ಪಂಜಾಬ್ ವಿರುದ್ದದ ಪಂದ್ಯದಲ್ಲಿ ಕಡಿಮೆ ರನ್ ಗಳಿಸಿ ಔಟ್ ಆದ ಕೊಹ್ಲಿ ಬಗ್ಗೆ ಡುಪ್ಲೆಸಿಸ್ ಮಾತನಾಡಿ ಹೇಳಿದ್ದು ಏನು ಗೊತ್ತೇ?? ಕಿಂಗ್ ಕೊಹ್ಲಿ ಈಗ್ಯಾಕೆ ಆದರು??

ಪಂಜಾಬ್ ವಿರುದ್ದದ ಪಂದ್ಯದಲ್ಲಿ ಕಡಿಮೆ ರನ್ ಗಳಿಸಿ ಔಟ್ ಆದ ಕೊಹ್ಲಿ ಬಗ್ಗೆ ಡುಪ್ಲೆಸಿಸ್ ಮಾತನಾಡಿ ಹೇಳಿದ್ದು ಏನು ಗೊತ್ತೇ?? ಕಿಂಗ್ ಕೊಹ್ಲಿ ಈಗ್ಯಾಕೆ ಆದರು??

ನಮಸ್ಕಾರ ಸ್ನೇಹಿತರೇ ದುರದೃಷ್ಟ ಎನ್ನುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತೆ ಸೇರಿಕೊಂಡಿದೆ ಎಂಬುದಾಗಿ ಈಗ ಆರ್ಸಿಬಿ ತಂಡ ಸತತವಾಗಿ ಸೋಲುತ್ತಿರುವ ಪಂದ್ಯಗಳನ್ನು ನೋಡಿದ ನಂತರ ಹೇಳಬಹುದಾಗಿದೆ. ನಿಜಕ್ಕೂ ಕೂಡ ಈ ಬಾರಿಯ ಪ್ಲೇಆಫ್ ಹಂತಕ್ಕೆ ಆರ್ಸಿಬಿ ತಂಡ ತೇರ್ಗಡೆ ಆಗುತ್ತದೆಯೇ ಎಂಬುದು ಕೂಡ ಈಗ ಅನುಮಾನವಾಗಿದೆ. ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 13ನೇ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಜಾನಿ ಬೇರ್ಸ್ಟೋ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ರವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಫೇಸ್ ಬೌಲಿಂಗ್ ಗೆ ನೆರವು ನೀಡುತ್ತಿದ್ದ ಪಿಚ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 210 ರನ್ನುಗಳ ಗುರಿಯನ್ನು ಆರ್ಸಿಬಿ ತಂಡಕ್ಕೆ ನೀಡಿತ್ತು. ನಿಜಕ್ಕೂ ಕೂಡ ಈ ಪಿಚ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಹೀಗಾಗಿ ಆರ್ಸಿಬಿ ತಂಡ ಪಂಜಾಬ್ ಕಿಂಗ್ಸ್ ತಂಡದ ಎದುರು ಕೇವಲ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ಗಳನ್ನು ಗಳಿಸಲು ಮಾತ್ರ ಶಕ್ತವಾಯಿತು.

ಬರೋಬ್ಬರಿ 54 ರನ್ನುಗಳ ಹೀನಾಯ ಸೋಲಿನ ಮೂಲಕ ರನ್ ರೇಟ್ ನಲ್ಲಿ ಕೂಡ ಕುಸಿತವನ್ನು ಕಂಡಿದೆ. ಆದರೆ ಈ ಪಂದ್ಯದಲ್ಲಿ 20 ರನ್ನುಗಳನ್ನು ಗಳಿಸಿದ ವಿರಾಟ್ ಕೊಹ್ಲಿ ರವರು ಉತ್ತಮ ಲಯದಲ್ಲಿ ಇರುವಂತೆ ಕಂಡುಬಂದಿತ್ತು ಆದರೂ ಕೂಡ ಕಗಿಸೋ ರಬಾಡ ರವರ ಬಗ್ಗೆ ಕ್ಯಾಚ್ ನೀಡುವ ಮೂಲಕ ಅನಿರೀಕ್ಷಿತವಾಗಿ ಔಟ್ ಆಗುತ್ತಾರೆ. ಈ ಮೂಲಕ ತಮ್ಮ ಕಳಪೆ ಫಾರ್ಮ್ ಅನ್ನು ಮತ್ತೆ ಮುಂದುವರಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ಪಂದ್ಯ ಮುಗಿದ ನಂತರ ಮಾತನಾಡಿರುವ ತಂಡದ ಕಪ್ತಾನ ನಾಗಿರುವ ಡುಪ್ಲೆಸಿಸ್ ರವರು ಪ್ರತಿಯೊಬ್ಬ ಆಟಗಾರನಿಗೂ ಕೂಡ ಕೆಟ್ಟ ದಿನ ಬಂದೇ ಬರುತ್ತದೆ ವಿರಾಟ್ ಕೊಹ್ಲಿ ರವರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ ಕಠಿಣ ಪರಿಶ್ರಮವನ್ನು ಕೂಡ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಆರ್ಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು ಈ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.