ಪೋಸ್ಟ್ ಆಫೀಸ್ ನಲ್ಲಿ ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆದು ಯೋಜನೆ ಆರಂಭಿಸಿ, ಪ್ರತಿ ತಿಂಗಳು 2500 ರೂಪಾಯಿ ಸಿಗುತ್ತದೆ. ಯೋಜನೆಯ ವಿವರಗಳೇನು ಗೊತ್ತೇ?

ಪೋಸ್ಟ್ ಆಫೀಸ್ ನಲ್ಲಿ ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆದು ಯೋಜನೆ ಆರಂಭಿಸಿ, ಪ್ರತಿ ತಿಂಗಳು 2500 ರೂಪಾಯಿ ಸಿಗುತ್ತದೆ. ಯೋಜನೆಯ ವಿವರಗಳೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ಈಗ ಸಮಾಜದಲ್ಲಿ ತಮ್ಮ ಮಕ್ಕಳ ಭವಿಷ್ಯದ ಕುರಿತಂತೆ ಈಗಲೇ ಯೋಜನೆ ಮಾಡುವುದು ಒಳ್ಳೆಯದು. ಇತ್ತೀಚಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ಯಾವುದು ಕೂಡ ನಿಶ್ಚಿತ ಅಲ್ಲ ಎಂದು ಹೇಳಬಹುದಾಗಿದೆ. ಹೀಗಾಗಿ ಪೋಸ್ಟಾಫೀಸಿನಲ್ಲಿ ಪರಿಚಿತವಾಗಿರುವ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದಿನ ಸಂದರ್ಭದಲ್ಲಿ ಪ್ರತಿ ತಿಂಗಳು ನಿಮ್ಮ ಮಕ್ಕಳ ಹೆಸರಿನಲ್ಲಿ ಹಣ ಬರಲು ಆರಂಭವಾಗುತ್ತದೆ. ಹಾಗಿದ್ದರೆ ಈ ಹೊಸ ಯೋಜನೆಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಎಂ ಐ ಎಸ್ ಎನ್ನುವ ಹೊಸ ಯೋಜನೆ ಪರಿಚಿತವಾಗಿದ್ದು ಇದರಲ್ಲಿ ಒಮ್ಮೆ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಹಣವನ್ನು ಪಡೆಯಬಹುದಾಗಿದೆ.

ಇದನ್ನು ನಿಮ್ಮ ಹತ್ತುವರ್ಷದ ಅಥವಾ ಅದಕ್ಕಿಂತ ಅಧಿಕ ವರ್ಷ ವಿರುವ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆಗೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ಪ್ರಾರಂಭ ಮಾಡಿದ್ದಾರೆ ನಿಮ್ಮ ಮಕ್ಕಳ ಶಿಕ್ಷಣದ ಖರ್ಚು ವೆಚ್ಚಕ್ಕಾಗಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ನೀವು ಈ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ. ಸಾವಿರ ರೂಪಾಯಿಂದ ಪ್ರಾರಂಭಿಸಿ 4.5 ಲಕ್ಷದವರೆಗೂ ಕೂಡ ಹೂಡಿಕೆ ಮಾಡಬಹುದಾಗಿದೆ. ಇಲ್ಲಿ 6.6 ಬಡ್ಡಿ ದರ ಸಿಗುತ್ತದೆ. ಮಗು 10 ವರ್ಷಕ್ಕಿಂತ ದೊಡ್ಡವನಾಗಿದ್ದರೆ ಅವರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಇಲ್ಲದಿದ್ದರೆ ವರ್ಷಗಳ ಹೆಸರಿನಲ್ಲಿ ತೆರೆಯಬಹುದು. ಈ ಯೋಜನೆ ಐದು ವರ್ಷಗಳವರೆಗೆ ಚಲಾವಣೆಯಲ್ಲಿರುತ್ತದೆ.

ಒಂದು ವೇಳೆ ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿಯನ್ನು ಈ ಯೋಜನೆಯ ಅಡಿಯಲ್ಲಿ ಠೇವಣಿ ಇಟ್ಟರೆ 6.6 ಬಡ್ಡಿದರದ ಲೆಕ್ಕಚಾರದಲ್ಲಿ ತಿಂಗಳಿಗೆ ನಿಮಗೆ 1100 ರೂಪಾಯಿ ದೊರಕುತ್ತದೆ ಹಾಗೂ ಐದು ವರ್ಷಕ್ಕೆ ಒಟ್ಟಾರೆಯಾಗಿ 66 ಸಾವಿರ ರೂಪಾಯಿ ಸಿಗುತ್ತದೆ. ಅವಧಿ ಮುಗಿದ ನಂತರ ನೀವು ಠೇವಣಿ ಇಟ್ಟಿರುವ ಎರಡು ಲಕ್ಷ ರೂಪಾಯಿಯನ್ನು ನೀವು ವಾಪಸ್ ತೆಗೆದುಕೊಳ್ಳಬಹುದಾಗಿದೆ. ಹತ್ತು ವರ್ಷದ ಮಗುವಿಗೆ ತಿಂಗಳಿಗೆ 1100 ರೂಪಾಯಿ ಖರ್ಚಿಗೆ ಅಥವಾ ಆತನ ಜವಾಬ್ದಾರಿಗೆ ಸಿಗುತ್ತದೆ ಎಂದರೆ ಖಂಡಿತವಾಗಿಯೂ ದೊಡ್ಡ ವಿಚಾರವೇ ಸರಿ ಎಂದು ಹೇಳಬಹುದಾಗಿದೆ. ಇದು ಮಗುವಿನ ಶೈಕ್ಷಣಿಕ ಹಾಗೂ ಬೆಳವಣಿಗೆಗೆ ಪೋಷಕರಿಗೆ ಸಹಾಯ ಮಾಡಬಹುದಾಗಿದೆ. ನೀವು ಎಷ್ಟು ಠೇವಣಿ ಹೆಚ್ಚಿಸುತ್ತೀರೋ ಅದೇರೀತಿಯಲ್ಲಿ 6.6 ಬಡ್ಡಿದರದ ಲೆಕ್ಕಾಚಾರದಲ್ಲಿ ನಿಮಗೆ ಪ್ರತಿ ತಿಂಗಳು ಹಣ ಸಿಗುತ್ತದೆ. ಇಂದೇ ತಪ್ಪದೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಗೆ ಶುಭಾರಂಭ ಮಾಡಿ.