ಈಗಲಾದರೂ ಆರ್ಸಿಬಿಯ ಯುವ ಮಹಾ ಅಸ್ತ್ರವನ್ನು ಕಣಕ್ಕೆ ಇಳಿಸಲಿದೆಯೇ?? ಅದೊಂದು ಬದಲಾವಣೆ ಮಾಡಿದರೇ ಕಪ್ ಅಂತೂ ನಮ್ಮದೇ.

ಈಗಲಾದರೂ ಆರ್ಸಿಬಿಯ ಯುವ ಮಹಾ ಅಸ್ತ್ರವನ್ನು ಕಣಕ್ಕೆ ಇಳಿಸಲಿದೆಯೇ?? ಅದೊಂದು ಬದಲಾವಣೆ ಮಾಡಿದರೇ ಕಪ್ ಅಂತೂ ನಮ್ಮದೇ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ಈ ಬಾರಿಯ ಐಪಿಎಲ್ ನಲ್ಲಿ ಪಂದ್ಯಾವಳಿಯ ಕೊನೆಯ ಹಂತ ಅನ್ನುವುದು ಸಾಕಷ್ಟು ರೋಚಕ ಪರಿಸ್ಥಿತಿಗೆ ಈಗ ಬಂದು ನಿಂತಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಕೂಡ ದೊಡ್ಡಮಟ್ಟದಲ್ಲಿ ಗೆಲ್ಲಲೇಬೇಕಾಗಿದೆ. ಇನ್ನು ರಾಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಮೇ 13 ರಂದು ಪಂಜಾಬ್ ಕಿಂಗ್ಸ್ ತಂಡದ ಎದುರು ಆಡಲಿದೆ. ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗುವಂತಹ ತಂಡಗಳ ನಡುವೆ ದೊಡ್ಡ ಮಟ್ಟದ ಪೈಪೋಟಿ ಏರ್ಪಟ್ಟಿದೆ.

ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವುದು ಗೌಪ್ಯ ವಾಗಿರುವ ವಿಷಯವೇನಲ್ಲ. ಹೌದು ಸ್ನೇಹಿತರೆ ಯಾಕೆಂದರೆ ಆರ್ಸಿಬಿ ತಂಡದಲ್ಲಿ ವಿಕೆಟ್ ಟೇಕರ್ ಗಳಾಗಿ ಹರ್ಷಲ್ ಪಟೇಲ್ ಹಾಗೂ ಒಂದು ಹಸರಂಗ ಹಾಗೂ ಜೋಶ್ ಹೆಝಲ್ ವುಡ್ ಅವರು ಕೂಡ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಆದರೆ 9 ಕೋಟಿ ರೂಪಾಯಿ ಕೊಟ್ಟು ಉಳಿಸಿಕೊಂಡರೂ ಕೂಡ ಈ ಬಾರಿಯ ಟೂರ್ನಿಯಲ್ಲಿ ಸಿರಾಜ್ ರವರು ತಮ್ಮ ಅರ್ಹತೆಗೆ ತಕ್ಕಂತಹ ಪ್ರದರ್ಶನವನ್ನು ನೀಡುತ್ತಿಲ್ಲ ಎನ್ನುವುದು ಚಿಂತಾದಾಯಕವಾಗಿದೆ.

ಹರ್ಷಲ್ ಪಟೇಲ್ ರವರಂತಹ ಬೌಲರ್ಗಳು ಕೊನೆಯ ಓವರಿನಲ್ಲಿ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಬೇಕಾಗುತ್ತದೆ. ಆದರೆ ಪವರ್ ಪ್ಲೇ ಓವರ್ನಲ್ಲಿ ಸಿರಾಜ್ ರವರು ರನ್ನ ಪ್ರವಾಹವನ್ನು ಕಟ್ಟಿಹಾಕಬೇಕು ವಿಕೆಟ್ ತೆಗೆಯಬೇಕು ಎನ್ನುವ ಕಾರಣಕ್ಕಾಗಿಯೇ ಅವರನ್ನು ಆರ್ಸಿಬಿ ತಂಡ ರಿಟೈನ್ ಮಾಡಿಕೊಂಡಿತ್ತು. ಆದರೆ ಸಿರಾಜ್ ರವರು ಬೌಲಿಂಗ್ ಶೈಲಿಗೆ ತಕ್ಕಂತೆ ಫೀಲ್ಡಿಂಗ್ ನಿಲ್ಲಿಸುತ್ತಿಲ್ಲ ಹಾಗೂ ವಿಕೆಟ್ಗಳನ್ನು ಕೂಡ ತೆಗೆಯುತ್ತಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಓವರ್ಗಳಲ್ಲಿ ದುಬಾರಿ ಆಗುತ್ತಿದ್ದಾರೆ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿ ಎದುರಿಸುತ್ತಿರುವ ಪ್ರಮುಖ ಕೊರತೆಯಾಗಿ ಸಿರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರತಿಯೊಂದು ತಂಡದಲ್ಲೂ ಕೂಡ ಬ್ಯಾಟ್ಸ್ಮನ್ಗಳಷ್ಟೇ ಅಥವಾ ಅವರಿಗಿಂತ ಹೆಚ್ಚಾಗಿ ಬೌಲರ್ಗಳು ತಂಡದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಯಾಕೆಂದರೆ ಟ್ವೆಂಟಿ-20 ಫಾರ್ಮೆಟ್ ನಲ್ಲಿ ಬ್ಯಾಟ್ಸ್ಮನ್ಗಳು ಮನಬಂದಂತೆ ಆಟವಾಡಬಹುದು ಆದರೆ ಬೌಲರ್ಗಳಿಗೆ ಅವಕಾಶ ಕಡಿಮೆ. ಒಂದು ವೇಳೆ ಅವರು ಅದರಲ್ಲಿ ಯಶಸ್ವಿಯಾದರೆ ತಂಡದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿಯೇ ಸಿರಾಜ್ ರವರನ್ನು ಆರ್ಸಿಬಿ ತನ್ನಲ್ಲಿಯೇ ಉಳಿಸಿಕೊಂಡಿತ್ತು. ಆದರೆ ತಂಡದ ಜವಾಬ್ದಾರಿಯನ್ನು ಮುನ್ನಡೆಸಬೇಕಾಗಿದೆ ಸಿರಾಜ್ ರವರು ಈಗ ತಂಡದ ಹೊರೆಯಾಗಿ ಪರಿಣಮಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಇವರ ಬದಲಿಗೆ ಕೆಲವರು ಈಗಾಗಲೇ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆಟಗಾರ ಆಗಿರುವ ಹಾಗೂ ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡ ಖರೀದಿಸಿರುವ ಸಿದ್ದಾರ್ಥ್ ಕೌಲ್ ರವರನ್ನು ತಂಡದಲ್ಲಿ ಆಯ್ಕೆ ಮಾಡುವಂತಹ ಕುರಿತಂತೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮಟ್ಟಿಗೆ ದೊಡ್ಡಮಟ್ಟದ ಸದ್ದು ಕೇಳಿ ಬಂದಿತ್ತು. ಆದರೆ ಕ್ರಿಕೆಟ್ ಪಂಡಿತರು ಹೇಳುವಂತೆ ಈ ಆಯ್ಕೆ ಕೂಡ ಸಿರಾಜ್ ಅವರಿಗಿಂತ ಭಿನ್ನ ಆಗಿರುವುದಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ಇವರಿಬ್ಬರ ಬದಲಿಗೆ ಯಾವ ಬೌಲರನ್ನು ಕಣಕ್ಕಿಳಿಸಬೇಕು ಎಂದು ಹುಡುಕುವುದಾದರೆ ಅಲ್ಲಿ ಒಬ್ಬ ಆಟಗಾರ ಕಂಡುಬರುತ್ತಾರೆ. ಹೌದು ಗೆಳೆಯರೇ ಅವರು ಇನ್ಯಾರು ಅಲ್ಲ ಈ ಬಾರಿ ಆರ್ಸಿಬಿ ತಂಡ ಹರಾಜಿನಲ್ಲಿ 25 ಲಕ್ಷ ಕೊಟ್ಟು ಖರೀದಿ ಮಾಡಿರುವ ಚಾಮ ಮಿಲಿಂದ್ ಎಂದು ಹೇಳಬಹುದಾಗಿದೆ.

ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಅನುಭವ ಇಲ್ಲದಿದ್ದರೂ ಕೂಡ ದೇಶಿಯ ಕ್ರಿಕೆಟ್ನಲ್ಲಿ ಮಿಲಿಂದ್ ಉತ್ತಮ ಗುಣಮಟ್ಟದ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ. 53 ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಮೇಲಿಂದ 83 ವಿಕೆಟ್ಗಳನ್ನು ಕಿತ್ತಿದ್ದಾರೆ. ಮಿಲಿಂದ ರವರ ಬೆಸ್ಟ್ ಬೌಲಿಂಗ್ ಫಿಗರ್ ಎಂಟು ರನ್ನುಗಳನ್ನು ನೀಡಿ ಐದು ವಿಕೆಟ್ ಕಿತ್ತಿರುವುದು ಆಗಿದೆ. ಎರಡು ಬಾರಿ 5 ವಿಕೆಟ್ ಗೊಂಚಲುಗಳು ಹಾಗೂ ಎರಡು ಬಾರಿ ನಾಲ್ಕು ವಿಕೆಟ್ ಗೊಂಚಲುಗಳನ್ನು ಕಿತ್ತಿರುವ ಸಾಧನೆ ಅವರ ಹೆಸರಿನಲ್ಲಿದೆ. ಸಿರಾಜ್ ರವರ ಕಳಪೆ ಫಾರ್ಮ್ ರಿಪ್ಲೇಸ್ಮೆಂಟ್ ಗೆ ಮಿಲಿಂದ್ ಉತ್ತಮ ಆಯ್ಕೆ ಎಂದು ಎಲ್ಲರೂ ತಮ್ಮ ವಾದವನ್ನು ಮಂಡಿಸಿದ್ದಾರೆ. ಈ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.