ಯಶಸ್ಸಿನ ನಟಿಯಾರಾಗಿದ್ದರೂ ಕೂಡ ಕ್ರಿಕೆಟಿಗರನ್ನು ಮದುವೆಯಾದ ನಂತರ ಚಿತ್ರರಂಗಕ್ಕೆ ವಿದಾಯ ಹೇಳಿರುವ ನಟಿಯರು ಯಾರ್ಯಾರು ಗೊತ್ತೇ??

ಯಶಸ್ಸಿನ ನಟಿಯಾರಾಗಿದ್ದರೂ ಕೂಡ ಕ್ರಿಕೆಟಿಗರನ್ನು ಮದುವೆಯಾದ ನಂತರ ಚಿತ್ರರಂಗಕ್ಕೆ ವಿದಾಯ ಹೇಳಿರುವ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ಕ್ಷೇತ್ರದ ಕ್ರೀಡಾಪಟುಗಳು ಈಗಾಗಲೇ ಕೇವಲ ಆಟದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ಸಾಕಷ್ಟು ಯಶಸ್ವಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಕ್ರಿಕೆಟ್ ಹಾಗೂ ಬಾಲಿವುಡ್ ಚಿತ್ರರಂಗಕ್ಕೆ ಹಿಂದಿನಿಂದಲೂ ಕೂಡ ಬಿಡಿಸಲಾಗದಂತಹ ಅವಿನಾಭಾವ ನಂಟು. ಕೆಲವು ನಟಿಯರು ಕ್ರಿಕೆಟಿಗರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಸುರಸುಂದರಿಯರಾಗಿದ್ದರೂ ಕೂಡ ಕ್ರಿಕೆಟಿಗರನ್ನು ಮದುವೆಯಾದ ನಂತರ ಚಿತ್ರರಂಗದಿಂದ ದೂರ ವಾದಂತಹ ನಟಿಯರ ಕುರಿತಂತೆ ಇಂದಿನ ವಿಚಾರದಲ್ಲಿ ಹೇಳಲು ಹೊರಟಿದ್ದೇವೆ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಸಂಗೀತ ಬಿಜ್ಲಾನಿ; 80 ಹಾಗೂ 90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಂಗೀತ ಬಿಜ್ಲಾನಿ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದರು. ಇವರ ಹೆಸರು ಸಲ್ಮಾನ್ ಖಾನ್ ರವರಂತಹ ಸ್ಟಾರ್ ಬಾಲಿವುಡ್ ನಟರ ಜೊತೆ ಕೇಳಿಬಂದಿತ್ತು. ಇನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ರಾಗಿರುವ ಮೊಹಮ್ಮದ್ ಅಜರುದ್ದಿನ್ ರವರು ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ 1996 ರಲ್ಲಿ ಸಂಗೀತ ಬಿಜ್ಲಾನಿ ರವರನ್ನು ವಿವಾಹವಾಗುತ್ತಾರೆ. ಮೊಹಮ್ಮದ್ ಅಜರುದ್ದಿನ್ ರವರನ್ನು ವಿವಾಹವಾದ ನಂತರ ಚಿತ್ರರಂಗದಿಂದ ದೂರ ಆದಂತಹ ಸಂಗೀತ ಬಿಜ್ಲಾನಿ ರವರು 2010 ರಲ್ಲಿ ಮೊಹಮ್ಮದ್ ಅಜರುದ್ದಿನ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾರೆ

ಹೆಜಲ್ ಕೀಚ್; ಹೆಜಲ್ ಮೂಲತಹ ಆಂಗ್ಲ ದೇಶದವರು. ಆಗಾಗ ಕೆಲವೊಮ್ಮೆ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಇವರು 2016 ರಲ್ಲಿ ವರ್ಲ್ಡ್ ಕಪ್ ಹೀರೋ ಆಗಿರುವ ಯುವರಾಜ್ ಸಿಂಗ್ ಅವರನ್ನು ವಿವಾಹವಾಗುತ್ತಾರೆ. ಇದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸಿದರು ಅಷ್ಟೇ ಅದಾದ ಮೇಲೆ ಯಾವುದೇ ಸಿನಿಮಾಗಳಲ್ಲಿ ಇದುವರೆಗೂ ಕೂಡ ಅವರು ಕಾಣಿಸಿಕೊಂಡಿಲ್ಲ. ಆದರೆ ಇಬ್ಬರೂ ಇಂದಿಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ಮಗುವೊಂದಕ್ಕೆ ಪೋಷಕರು ಕೂಡ ಆಗಿದ್ದಾರೆ.

ಸಾಗರಿಕಾ ಘಾಟ್ಗೆ; ಸಾಗರಿಕ ರವರು ಹಲವಾರು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ವೆಬ್ಸೇರಿಸ್ ಗಳಲ್ಲಿ ಕೂಡ ನೀವು ಇವರನ್ನು ನೋಡಿರಬಹುದು. ಆದರೆ ಇವರನ್ನು ಪ್ರಮುಖವಾಗಿ ನೀವು ಗುರುತಿಸುವುದು ಶಾರುಖ್ ಖಾನ್ ರವರ ಸೂಪರ್ ಹಿಟ್ ಚಿತ್ರ ಚಕ್ ದೆ ಇಂಡಿಯಾದಲ್ಲಿ. ಇನ್ನು ಇವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಗಿರುವ ಜಹೀರ್ ಖಾನ್ ರವರನ್ನು 2017 ರಲ್ಲಿ ಮದುವೆಯಾಗಿದ್ದಾರೆ. ಇದಾದ ನಂತರ ಅವರು ಬಹುತೇಕ ಚಿತ್ರರಂಗದಿಂದ ದೂರವೇ ಇದ್ದರು.

ನತಾಶ; ಸರ್ಬಿಯ ಮೂಲದ ಮಾಡೆಲ್ ಹಾಗೂ ಬಾಲಿವುಡ್ ಚಿತ್ರರಂಗದ ನಟಿ ಆಗಿರುವ ನತಾಶ ರವರನ್ನು ಹಾರ್ದಿಕ್ ಪಾಂಡ್ಯ ಹಲವಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದರು. ಈಗಾಗಲೇ ಇವರಿಬ್ಬರಿಗೂ ಅಗಸ್ತ್ಯ ಎನ್ನುವ ಮಗ ಕೂಡ ಇದ್ದಾನೆ. ಇವರಿಬ್ಬರು 2020 ರಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಸರಳವಾಗಿ ಮದುವೆಯಾಗುವ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೆ ತಳ್ಳಿದ್ದರು. ಮದುವೆಯಾದ ನಂತರ ನತಾಶ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ಗೀತ ಬಸ್ರಾ; ಒಂದುಕಾಲದ ಬಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಂತಹ ಗೀತಾ ಬಸ್ರಾ ರವರು ಭಾರತೀಯ ಕ್ರಿಕೆಟ್ ತಂಡದ ಟರ್ಬನೇಟರ್ ಖ್ಯಾತಿಯ ಯಶಸ್ವಿ ಸ್ಪಿನ್ ಬೌಲರ್ ಆಗಿರುವ ಹರಭಜನ್ ಸಿಂಗ್ ಅವರನ್ನು 2015 ರಲ್ಲಿ ಮದುವೆಯಾದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ಕಣ್ಮರೆಯಾಗುತ್ತಾರೆ. ಇನ್ನು ಇವರಿಬ್ಬರಿಗೆ ಬಂದು ಮಗು ಕೂಡ ಇದೆ. ಇವರೇ ಕ್ರಿಕೆಟಿಗರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ವಿದಾಯ ಹೇಳಿದ ಸ್ಟಾರ್ ನಟಿಯರು.