ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲು ಮುಂದಾಗಿರುವ ಬಿಸಿಸಿಐ ಗೆ ತಲೆನೋವಾಗಿರುವ ಮೂವರು ಸ್ಟಾರ್ ಆಟಗಾರರು ಯಾರ್ಯಾರು ಗೊತ್ತೇ??
ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲು ಮುಂದಾಗಿರುವ ಬಿಸಿಸಿಐ ಗೆ ತಲೆನೋವಾಗಿರುವ ಮೂವರು ಸ್ಟಾರ್ ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತೀಯ ಕ್ರಿಕೆಟ್ ತಂಡ ಐಪಿಎಲ್ ಆದನಂತರ ಹಲವಾರು ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಅದರಲ್ಲೂ ಪ್ರಮುಖವಾಗಿ ಈ ವರ್ಷವೇ ಆಸ್ಟ್ರೇಲಿಯಾದಲ್ಲಿ ನಡೆಯುವಂತಹ t20 ವರ್ಲ್ಡ್ ಕಪ್ ನಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸರಿಯಾದ ತಂಡವನ್ನು ಕಟ್ಟುವಂತಹ ಜವಾಬ್ದಾರಿ ಎನ್ನುವುದು ಟೀಮ್ ಮ್ಯಾನೇಜ್ಮೆಂಟ್ ಮೇಲಿದೆ. ಐಪಿಎಲ್ ಮುಗಿದ ನಂತರವೇ ಭಾರತೀಯ ಕ್ರಿಕೆಟ್ ತಂಡ ಮೊದಲಿಗೆ ಸೌತ್ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ.
ನಂತರ ಐರ್ಲೆಂಡ್ ಪ್ರವಾಸದಲ್ಲಿ ಕೂಡ ಎರಡು ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನು ಆಡಲಿದೆ. ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಕೂಡ ಇಂಗ್ಲೆಂಡ್ ತಂಡದ ವಿರುದ್ಧ ಐದು ಪಂದ್ಯಗಳ ಟಿ-ಟ್ವೆಂಟಿ ಸರಣಿಯನ್ನು ಆಡಲಿದೆ. ಇದನ್ನು ಪೂರೈಸಿದ ನಂತರ ಆಸ್ಟ್ರೇಲಿಯದಲ್ಲಿ ನಡುವ t20 ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲಿದೆ. ಹೀಗಾಗಿ ಈ ಬಾರಿ ಸಾಕಷ್ಟು ಹೆಕ್ಟಿಕ್ ಸಮಯ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ತಂಡಕ್ಕೆ ಇರಲಿದೆ ಎಂದು ಹೇಳಬಹುದಾಗಿದೆ. ಇನ್ನು ವರ್ಲ್ಡ್ ಕಪ್ ಗೆ ಈ ಬಾರಿ ಅತ್ಯುತ್ತಮ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ ತಂಡಕ್ಕೆ ಮೊದಲಿಗೆ ಸಾಕಷ್ಟು ತಲೆಬಿಸಿ ಪ್ರಾರಂಭವಾಗಲಿದೆ ಎಂದು ಹೇಳಬಹುದಾಗಿದೆ.
ಯಾಕೆಂದರೆ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ಕಪ್ತಾನ ಇಬ್ಬರು ಕೂಡ ಔಟಾಫ್ ಫಾರ್ಮ್ ಇದ್ದಾರೆ. ನಿಜಕ್ಕೂ ಕೂಡ ಈ ಬಾರಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಇಬ್ಬರು ಕೂಡ ಮಂಕು ಕವಿದಂತೆ ಆಟವಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ರನ್ ಮಷೀನ್ ಆಗಿದ್ದ ವಿರಾಟ್ ಕೊಹ್ಲಿ ರವರಿಂದ ಕೂಡ ಯಾವುದರ ಬರುತ್ತಿಲ್ಲ. ನಾಯಕನಾಗಿ ರೋಹಿತ್ ಶರ್ಮಾ ರವರು ಕೂಡ ಮುಂಬೈ ತಂಡದಲ್ಲಿ ಯಾವುದೇ ಮೂಡಿ ಮಾಡುತ್ತಿಲ್ಲ.
ಮೊದಲಿಗೆ ವಿರಾಟ್ ಕೊಹ್ಲಿ ರವರ ಕುರಿತಂತೆ ಹೇಳುವುದಾದರೆ ಇವರಿಗೂ ಆಡಿರುವ 12 ಐಪಿಎಲ್ ಪಂದ್ಯಗಳಲ್ಲಿ ಕೇವಲ 216 ರನ್ನುಗಳನ್ನು ಗಳಿಸಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಏಕೈಕ ಕೊರತೆಯಾಗಿ ವಿರಾಟ್ ಕೊಹ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಎರಡು ಬಾರಿ ಶೂನ್ಯ ರನ್ನಿಗೆ ಔಟ್ ಆಗಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಆಡಿರುವ ಅಥವಾ ಗಳಿಸಿರುವ 216 ರನ್ನುಗಳು ಕೂಡ ಟಿ-ಟ್ವೆಂಟಿ ಮಾದರಿಯಲ್ಲಿ ಬಾರಿಸಿರುವ ರನ್ನುಗಳು ಅಲ್ಲ ಬದಲಾಗಿ ಒಂಡೇ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ್ದಾರೆ ಎಂದು ಹೇಳಬಹುದಾಗಿದೆ.
ಇನ್ನು ರೋಹಿತ್ ಶರ್ಮಾ ರವರದ್ದು ಕೂಡ ಇದೇ ಗೋಳಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನಾಯಕತ್ವವನ್ನು ಕೂಡ ಚೆನ್ನಾಗಿ ಮಾಡುತ್ತಿಲ್ಲ ಹಾಗೂ ಆರಂಭಿಕ ಆಟಗಾರನಾಗಿ ಅವರ ಬ್ಯಾಟ್ನಿಂದ ಯಾವುದೇ ರನ್ನುಗಳು ಕೂಡ ಹೊರಗೆ ಬರುತ್ತಿಲ್ಲ. ಮುಂಬರುವ ಅಂತಹ ಹಲವಾರು ಸರಣಿಗಳು ಮತ್ತು t20 ವರ್ಲ್ಡ್ ಕಪ್ ಅನ್ನು ಗಮನದಲ್ಲಿಟ್ಟುಕೊಂಡರೆ ಇದು ನಿಜಕ್ಕೂ ಕೂಡ ಚಿಂತಾಜನಕವಾಗಿದೆ. ಇನ್ನು ಈ ಸಾಲಿಗೆ ಮತ್ತೊಬ್ಬ ಆಟಗಾರ ಕೂಡ ಸೇರುತ್ತಾರೆ.
ಹೌದು ಗೆಳೆಯರ ತಂಡದ ಉಪ ನಾಯಕರಾಗಿರುವ ಕೆ ಎಲ್ ರಾಹುಲ್ ರವರು ಈ ಬಾರಿಯ ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ ನಿಜ ಆದರೆ ಪವರ್ ಪ್ಲೇ ನಲ್ಲಿ ನಿರೀಕ್ಷಿತ ರನ್ ಗಳನ್ನು ಕೆ ಎಲ್ ರಾಹುಲ್ ಅವರು ಬಾರಿಸುತ್ತಿಲ್ಲ. ಇದು ಕೂಡ ಒಂದು ಚಿಂತೆಯ ವಿಚಾರವಾಗಿದೆ ಎಂದರು ತಪ್ಪಾಗಲಾರದು. ನಿಜಕ್ಕೂ ಕೂಡ ಬಿಸಿಸಿಐ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರವರ ಫಾರ್ಮ್ ಹೀಗೆ ಮುಂದುವರಿದರೆ ತಂಡದಿಂದ ಹೊರಕ್ಕೆ ಇಡಬಹುದಾದ ಅಂತಹ ಯೋಚನೆಯನ್ನು ಮಾಡಿದರೂ ಕೂಡ ಮಾಡಬಹುದಾಗಿದೆ ಎಂಬುದಾಗಿ ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.