ಐಪಿಎಲ್ ಮುಗಿದ ಮೇಲೆ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಶಾಕ್, ಏನು ಗೊತ್ತೇ??

ಐಪಿಎಲ್ ಮುಗಿದ ಮೇಲೆ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಬಿಗ್ ಶಾಕ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ಈ ಬಾರಿ ಐಪಿಎಲ್ ನಲ್ಲಿ ಹಲವಾರು ಪ್ರತಿಭೆಗಳು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಳ್ಳಲು ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ತಮ್ಮ ಮೌಲ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಭಾಗವಹಿಸಲಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಇನ್ನು ಈ ಬಾರಿ ಯಾರೆಲ್ಲ ತಂಡದಲ್ಲಿ ಆಯ್ಕೆಯಾಗುತ್ತಾರೆ ಎಂಬುದನ್ನು ಕೂಡ ಕಾದುನೋಡಬೇಕಾಗಿದೆ.

ಐಪಿಎಲ್ ಮುಗಿದಮೇಲೆ ಮೊದಲಿಗೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಆಡಲಿದೆ. ಹೀಗಾಗಿ ಭಾರತೀಯ ಕ್ರಿಕೆಟಿಗರು ಮೊದಲು ಈ ಸರಣಿಗೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಬೇಕಾಗಿದೆ. ಇನ್ನು ಇದರಿಂದಲೇ ಹಲವಾರು ಸರಣಿಗಳು ವರ್ಲ್ಡ್ ಕಪ್ ಗೂ ಮುನ್ನ ಪ್ರಾರಂಭವಾಗಲಿದ್ದು ಭಾರತೀಯ ಕ್ರಿಕೆಟ್ ತಂಡವನ್ನು ಈ ಸರಣಿಗಳು ವಿಶ್ವಕಪ್ ಗೆ ಸಿದ್ದಗೊಳಿಸಲಿವೆ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೇ 29ಕ್ಕೆ ಈ ಬಾರಿ ಟಾಟಾ ಐಪಿಎಲ್ 2022 ಮುಗಿಯಲಿದ್ದು ಅತಿ ಶೀಘ್ರದಲ್ಲಿಯೇ ಅಂದರೆ ಮುಂದಿನ ತಿಂಗಳು ಸೌತ್ ಆಫ್ರಿಕಾ ವಿರುದ್ಧದ ಸರಣಿ ಪ್ರಾರಂಭವಾಗಲಿದೆ.

ಈ ಸರಣಿ ಆರಂಭವಾಗುವ ಮುನ್ನವೇ ಈಗ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತಕಾರಿ ವಿಷಯ ಬಡಿದಪ್ಪಳಿಸಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಿದ್ದ ಭರವಸೆಯ ಭಾರತೀಯ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ರವರು ಸ್ನಾಯು ಸೆಳೆತಕ್ಕೆ ಒಳಗಾಗಿದ್ದು ಈಗಾಗಲೇ ಈ ಬಾರಿ ಐಪಿಎಲ್ ನಿಂದ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆದರೆ ಈ ಸ್ನಾಯುಸೆಳೆತ ಎನ್ನುವುದು ಇನ್ನಷ್ಟು ತೀವ್ರ ರೂಪವನ್ನು ಪಡೆದುಕೊಂಡಿದ್ದು ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಕೂಡ ಸೂರ್ಯ ಕುಮಾರ್ ಯಾದವ್ ಅಲಭ್ಯರಾಗಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಒಂದು ಶಾ’ಕಿಂಗ್ ಸುದ್ದಿ ಆಗಿದೆ ಎಂದರೆ ತಪ್ಪಾಗಲಾರದು.