ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇನ್ನೇನು ನಾಯಕನಾದೆ ಎನ್ನುವಷ್ಟರಲ್ಲಿ ಯುವಿಗೆ ನಾಯಕ ಸ್ಥಾನ ತಪ್ಪಿಸಿದ್ದು ಯಾರು ಗೊತ್ತೇ?? ಅಂದು ಯುವಿ ಯಾರ ಪರ ನಿಂತದ್ದು ತಪ್ಪಾಯ್ತು ಗೊತ್ತೇ? ಯುವಿ ಹೇಳಿದ್ದೇನು ಗೊತ್ತೇ?

94

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯುವರಾಜ್ ಸಿಂಗ್ ಅವರ ಹೇಳಿಕೆಯ ಕುರಿತಂತೆ ಸಾಕಷ್ಟು ಚರ್ಚೆಗಳು ಹಾಗೂ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಯುವರಾಜ್ ಸಿಂಗ್ ಅವರು ನಾಯಕನ ಸ್ಥಾನವನ್ನು ಅಲಂಕರಿಸುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ ಅವರು ಆಗಿರಲಿಲ್ಲ. ಇದು ಯಾಕೆ ಹಾಗೂ ಇದರ ಹಿಂದಿನ ಎಲ್ಲಾ ವಿವರಣೆಗಳನ್ನು ಕೂಡ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ನಿಮಗೆಲ್ಲರಿಗೂ ಈಗಾಗಲೇ ಗೊತ್ತಿರುವ ಹಾಗೆ ಕ್ರಿಕೆಟ್ ಕ್ಷೇತ್ರದಲ್ಲಿ ಯುವರಾಜ್ ಸಿಂಗ್ ಅವರು ತಮ್ಮದೇ ಒಂದು ಇತಿಹಾಸವನ್ನು ಸೃಷ್ಟಿಸಿರುವ ಆಟಗಾರ ಎಂದರೆ ತಪ್ಪಾಗಲಾರದು.

ಅದರಲ್ಲೂ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ವಿರುದ್ಧ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಆರಕ್ಕೆ ಆರು ಸಿಕ್ಸರ್ ಬಾರಿಸಿದ್ದು ಇಂದಿಗೂ ಕೂಡ ಕಣ್ಣಿಗೆಕಟ್ಟಿದಂತಿದೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್ ಹಾಗೂ ಬೌಲಿಂಗ್ ಅಲ್ಲಿಯೂ ಕೂಡ ತಮ್ಮದೇ ಆದಂತಹ ಶೈಲಿಯನ್ನು ಯುವರಾಜ್ ಸಿಂಗ್ ರವರು ಹೊಂದಿದ್ದರು. ಇಷ್ಟೇ ಯಾಕೆ 2011 ರಲ್ಲಿ ಭಾರತ ಕ್ರಿಕೆಟ್ ತಂಡ 1983 ರ ನಂತರ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದು ಅವರು ಕೂಡ ಯುವರಾಜ್ ಸಿಂಗ್ ರವರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಈ ವಿಶ್ವಕಪ್ ನಲ್ಲಿ ಆಲ್-ರೌಂಡರ್ ಪ್ರದರ್ಶನ ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದು.

ಆದರೆ ಅವರಿಗೆ ಅದಕ್ಕೆ ತಕ್ಕಂತಹ ಸಮ್ಮಾನ ಸನ್ಮಾನಗಳು ಸಿಗಲಿಲ್ಲ. ಇನ್ನು ನಾಯಕನ ಆಗುವಂತಹ ಅವಕಾಶ ಇದ್ದರೂ ಕೂಡ ಅವಕಾಶ ಅವರಿಗೆ ಸಿಗದೆ ಅವರ ಜೂನಿಯರ್ ನಾಯಕತ್ವದಲ್ಲಿ ಆಡುವಂತಹ ಪರಿಸ್ಥಿತಿ ಕೂಡ ಅವರಿಗೆ ಬಂದಿತ್ತು. ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ 2007 ರಲ್ಲಿ ಮಹೇಂದ್ರಸಿಂಗ್ ಧೋನಿ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಪ್ರಥಮ t20 ವರ್ಲ್ಡ್ ಕಪ್ ಅನ್ನು ಗೆದ್ದುಕೊಂಡಿತ್ತು. ಆದರೆ ಈ ತಂಡವನ್ನು ಯುವರಾಜ್ ಸಿಂಗ್ ರವರು ನಾಯಕನಾಗಿ ಮುನ್ನಡೆಸಬೇಕಾಗಿತ್ತು.

ಆದರೆ ಯುವರಾಜ್ ಸಿಂಗ್ ಅವರು ಈ ಸಂದರ್ಭದಲ್ಲಿ ತಂಡದ ಕೆಲವು ಹಿರಿಯ ಆಟಗಾರರ ಪರವಾಗಿ ನಿಂತಿದ್ದ ಕಾರಣದಿಂದಾಗಿ ಅವರು ನಾಯಕನ ಸ್ಥಾನಕ್ಕೆ ಆಯ್ಕೆಯಾಗಿರಲಿಲ್ಲ. ಈ ಮಾತುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೊಗೆಯಾಡುತ್ತಿವೆ. ಇನ್ನು ಈ ವಿಚಾರವನ್ನು ಖುಲಾಸೆ ಮಾಡಿರುವುದು ಕೂಡ ಸ್ವತಹ ಯುವರಾಜ್ ಸಿಂಗ್ ಅವರೇ. ಹೌದು ಗೆಳೆಯರೇ ಇದೇ ವರ್ಷದಲ್ಲಿ ಅಂದರೆ 2007 ರಲ್ಲಿ ನಡೆದಂತಹ ಏಕದಿನ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ಅಂಡರ್ ಡಾಗ್ ಟೀಮ್ ಆಗಿರುವ ಬಾಂಗ್ಲಾದೇಶದ ವಿರುದ್ಧವೂ ಕೂಡ ಸೋತಿತ್ತು.

ಹೀಗಾಗಿ ಅದೇ ವರ್ಷ ಮೊದಲ t20 ವರ್ಲ್ಡ್ ಕಪ್ ಗೆ ಹಾಡಲು ಸೌರವ್ ಗಂಗುಲಿ ಸಚಿನ್ ತೆಂಡೂಲ್ಕರ್ ರವರಂತಹ ಸೀನಿಯರ್ ಆಟಗಾರರು ಸಿದ್ಧರಿರಲಿಲ್ಲ ಹೀಗಾಗಿ ಯುವರಾಜ್ ಸಿಂಗ್ ರವರಿಗೆ ನಾಯಕನ ಪಟ್ಟವನ್ನು ಕಟ್ಟುವುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು ಆದರೆ ಬಿಸಿಸಿಐ ಯುವರಾಜ್ ಸಿಂಗ್ ಅವರನ್ನು ಬದಿಗೆ ತಳ್ಳಿ ಮಹೇಂದ್ರ ಸಿಂಗ್ ಧೋನಿ ರವರಿಗೆ ಪಟ್ಟವನ್ನು ಕಟ್ಟಿತ್ತು. ಇಷ್ಟೊತ್ತು ಅರ್ಹರಾಗಿದ್ದ ಯುವರಾಜ್ ಸಿಂಗ್ ಅವರಿಗೆ ನಾಯಕನ ಪಟ್ಟವನ್ನು ಯಾಕೆ ಕಟ್ಟಲಿಲ್ಲ ಎಂದು ನೋಡುವುದಾದರೆ ಇದಕ್ಕೆ ಪ್ರಮುಖ ಕಾರಣ ಅಂದಿನ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ರವರು ಎಂಬುದಾಗಿ ಕಂಡುಬರುತ್ತದೆ.

ಹೌದು ಗೆಳೆಯರೇ ಅಂದಿನ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಗ್ರೆಗ್ ಚಾಪೆಲ್ ಅವರ ನಡುವೆ ಎಲ್ಲವೂ ಸರಿ ಇರಲಿಲ್ಲ ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅವರು ಸಚಿನ್ ತೆಂಡೂಲ್ಕರ್ ರವರ ಪರವಾಗಿ ನಿಂತಿದ್ದರು. ಹಾಗಾಗಿ ಇದು ಬಿಸಿಸಿಐ ಬಾಸ್ ಗಳಿಗೆ ಸರಿ ಕಂಡು ಬಂದಿರಲಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಇವರ ಸಿಂಗರ್ ಅವರ ಬದಲಿಗೆ ಮಹೇಂದ್ರ ಸಿಂಗ್ ಧೋನಿ ರವರಿಗೆ ನಾಯಕತ್ವವನ್ನು ನೀಡಿದ್ದರು. ಈ ಕುರಿತಂತೆ ಸ್ವತಹ ಯುವರಾಜ್ ಸಿಂಗ್ ರವರೇ ಸಂಪೂರ್ಣ ವಿವರವಾಗಿ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ರವರ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.