ಆರ್ಸಿಬಿ ಕಪ್ ಗೆಲ್ಲಬಹುದಾದರೆ ಅದಕ್ಕೆ ಇರುವ ಕಾರಣಗಳು ಏನಂತೆ ಗೊತ್ತೇ?? ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು ಗೊತ್ತೇ?

ಆರ್ಸಿಬಿ ಕಪ್ ಗೆಲ್ಲಬಹುದಾದರೆ ಅದಕ್ಕೆ ಇರುವ ಕಾರಣಗಳು ಏನಂತೆ ಗೊತ್ತೇ?? ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಪ್ಲೇ ಆಫ್ ರೇಸ್ ದಿನೇ ದಿನೇ ಕಾವು ಪಡೆಯುತ್ತಿದೆ. ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಹೊರತುಪಡಿಸಿದರೇ ಉಳಿದೆಲ್ಲಾ ತಂಡಗಳು ಪ್ಲೇ ಆಫ್ ರೇಸ್ ಗೆ ಅರ್ಹತೆ ಪಡೆದುಕೊಳ್ಳಲು ಹರಸಾಹಸ ಮಾಡುತ್ತಿವೆ. ಇನ್ನು ಈ ನಡುವೆ ಹ್ಯಾಟ್ರಿಕ್ ಸೋಲಿನಿಂದ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿದ್ದ ಕನ್ನಡಿಗರ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ.

ಕಳೆದ ಭಾರಿ ಮುಖಾಮುಖಿಯಾದಾಗ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಹೀನಾಯವಾಗಿ ಸೋತ ಸೇಡನ್ನು ಆರ್ಸಿಬಿ ತಂಡ ನಿನ್ನೆ ತೀರಿಸಿಕೊಂಡಿತು. ಈ ನಡುವೆ ಆರ್ಸಿಬಿ ಏಕಪಕ್ಷೀಯವಾಗಿ ಗೆದ್ದು ಬೀಗಿದ ನಂತರ ಆರ್ಸಿಬಿ ನಾಯಕ ಫಾಪ್ ಡು ಪ್ಲೇಸಿಸ್ ರವರ ನಾಯಕತ್ವನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅವರ ಪ್ರಕಾರ ಆರ್ಸಿಬಿ ಈ ಭಾರಿ ಕಪ್ ಗೆಲ್ಲಬಹುದಂತೆ. ಅದಕ್ಕೆ ಸೂಕ್ತ ಕಾರಣ ಸಹ ನೀಡಿದ್ದಾರೆ. ಬನ್ನಿ ಆ ಕಾರಣಗಳು ಏನೆಂಬುದನ್ನು ತಿಳಿಯೋಣ.

ವಾನ್ ಪ್ರಕಾರ ಡು ಪ್ಲೇಸಿಸ್ ಉತ್ತಮ ನಾಯಕ. ಇನ್ನಿಂಗ್ಸ್ ಆರಂಭಿಸಿದರಿಂದ ಹಿಡಿದು ಕೊನೆ ಬಾಲ್ ತನಕ ಇನ್ನಿಂಗ್ಸ್ ಕಟ್ಟುತ್ತಾರೆ. ಅದಲ್ಲದೇ ಬೇಕೆಂದಾಗ ಗೇರ್ ಬದಲಿಸಿ ತಂಡ ಉತ್ತಮ ರನ್ ಗಳಿಸುವಂತೆ ಮಾಡುತ್ತಾರೆ. ಅದಲ್ಲದೇ ತಮ್ಮ ಬೌಲರ್ ಗಳನ್ನು ಚೆನ್ನಾಗಿ ಬಳಸುತ್ತಾರೆ. ಹತ್ತು ಓವರ್ ನೊಳಗೆ ತಮ್ಮ ತಂಡದ ಎಲ್ಲಾ ಬೌಲರ್ ಗಳನ್ನು ಪ್ರಯೋಗಿಸುತ್ತಾರೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದ ಬೌಲರ್ ಗಳಿಗೆ ಹೆಚ್ಚಿನ ಓವರ್ ನೀಡುವ ಮೂಲಕ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಆರ್ಸಿಬಿ ಹಲವಾರು ಭಾರಿ ಪಂದ್ಯ ಗೆದ್ದಿದ್ದು ಇದೇ ಕಾರಣಕ್ಕೆ. ಹಾಗಾಗಿ ಆರ್ಸಿಬಿ ತಂಡ ಈ ಭಾರಿ ಕಪ್ ಗೆಲ್ಲಬಹುದು. ಡು ಪ್ಲೇಸಿಸ್ ರವರ ಚಾಣಾಕ್ಷ ನಾಯಕತ್ವ ಆರ್ಸಿಬಿಗೆ ಮೊದಲ ಕಪ್ ಗೆಲ್ಲಿಸಿಕೊಡುವ ಸಾಧ್ಯತೆ ಇದೆ ಎಂದು ಮೈಕಲ್ ವಾನ್ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.