈ ಬಾರಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಜೋಪ್ರಾ ಅರ್ಚರ್ ರವರನ್ನು ಬರೋಬ್ಬರಿ 8 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಈ ವರ್ಷ ಅವರಿಗೆ ಇಂಜುರಿ ಕಾರಣದಿಂದಾಗಿ ಐಪಿಎಲ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ಮಾಡಿ ಖಂಡಿತವಾಗಿ ಜೋಪ್ರಾ ಅರ್ಚರ್ ರವರು ಮುಂಬೈ ಇಂಡಿಯನ್ಸ್ ಜರ್ಸಿಯಲ್ಲಿ ಕಾಣಿಸಿಕೊಳ್ಳುವುದು ನಿಶ್ಚಿತ ಎಂಬುದಾಗಿ ಹೇಳಲಾಗುತ್ತಿದೆ. ಕೇವಲ ಬ್ಯಾಟ್ಸ್ಮನ್ ಮಾತ್ರವಲ್ಲದೆ ಪರಿಣಾಮಕಾರಿ ಬೌಲಿಂಗ್ ಕೂಡ ಮಾಡುವ ಮೂಲಕ ಪರ್ಫೆಕ್ಟ್ ಆಲ್ರೌಂಡರ್ ಆಗಿದ್ದಾರೆ.

ಎಬಿ ಡಿವಿಲಿಯರ್ಸ್; 2011 ರಿಂದ ಪ್ರಾರಂಭಿಸಿ ಕಳೆದ ಸೀಸನ್ ವರೆಗೂ ಕೂಡ ಎಬಿ ಡಿವಿಲಿಯರ್ಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಭಾಗವಾಗಿ ಕಾಣಿಸಿಕೊಂಡಿದ್ದಾರೆ. ಏಲಿಯನ್ ಹಾಗೂ ಮಿಸ್ಟರ್ 360° ಎಂಬುದಾಗಿ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಎಬಿ ಡಿವಿಲಿಯರ್ಸ್ ರವರು ಮುಂದಿನ ವರ್ಷ ತಂಡದ ಜೊತೆಗೆ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ವಿರಾಟ್ ಕೊಹ್ಲಿ ಅವರು ಭರವಸೆಯ ಮಾತುಗಳನ್ನು ಆಡಿದ್ದಾರೆ. ಆದರೆ ಯಾವ ಜವಾಬ್ದಾರಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಇನ್ನೂ ಕೂಡ ಗೌಪ್ಯವಾಗಿಯೇ ಉಳಿದುಕೊಂಡಿದೆ.

ಮಾರ್ಕ್ ವುಡ್; ಇಂಗ್ಲೆಂಡ್ ಮೂಲದ ಪವರ್ಫುಲ್ ವೇಗಿ ಮಾರ್ಕ್ ವುಡ್ ರವರನ್ನು ಲಕ್ನೋ ತಂಡ ಬರೋಬ್ಬರಿ 7.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಮೊಣಕೈ ಇಂಜುರಿ ಯಿಂದಾಗಿ ಇವರು ಈ ಬಾರಿ ಐಪಿಎಲ್ ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಆದರೆ ಮುಂದಿನ ಬಾರಿ ಖಂಡಿತವಾಗಿ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುವುದನ್ನು ಸಿದ್ಧವಾಗಿದ್ದೇನೆ ಎಂಬುದಾಗಿ ಮಾರ್ಕ್ ವುಡ್ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಸ್ ಗೇಲ್; ಈ ಬಾರಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ರವರು ಐಪಿಎಲ್ ನ ಹರಾಜಿನಲ್ಲಿ ತಮ್ಮ ಹೆಸರನ್ನು ತಾವು ಹಾಕಿಕೊಂಡಿರಲಿಲ್ಲ. ಇದರಿಂದಾಗಿ ಐಪಿಎಲ್ ಅಭಿಮಾನಿಗಳು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು. ಇತ್ತೀಚಿಗಷ್ಟೇ ಕ್ರಿಸ್ ಗೇಲ್ ರವರು ಸಂದರ್ಶನವೊಂದರಲ್ಲಿ ಈಗಾಗಲೇ ನಾನು ಐಪಿಎಲ್ ನಲ್ಲಿ ಪಂಜಾಬ್ ಹಾಗೂ ಬೆಂಗಳೂರು ತಂಡದ ಪರವಾಗಿ ಆಡಿದ್ದೇನೆ. ಮುಂದಿನ ಐಪಿಎಲ್ ನಲ್ಲಿ ನಾನು ವಾಪಸಾದರೆ ಇವೆರಡು ತಂಡಗಳ ಪರವಾಗಿ ಆಟವಾಡಿ ಕಪ್ ಗೆಲ್ಲುವ ಕನಸನ್ನು ಹೊಂದಿದ್ದೇನೆ ಎಂಬುದಾಗಿ ಕೆರಿಬಿಯನ್ ದೈತ್ಯ ಹೇಳಿಕೊಂಡಿದ್ದಾರೆ. ಮುಂದಿನ ಐಪಿಎಲ್ ನಲ್ಲಿ ಯಾರೆಲ್ಲಾ ಕಂಬ್ಯಾಕ್ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.