ಎಬಿಡಿ ಮತ್ತೆ ಆರ್ಸಿಬಿ ಗೆ ಬ್ಯಾಟ್ ಬೀಸುತ್ತಾರಾ? ಕೊಹ್ಲಿ ತಲೆಯಲ್ಲಿ ಅದೆಂತ ಯೋಚನೆ?? ಮಿಸ್ ಆಗಿ ಕೊಹ್ಲಿ ಬಾಯ್ಬಿಟ್ಟ ಸತ್ಯವೇನು ಗೊತ್ತೇ??

ಎಬಿಡಿ ಮತ್ತೆ ಆರ್ಸಿಬಿ ಗೆ ಬ್ಯಾಟ್ ಬೀಸುತ್ತಾರಾ? ಕೊಹ್ಲಿ ತಲೆಯಲ್ಲಿ ಅದೆಂತ ಯೋಚನೆ?? ಮಿಸ್ ಆಗಿ ಕೊಹ್ಲಿ ಬಾಯ್ಬಿಟ್ಟ ಸತ್ಯವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಸನ್ನಿಹಿತವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ಬಾರಿಯ ಸೀಸನ್ ನಲ್ಲಿ ಕೂಡ ವಿರಾಟ್ ಕೊಹ್ಲಿ ರವರ ಫಾರ್ಮ್ ಎನ್ನುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ವಿರಾಟ್ ಕೊಹ್ಲಿ ರವರ ಜೊತೆಗಾರನಾಗಿ ಎಬಿ ಡಿವಿಲಿಯರ್ಸ್ ರವರು ಉತ್ತಮ ಆಟವನ್ನು ಆಡುತ್ತಿದ್ದರು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಯಾವಾಗೆಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನ ಹಂತಕ್ಕೆ ಹೋಗುತ್ತಿತ್ತೋ ಆವಾಗೆಲ್ಲ ಎಬಿ ಡಿವಿಲಿಯರ್ಸ್ ರವರು ಬಂದು ಆಪದ್ಬಾಂಧವನಂತೆ ತಂಡವನ್ನು ಗೆಲುವಿನ ಹಂತಕ್ಕೆ ಮುಟ್ಟಿಸುತ್ತಿದ್ದರು.

ನಿಜಕ್ಕೂ ಕೂಡ ಎಬಿ ಡಿವಿಲಿಯರ್ಸ್ ಅವರ ಸೇವೆಯನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು. ಕಳೆದ ವರ್ಷದಿಂದ ಎಬಿ ಡಿವಿಲಿಯರ್ಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಕ್ಕೆ ಉಳಿದಿದ್ದರು. ತಂಡದಿಂದ ಹೊರಗಿದ್ದರೂ ಕೂಡ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲು-ಗೆಲುವುಗಳ ಅಪ್ಡೇಟ್ ಗಳನ್ನು ಇಂದಿಗೂ ಕೂಡ ಪಡೆಯುತ್ತಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್ ರವರ ಸಾಧನೆ ಕುರಿತಂತೆ ನೋಡುವುದಾದರೆ ರಾಯಲ್ ಚಾಲೆಂಜರ್ಸ್ ಪರವಾಗಿ ಅತ್ಯಂತ ಹೆಚ್ಚು ರನ್ ಗಳಿಸಿರುವ ಆಟಗಾರರಲ್ಲಿ ಎರಡನೆಯದಾಗಿ ಕಾಣಿಸಿಕೊಳ್ಳುತ್ತಾರೆ. 156 ಪಂದ್ಯಗಳಿಂದ ಎಬಿ ಡಿವಿಲಿಯರ್ಸ್ ರವರು 4491 ರನ್ನುಗಳನ್ನು ಬಾರಿಸಿದ್ದಾರೆ. ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ಇದ್ದವರು ಕೂಡ ಎಬಿ ಡಿವಿಲಿಯರ್ಸ್ ಅವರ ಕುರಿತಂತೆ ಒಂದು ವಿಶೇಷ ಸುದ್ದಿಯನ್ನು ಮಾತನಾಡಿದ್ದಾರೆ.

ಹೌದು ಗೆಳೆಯರೇ ವಿರಾಟ್ ಕೊಹ್ಲಿ ರವರು ಎಬಿ ಡಿವಿಲಿಯರ್ಸ್ ರವರು ಮುಂದಿನ ವರ್ಷದಿಂದ ಪರೋಕ್ಷವಾಗಿ ತಂಡದ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಹೇಳಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ವಿರಾಟ್ ಕೊಹ್ಲಿ ರವರು ಆರ್ಸಿಬಿ ತಂಡದ ಎಲ್ಲಾ ಮಾಹಿತಿಗಳನ್ನು ಮನೆಯಲ್ಲಿದ್ದುಕೊಂಡೇ ಇಂದಿಗೂ ಕೂಡ ಎಬಿ ಡಿವಿಲಿಯರ್ಸ್ ರವರು ಪಡೆದುಕೊಳ್ಳುತ್ತಿದ್ದಾರೆ ಮುಂದಿನ ವರ್ಷದಿಂದ ನೀವು ಅವರನ್ನು ಹೊಸ ಪಾತ್ರದಲ್ಲಿ ಆರ್ಸಿಬಿ ಯಲ್ಲಿ ಕಾಣಬಹುದಾಗಿದೆ ಎಂಬುದಾಗಿ ಹಿಂಟ್ ನೀಡಿದ್ದಾರೆ. ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳುವುದು ಕಷ್ಟ ಆದರೆ ಮುಂದಿನ ವರ್ಷ ಖಂಡಿತವಾಗಿ ಎಬಿ ಡಿವಿಲಿಯರ್ಸ್ ರವರು ಆರ್ಸಿಬಿ ಜೆರ್ಸಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಬಹುದಾಗಿದೆ. ಯಾವ ಪಾತ್ರದಲ್ಲಿ ಇರಬಹುದು ಎಂಬುದನ್ನು ಕಾಮೆಂಟ್ ಮೂಲಕ ನೀವು ನಮ್ಮೊಂದಿಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಹಂಚಿಕೊಳ್ಳಿ.