ಮೊದಲ ಬಾರಿಗೆ ತನ್ನ ಕಳಪೆ ಫಾರ್ಮ್ ಕುರಿತಂತೆ ಮೌನ ಮುರಿತು ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತೇ?? ಭಾವುಕರಾದ ಅಭಿಮಾನಿಗಳು. ಯಾಕೆ ಗೊತ್ತೇ??

ಮೊದಲ ಬಾರಿಗೆ ತನ್ನ ಕಳಪೆ ಫಾರ್ಮ್ ಕುರಿತಂತೆ ಮೌನ ಮುರಿತು ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತೇ?? ಭಾವುಕರಾದ ಅಭಿಮಾನಿಗಳು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ವಿರಾಟ್ ಕೊಹ್ಲಿ ರವರು ಅತ್ಯಂತ ಕಳಪೆ ಪ್ರದರ್ಶನವನ್ನು ದಾಖಲಿಸಿದ್ದಾರೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಇದು ಅವರ ಕರಿಯರ್ ನಲ್ಲಿಯೇ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿರುವ ಸೀ‌ಸನ್ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಹೌದು ಗೆಳೆಯರೇ ಐಪಿಎಲ್ ನಲ್ಲಿ ಒಂದು ಸೀಸನ್ ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವ ದಾಖಲೆಯನ್ನು ವಿರಾಟ್ ಕೊಹ್ಲಿ ರವರು ಒಂದು ಕಾಲದಲ್ಲಿ ಹೊಂದಿದ್ದರು. ಆದರೆ ಈ ಸೀಸನ್ ನಲ್ಲಿ ಮೂರು ಬಾರಿ ಗೋಲ್ಡನ್ ಡಕ್ ಗೆ ಔಟ್ ಆಗುವ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ ಎಂದು ಹೇಳಬಹುದಾಗಿದೆ.

ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ನಡುವೆಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಉತ್ತಮ ಸ್ಥಾನವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಡುಪ್ಲೆಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 12 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಐದರಲ್ಲಿ ಸೋತು 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮಿಂಚುತ್ತಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿಯೊಂದು ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ರವರ ಒಂದು ಕಾಲದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. ಇನ್ನು ತಮ್ಮ ಕಳಪೆ ಪ್ರದರ್ಶನದ ಕುರಿತಂತೆ ಡ್ಯಾನಿಶ್ ಸೇಟ್ ರವರು ನಡೆಸಿಕೊಡುವ ಇನ್ಸೈಡರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಬಾರಿಯ ಕಳಪೆ ಪ್ರದರ್ಶನವನ್ನು ನೋಡಿದ ನಂತರ ನಾನೇ ಮಿಸ್ಟರ್ ನ್ಯಾಗ್ಸ್ ಎನ್ನುವ ಮನೋಭಾವದ ಲಿದ್ದೇನೆ ಎಂಬುದಾಗಿ ಬೇಸರದಲ್ಲಿ ಹೇಳಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್ ನಲ್ಲಿ ಯಾವತ್ತೂ ಕೂಡ ಹೀಗೆ ಆಗಿರಲಿಲ್ಲ ಈಗ ನನ್ನ ಜೀವನದಲ್ಲಿ ನಾನು ಎಲ್ಲವನ್ನೂ ಕೂಡ ನೋಡುತ್ತಿದ್ದೇನೆ. ಹೊರಗಿನ ಜಗತ್ತಿನಲ್ಲಿ ಕೇಳಿಬರುವ ಟೀಕಾ ಮಾತುಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ಅವರು ನನ್ನ ಆಟವನ್ನು ಆಡಲು ಸಾಧ್ಯವಿಲ್ಲ ನನ್ನ ಜೀವನದಲ್ಲಿ ಜೀವಿಸಲು ಸಾಧ್ಯವಿಲ್ಲ. ಹೀಗಾಗಿ ಈಗ ಈ ಪರಿಸ್ಥಿತಿಯಿಂದ ನಾನು ಕೆಲವೊಂದು ಪಾಠಗಳನ್ನು ಕಲಿಸಿದ್ದೇನೆ ಎಂಬುದಾಗಿ ಕೂಡ ವಿರಾಟ್ ಕೊಹ್ಲಿ ರವರು ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಅದೇನೇ ಇರಲಿ ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ರವರು ಮತ್ತೆ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಲಿ ಎನ್ನುವುದಾಗಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.