ಪಾಂಡ್ಯ ಪಂತ್ ಅಲ್ಲವೇ ಅಲ್ಲ, ಭಾರತದ ವಿಶ್ವಕಪ್ ತಂಡದಲ್ಲಿ ಫಿನಿಶರ್ ಯಾರು ಆಗಬೇಕಂತೆ ಗೊತ್ತೇ?? ಮೈಕಲ್ ವಾನ್ ರವರ ಆಯ್ಕೆ ಯಾರು ಗೊತ್ತೇ??

ಪಾಂಡ್ಯ ಪಂತ್ ಅಲ್ಲವೇ ಅಲ್ಲ, ಭಾರತದ ವಿಶ್ವಕಪ್ ತಂಡದಲ್ಲಿ ಫಿನಿಶರ್ ಯಾರು ಆಗಬೇಕಂತೆ ಗೊತ್ತೇ?? ಮೈಕಲ್ ವಾನ್ ರವರ ಆಯ್ಕೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಐಪಿಎಲ್ ನಲ್ಲಿ ಆಟಗಾರರು ನೀಡುವಂತಹ ಪ್ರದರ್ಶನದ ಮೇರೆಗೆ ಬಿಸಿಸಿಐ ಆಯ್ಕೆ ಸಮಿತಿ ಇದೇ ವರ್ಷ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವಂತಹ ವರ್ಲ್ಡ್ ಕಪ್ ಗೆ ಟೀಮ್ ಇಂಡಿಯಾ ತಂಡವನ್ನು ತಯಾರು ಮಾಡಲಿದೆ ಎಂಬುದಾಗಿ ಕೂಡಾ ಸುದ್ದಿಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿದೆ. ಹೀಗಾಗಿ ಈ ಬಾರಿ ತಂಡದಿಂದ ಹೊರಗಿದ್ದ ಹಲವಾರು ಆಟಗಾರರು ಐಪಿಎಲ್ ನಲ್ಲಿ ಸಾಕಷ್ಟು ಉತ್ತಮವಾಗಿ ಅತ್ಯುತ್ತಮವಾಗಿ ಪರ್ಫಾರ್ಮೆನ್ಸ್ ಹೇಳುತ್ತಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ತಂಡದ ಫಿನಿಶರ್ ಜವಾಬ್ದಾರಿಯನ್ನು ಮೊದಲಿನಿಂದಲೂ ಕೂಡ ಮಹೇಂದ್ರ ಸಿಂಗ್ ಧೋನಿಯವರು ನಿರ್ವಹಿಸಿಕೊಂಡು ಬಂದಿದ್ದಾರೆ. ಆದರೆ ಅವರ ನಿವೃತ್ತಿಯ ನಂತರ ಆ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ರವರು ಕೊಂಚಮಟ್ಟಿಗೆ ನಿರ್ವಹಿಸಿದ್ದರು. ಆದರೆ ಇಂಜುರಿ ಕಾರಣದಿಂದಾಗಿ ಅವರು ತಂಡದಲ್ಲಿ ಇರುವುದು ಕಡಿಮೆ ಆಗಿದೆ ಹಾಗೂ ಆಸ್ಪತ್ರೆಯಲ್ಲಿ ಇರುವುದು ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.

ಹೀಗಾಗಿ ಮಹೇಂದ್ರ ಸಿಂಗ್ ಧೋನಿಯವರ ಆರು ಹಾಗೂ 7ನೇ ಕ್ರಮಾಂಕದಲ್ಲಿ ಸಮರ್ಥವಾಗಿ ತಂಡವನ್ನು ಆಧರಿಸ ಬಲ್ಲಂತ ಬ್ಯಾಟ್ಸ್ಮನ್ ಕೊರತೆ ಟೀಮ್ ಇಂಡಿಯಾಗೆ ಇತ್ತು ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಈ ಬಾರಿಯ ಐಪಿಎಲ್ ಅನ್ನು ನೋಡಿದ ನಂತರ ಇಂಗ್ಲೆಂಡ್ ತಂಡದ ಮಾಜಿ ನಾಯಕನಾಗಿರುವ ಮೈಕಲ್ ವಾನ್ ರವರು ಒಬ್ಬ ಆಟಗಾರನ ಹೆಸರನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಹೌದು ಗೆಳೆಯರೇ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಫಿನಿಶರ್ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ರವರನ್ನು ಈ ಬಾರಿಯ ವರ್ಲ್ಡ್ ಕಪ್ ತಂಡದಲ್ಲಿ ಆಯ್ಕೆ ಮಾಡಬೇಕು ಎನ್ನುವುದಾಗಿ ಬಲವಾಗಿ ಪ್ರತಿಪಾದಿಸಿದ್ದಾರೆ. ಮೊದಲ ಎಸೆತ ದಿಂದಲೇ ಸಿಕ್ಸರ್ ಬಾರಿಸುವ ಕ್ಷಮತೆ ದಿನೇಶ್ ಕಾರ್ತಿಕ್ ರವರಿಗಿದೆ ಹೀಗಾಗಿ ಅವರಿಗೆ ಭಾರತೀಯ ತಂಡದಲ್ಲಿ ಸ್ಥಾನ ಸಿಗಬೇಕಾಗಿರುವುದು ಅತ್ಯಗತ್ಯವಾಗಿದೆ ಎಂಬುದಾಗಿ ಹೇಳಿದ್ದಾರೆ. ಮೈಕಲ್ ವಾನ್ ರವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.