ಇಶಾನ್, ರಾಹುಲ್, ದಿನೇಶ್ ಇವರೆಲ್ಲರನ್ನು ಅಲ್ಲಾ, ತಂಡದಲ್ಲಿ ಮತ್ತೊಬ್ಬರಿಗೆ ಚಾನ್ಸ್ ನೀಡಿ ಎಂದ ವೀರೇಂದ್ರ ಸೆಹ್ವಾಗ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

ಇಶಾನ್, ರಾಹುಲ್, ದಿನೇಶ್ ಇವರೆಲ್ಲರನ್ನು ಅಲ್ಲಾ, ತಂಡದಲ್ಲಿ ಮತ್ತೊಬ್ಬರಿಗೆ ಚಾನ್ಸ್ ನೀಡಿ ಎಂದ ವೀರೇಂದ್ರ ಸೆಹ್ವಾಗ್, ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ನಲ್ಲಿ ತಮ್ಮನ್ನು ತಾವು ಸಾಬೀತು ಪಡಿಸುವ ಮೂಲಕ ಈ ಬಾರಿಯ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವಂತಹ ಟಿ ಟ್ವೆಂಟಿ ವರ್ಲ್ಡ್ ಕಪ್ ಗೆ ಆಯ್ಕೆಗಾರರ ಗಮನವನ್ನು ಸೆಳೆಯಲು ಎಲ್ಲರೂ ಕೂಡ ಸಾಕಷ್ಟು ಪ್ರಯತ್ನವನ್ನು ಪಡುತ್ತಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಆಗಿ ಮೊದಲ ಆಯ್ಕೆಯಾಗಿ ರಿಷಬ್ ಪಂತ್ ರವರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಬ್ಯಾಕಪ್ ವಿಕೆಟ್ ಕೀಪರ್ ಅನ್ನು ನೋಡುವುದಾದರೆ ಅಲ್ಲಿ ಸಾಕಷ್ಟು ಆಯ್ಕೆಗಳು ನಮಗೆ ದೊರೆಯುತ್ತವೆ.

ಹೌದು ಗೆಳೆಯರೇ ಅದರಲ್ಲಿ ಈ ಬಾರಿಯ ಸೀಸನ್ ನಲ್ಲಿ ಇಶನ್ ಕಿಶನ್ ವೃದ್ಧಿಮಾನ್ ಸಾಹಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ರವರು ಕೂಡ ಭರವಸೆಯ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹಾಗೂ ಇವರೆಲ್ಲರೂ ಕೂಡ ವಿಶ್ವಕಪ್ ತಂಡದಲ್ಲಿ ಆಡಲು ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ ಎಂದರು ತಪ್ಪಾಗಲಾರದು. ಆದರೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೇವಾಗ್ ರವರು ಇವರಿಗಿಂತ ಹೆಚ್ಚಾಗಿ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನ್ನು ಆಯ್ಕೆಗಾರರಿಗೆ ಆಯ್ಕೆ ಮಾಡಲು ಸಲಹೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಆ ಆಟಗಾರ ಯಾರು ಎಂಬುದನ್ನು ನೋಡುವುದಾದರೆ ಬನ್ನಿ ಸಂಪೂರ್ಣವಾಗಿ ತಿಳಿಯೋಣ.

ಹೌದು ಗೆಳೆಯರೇ ವೀರೇಂದ್ರ ಸೆಹ್ವಾಗ್ ಅವರು ಹೇಳಿರುವ ಕ್ರಿಕೆಟಿಗ ಮತ್ತಿನ್ಯಾರು ಅಲ್ಲ ಪಂಜಾಬ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಆಗಿರುವ ಜೀತೇಶ್ ಶರ್ಮಾ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿರ್ಭೀತಿಯಿಂದ 18 ಎಸೆತಗಳಲ್ಲಿ 38 ರನ್ನುಗಳನ್ನು ಬಾರಿಸಿದ್ದರು. ಜಿತೇಶ್ ಶರ್ಮರವರ ಬ್ಯಾಟಿಂಗ್ ಶೈಲಿ ನನಗೆ ವಿವಿಎಸ್ ಲಕ್ಷ್ಮಣ್ ರವರನ್ನು ನೆನಪು ಮಾಡಿಸುತ್ತದೆ ಎಂಬುದಾಗಿ ಕೂಡ ಕಾಂಪ್ಲಿಮೆಂಟ್ ನೀಡಿದ್ದಾರೆ. ಅಗ್ರೆಸ್ಸಿವ್ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ಜಿತೇಶ್ ಶರ್ಮ ರವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಬೇಕು ಎಂಬುದಾಗಿ ವೀರೇಂದ್ರ ಸೆಹ್ವಾಗ್ ಅವರು ಸಲಹೆ ನೀಡಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.