ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರಾರಂಭವಾದ ವೃಷಭ ಸಂಕ್ರಾಂತಿ, ಒಂದು ತಿಂಗಳವರೆಗೆ ಸೂರ್ಯನ ಆಶೀರ್ವಾದದಿಂದ ರಾಜಯೋಗ ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ??

ಪ್ರಾರಂಭವಾದ ವೃಷಭ ಸಂಕ್ರಾಂತಿ, ಒಂದು ತಿಂಗಳವರೆಗೆ ಸೂರ್ಯನ ಆಶೀರ್ವಾದದಿಂದ ರಾಜಯೋಗ ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ??

86

ನಮಸ್ಕಾರ ಸ್ನೇಹಿತರೇ ಜ್ಯೋತಿಷಶಾಸ್ತ್ರದಲ್ಲಿ ಸೂರ್ಯನ ಚಲನೆಯನ್ನು ವುದು ಸಾಕಷ್ಟು ಪ್ರಮುಖವಾಗಿರುತ್ತದೆ ಯಾಕೆಂದರೆ ಗ್ರಹಗಳ ರಾಜ ಎನ್ನುವುದಾಗಿ ಸೂರ್ಯನನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಇನ್ನು ಇಂದಿನಿಂದ ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯ ವೃಷಭರಾಶಿಗೆ ಕಾಲಿಡಲಿದ್ದಾನೆ. ಇದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ವೃಷಭ ಸಂಕ್ರಾಂತಿ ಎಂಬುದಾಗಿ ಕೂಡ ಕರೆಯಲಾಗುತ್ತದೆ. ಇದು ಬಹುತೇಕ ಎಲ್ಲ ರಾಶಿಗಳ ಮೇಲೆ ಕೂಡ ಪರಿಣಾಮ ಬಿದ್ದೇ ಬೀಳುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ವೃಷಭ ಸಂಕ್ರಾಂತಿಗೆ ಇದೇ ಕಾರಣಕ್ಕಾಗಿಯೇ ಸಾಕಷ್ಟು ಪ್ರಾಮುಖ್ಯತೆ ಕೂಡ ಇದೆ.

Follow us on Google News

ಹೌದು ಗೆಳೆಯರೇ ಇಂದು ಮೇಷ ರಾಶಿಯನ್ನು ತೊರೆದು ಸೂರ್ಯ ವೃಷಭ ರಾಶಿಗೆ ಕಾಲಿಡುತ್ತಿದ್ದಾನೆ ಇದನ್ನು ವೃಷಭ ಸಂಕ್ರಾಂತಿ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಮುಂದಿನ 30 ದಿನಗಳ ಕಾಲ ಸೂರ್ಯ ಇದೆ ರಾಶಿಯಲ್ಲಿ ನೆಲೆಸಿರುತ್ತಾನೆ. ಹಾಗಿದ್ದರೆ ಸೂರ್ಯ ಈ ಸಂದರ್ಭದಲ್ಲಿ ವೃಷಭ ರಾಶಿಯಲ್ಲಿ ನೆಲೆಸುವ ಕಾರಣದಿಂದಾಗಿ ಯಾವೆಲ್ಲ ರಾಶಿಯವರಿಗೆ ಶುಭಕರ ವಾಗಿರುತ್ತದೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ಖಂಡಿತವಾಗಿ ಸೂರ್ಯ ದೇವ ವೃಷಭರಾಶಿಗೆ ಪ್ರವೇಶಿಸುವ ಕಾರಣದಿಂದಾಗಿ ವೃಷಭ ರಾಶಿಯವರಿಗೆ ಖಂಡಿತವಾಗಿ ಇರುವ ಸಾಕಷ್ಟು ಲಾಭದಾಯಕವಾಗಿರುತ್ತದೆ. ತಮ್ಮ ವೃತ್ತಿ ಜೀವನದಲ್ಲಿ ಆರ್ಥಿಕ ಲಾಭ ಹಾಗೂ ಗೌರವ ಪ್ರತಿಷ್ಠೆಗಳನ್ನು ಕೂಡ ಪಡೆದುಕೊಳ್ಳುವ ಮೂಲಕ ಹಿಂದೆಂದಿಗಿಂತಲೂ ಅಧಿಕ ಯಶಸ್ವಿಯಾಗಿ ತಮ್ಮ ವೃತ್ತಿಜೀವನದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಿಂಚಿತ್ತು ಕೂಡ ಆರ್ಥಿಕತೆಯ ಅಭಾವ ಇಲ್ಲಿ ಕಂಡುಬರುವುದಿಲ್ಲ. ವ್ಯಾಪಾರಿಗಳಿಗೆ ಕೂಡ ಈ ಸಂಕ್ರಮಣ ಕಾಲ ಎನ್ನುವುದು ಸಾಕಷ್ಟು ಲಾಭವನ್ನು ತಂದು ಕೊಡುತ್ತದೆ.

ಕರ್ಕ ರಾಶಿ; ಈ ಸಂದರ್ಭದಲ್ಲಿ ಕರ್ಕಾಟಕ ರಾಶಿಯವರು ತರುವಂತಹ ಕೆಲಸದಲ್ಲಿ ಪ್ರಮೋಷನ್ ಅನ್ನು ಪಡೆಯುವಂತಹ ಸಾಧ್ಯತೆ ಹೆಚ್ಚಿದೆ. ಆರ್ಥಿಕವಾಗಿ ಯಾವುದೇ ತಾಪತ್ರಯಗಳು ಕೂಡ ಇವರನ್ನು ಕಾಡುವುದಿಲ್ಲ. ಹೊಸ ಕೆಲಸವನ್ನು ಕೂಡ ಇವರು ಇದೇ ಸಂದರ್ಭದಲ್ಲಿ ಪ್ರಾರಂಭ ಮಾಡಿದರೆ ಉತ್ತಮ ಲಾಭವನ್ನು ಹೊಂದುತ್ತಾರೆ. ಯಾವುದೇ ಕೆಲಸಕ್ಕೆ ಕೈಹಾಕಿದರೆ ಕೂಡ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ. ವ್ಯಾಪಾರ ಮಾಡುವುದರಲ್ಲಿ ಕೂಡ ಇವರು ಸಾಕಷ್ಟು ಆರ್ಥಿಕ ಪ್ರಗತಿಯನ್ನು ಕಾಣಬಹುದಾಗಿದೆ.

ಸಿಂಹ ರಾಶಿ; ಸೂರ್ಯ ವೃಷಭ ರಾಶಿಗೆ ಕಾಲಿಡುವ ಕಾರಣದಿಂದಾಗಿ ಸಿಂಹರಾಶಿಯವರಿಗೆ ಉದ್ಯೋಗದಲ್ಲಿ ಸಾಕಷ್ಟು ಅವಕಾಶಗಳು ದೊರೆಯಲಿವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ ಜೀವನದಲ್ಲಿ ಆರ್ಥಿಕ ಬೆಂಬಲವು ಕೂಡ ಅಧಿಕವಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವವರು ಈ ಸಂದರ್ಭದಲ್ಲಿ ಮಾರ್ಗದರ್ಶನಕ್ಕಾಗಿ ನೀವು ನಿಮ್ಮ ತಂದೆಯ ಸಹಾಯವನ್ನು ಪಡೆಯಬಹುದಾಗಿದೆ. ಕುಟುಂಬ ನಿಮ್ಮ ಸಹಕಾರಕ್ಕೆ ಸದಾ ಸಿದ್ಧವಾಗಿರುತ್ತದೆ.

ಕನ್ಯಾ ರಾಶಿ; ಉದ್ಯೋಗ ಹಾಗೂ ವ್ಯಾಪಾರ ಮಾಡುತ್ತಿರುವವರಿಗೆ ಖಂಡಿತವಾಗಿ ಈ ಸಂದರ್ಭದಲ್ಲಿ ಸಾಕಷ್ಟು ಲಾಭಗಳು ಕಂಡು ಬರಲಿದ್ದು ಪರಿಶ್ರಮಪಟ್ಟರು ಖಂಡಿತವಾಗಿ ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ. ಅರ್ಧಕ್ಕೆ ನಿಂತಿರುವ ಅಂತಹ ಎಲ್ಲಾ ಕೆಲಸಗಳು ಕೂಡ ಪ್ರಾರಂಭವಾಗಲಿವೆ ಹಾಗೂ ಸಂಪೂರ್ಣವಾಗಿ ಯಶಸ್ವಿ ಕೂಡ ಆಗಲಿದೆ. ಹಲವಾರು ಸಮಯಗಳಿಂದ ನಿಮ್ಮ ಕೈ ಸೇರಬೇಕಾಗಿದ್ದ ಹಣ ಈ ಸಂದರ್ಭದಲ್ಲಿ ಬಂದು ನಿಮ್ಮ ಕೈಸೇರಲಿದೆ. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಕನ್ಯಾರಾಶಿಯವರಿಗೆ ಲಾಭದಾಯಕ ದಿನಗಳು ಕಾಣಿಸಿಕೊಳ್ಳಲಿವೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.