ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದುಡ್ಡಿದ್ರೆ ಏನು ಬೇಕಾದರೂ ಮಾಡಬಹುದು ಎನ್ನುವ ಲೋಕದಲ್ಲಿ, ರಾಮಚರಣ್ ಪತ್ನಿ ದುಡ್ಡಿದ್ರೆ ಒಳ್ಳೇದು ಕೂಡ ಮಾಡಬಹುದು ಎಂದು ತೋರಿಸಿದ್ದು ಹೇಗೆ ಗೊತ್ತೇ?? ಭೇಷ್ ಎಂದ ನೆಟ್ಟಿಗರು.

153

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗ ಎಂದು ಬಂದಾಗ ಹಲವಾರು ಸ್ಟಾರ್ ನಟರ ಉಲ್ಲೇಖ ಬಂದೇ ಬರುತ್ತದೆ. ಆದರೆ ಇತ್ತೀಚಿಗೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ರವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಅವರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ರಾಮಚರಣ್ ರವರು ತೆಲುಗು ಚಿತ್ರರಂಗದ ಮೆಗಾಸ್ಟಾರ್ ಎಂದೇ ಬಿರುದಾಂಕಿತರಾಗಿ ರುವ ಚಿರಂಜೀವಿ ರವರ ಸುಪುತ್ರ. ಸಾಮಾನ್ಯವಾಗಿ ಎಲ್ಲರೂ ಕೂಡ ಸ್ಟಾರ್ ನಟನ ಮಗ ಅದಕ್ಕಾಗಿ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಆದರೆ ಇಲ್ಲಿ ಶಿಫಾರಸ್ಸಿ ಗಿಂತ ಹೆಚ್ಚಾಗಿ ರಾಮಚರಣ್ ರವರ ಪ್ರತಿಭೆ ಹಾಗೂ ಪರಿಶ್ರಮ ಜನರಿಂದ ಮೆಚ್ಚಲ್ಪಟ್ಟಿದೆ ಎಂದರೆ ತಪ್ಪಾಗಲಾರದು. ಇನ್ನು ರಾಮಚರಣ್ ರವರು ಮುಂದಿನ ಸಿನಿಮಾದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ರಾಗಿರುವ ಶಂಕರ್ ಅವರ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಹೆಚ್ಚು ಡಿಮ್ಯಾಂಡ್ ನಲ್ಲಿರುವ ಸ್ಟಾರ್ ನಟರಲ್ಲಿ ಅಗ್ರಪಂಕ್ತಿಯಲ್ಲಿ ರಾಮಚರಣ್ ರವರು ಕಾಣಸಿಗುತ್ತಾರೆ. ಇನ್ನು ರಾಮ್ ಚರಣ್ ರವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಅವರು ಉಪಾಸನ ಕೊನಿಡೆಲ ರವರನ್ನು ಮದುವೆಯಾಗಿದ್ದಾರೆ.

ಇನ್ನು ಇತ್ತೀಚಿಗಷ್ಟೇ ರಾಮಚರಣ್ ರವರ ಪತ್ನಿ ಉಪಾಸನ ಕೊನಿಡೆಲ ಅವರು ಮಾಡಿರುವ ಕೆಲಸದ ಕುರಿತಂತೆ ಎಲ್ಲರೂ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಹೌದು ಗೆಳೆಯರೆ ಮೊದಲಿನಿಂದಲೂ ಕೂಡ ಸಾಮಾಜಿಕ ಕಾರ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ರಾಮ್ ಚರಣ್ ಅವರ ಪತ್ನಿ ಉಪಾಸನ ಕೊನಿಡೆಲ ಇತ್ತೀಚಿಗೆ ಮಾಡಿರುವ ಕೆಲಸವನ್ನು ಎಲ್ಲರೂ ಮನಗೆದ್ದಿದೆ. ಹೌದು ಗೆಳೆಯರಿಗೂ ಉಪಾಸನ ರವರು ಒಮ್ಮೆಲೇ 150ಕ್ಕೂ ಅಧಿಕ ವೃದ್ಧಾಶ್ರಮಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಬಿತ್ತರವಾಗಿದ್ದು ಉಪಾಸನ ರವರಿಗೆ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿದೆ. ನಿಜಕ್ಕೂ ಕೂಡ ಈ ಮೂಲಕ ಅವರು ಈ ಕೆಲಸ ಮಾಡಲು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಬಹುದಾಗಿದೆ.

Get real time updates directly on you device, subscribe now.