ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಮಾತನಾಡಿದ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದೇನು ಗೊತ್ತಾ?? ಇನ್ನೇನಿದ್ದರೂ ನಮ್ಮದೇ ಆಟ ಎಂದದ್ದು ಯಾಕೆ ಗೊತ್ತೇ?

ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಮಾತನಾಡಿದ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದೇನು ಗೊತ್ತಾ?? ಇನ್ನೇನಿದ್ದರೂ ನಮ್ಮದೇ ಆಟ ಎಂದದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಟಾಟಾ ಐಪಿಎಲ್ 2022 ರ ಲೀಗ್ ಹಂತ ಮುಗಿದಿದ್ದು ಇನ್ನೇನು ಪ್ಲೇಆಫ್ ಹಂತಗಳು ಪ್ರಾರಂಭವಾಗಲಿವೆ. ಕೊನೆಯ ಕ್ಷಣದವರೆಗೂ ಕೂಡ ಈ ಬಾರಿಯ ಐಪಿಎಲ್ ಸಾಕಷ್ಟು ರೋಚಕ ಕ್ಷಣಗಳನ್ನು ಸಾಕ್ಷಿಕರಿಸಿಕೊಂಡಿದೆ. ಇನ್ನು ಈ ಬಾರಿಯ ಐಪಿಎಲ್ ಪಾಯಿಂಟ್ಸ್ ಟೇಬಲ್ ನೋಡುವುದಾದರೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಎರಡನೇ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಕಾಣಿಸಿಕೊಂಡಿದೆ. ಹೀಗಾಗಿ ಇವೆರಡು ತಂಡಗಳು ಕ್ವಾಲಿಫೈಯರ್ 1 ಅಲ್ಲಿ ಪರಸ್ಪರ ಸೆಣಸಾಡಲಿದೆ ಗೆದ್ದ ತಂಡ ನೇರವಾಗಿ ಫೈನಲಿಗೆ ತಲುಪಲಿದ್ದು ಸೋತ ತಂಡ ಕ್ವಾಲಿಫೈಯರ್ 2ರಲ್ಲಿ ಕಾಣಿಸಿಕೊಳ್ಳಲಿದೆ.

3 ಹಾಗೂ 4ನೇ ಸ್ಥಾನಗಳಲ್ಲಿರುವ ಲಕ್ನೋ ಹಾಗೂ ಆರ್ಸಿಬಿ ತಂಡಗಳು ಮೇ 25ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಪರಸ್ಪರ ಸೆಣಸಾಡಲಿವೆ. ಇದರಲ್ಲಿ ಗೆದ್ದು ತನ್ನ ಕ್ವಾಲಿಫೈಯರ್ 2 ರಲ್ಲಿ ಇರುವಂತಹ ತಂಡವನ್ನು ಎದುರಿಸಲಿದ್ದು ಇವರಲ್ಲಿ ಗೆದ್ದ ತಂಡ ಫೈನಲ್ ಹಂತವನ್ನು ತಲುಪಲಿವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಗುಜರಾತ್ ರಾಜಸ್ಥಾನ್ ಹಾಗೂ ಲಕ್ನೋ ತಂಡಗಳು ಸುಲಭವಾಗಿ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗಿದ್ದವು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಮುಂಬೈ ಹಾಗೂ ಡೆಲ್ಲಿ ತಂಡದ ನಡುವಿನ ಪಂದ್ಯ ನಿರ್ಣಾಯಕವಾಗಿತ್ತು.

ಪರೋಕ್ಷವಾಗಿ ಮುಂಬೈ ತಂಡ ಡೆಲ್ಲಿ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿ ಅವಕಾಶವನ್ನು ನೀಡಿದೆ ಎಂದರು ತಪ್ಪಾಗಲಾರದು. ಇನ್ನು ಆರ್ಸಿಬಿ ತಂಡದ ಆಟಗಾರರು ಕೂಡ ಈ ಪಂದ್ಯವನ್ನು ಸಂಪೂರ್ಣವಾಗಿ ನೋಡಿ ಕೊನೆಗೆ ಮುಂಬೈ ತಂಡದ ಗೆಲುವನ್ನು ಕೂಡ ಸಂಭ್ರಮಿಸಿದ್ದರು. ಇದು ನಡೆದು ಕೆಲವು ದಿನಗಳ ನಂತರ ಈಗ ಗ್ಲೆನ್ ಮ್ಯಾಕ್ಸ್ವೆಲ್ ರವರು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು ಮುಂದಿನ ಹಂತಕ್ಕೆ ತಲುಪಲು ಮುಂಬೈ ತಂಡ ಸಣ್ಣ ಸಹಾಯವನ್ನು ಮಾಡಿದೆ ಆದರೆ ಮುಂದೆ ಇನ್ನೇನಿದ್ದರೂ ನಮ್ಮದೇ ಆಟ ಎಂಬುದಾಗಿ ಮುಂದಿನ ಹಂತವನ್ನು ದಾಟುವ ಸಂಪೂರ್ಣ ಭರವಸೆ ವ್ಯಕ್ತಪಡಿಸಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ರವರ ಕಾನ್ಫಿಡೆಂಟ್ ಮನೋಭಾವವನ್ನು ನೋಡಿರುವ ಅಭಿಮಾನಿಗಳು ಆರ್ಸಿಬಿ ತಂಡ ಗೆಲ್ಲುವ ಕುರಿತಂತೆ ಅತ್ಯಂತ ನಿರೀಕ್ಷೆಯನ್ನು ಹೊಂದಿದ್ದಾರೆ.