ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ರವರ ಪ್ರಕಾರ ಯಾರು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುತ್ತಾರಂತೆ ಗೊತ್ತೇ?? ಆ ಆಟಗಾರ ಯಾರು ಗೊತ್ತೇ??

ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ರವರ ಪ್ರಕಾರ ಯಾರು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುತ್ತಾರಂತೆ ಗೊತ್ತೇ?? ಆ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರಲ್ಲಿ ಯಾವ ತಂಡ ಕಪ್ ಗೆಲ್ಲಲಿದೆ ಎಂಬ ನೀರಿಕ್ಷೆಯ ಜೊತೆ ಯಾರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆಲ್ಲುತ್ತಾರೆ ಅದೇ ರೀತಿ ಯಾರು ಅತಿ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಗೆಲ್ಲುತ್ತಾರೆ ಎಂಬ ಚರ್ಚೆ ಸಹ ಜೋರಾಗಿ ನಡೆಯುತ್ತಿದೆ. ಸದ್ಯ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ವಿಕೆಟ್ ಕೀಪರ್ ಬ್ಯಾಟ್ಸಮನ್ ಜೋಸ್ ಬಟ್ಲರ್ 500 ಕ್ಕೂ ಅಧಿಕ ರನ್ ಗಳಿಸಿ ಆರೇಂಜ್ ಕ್ಯಾಪ್ ವಿಜೇತರಾಗಿದ್ದಾರೆ.

ಇನ್ನು ಅದೇ ರಾಜಸ್ಥಾನ ರಾಯಲ್ಸ್ ತಂಡದ ಬೌಲರ್ ಯುಜವೇಂದ್ರ ಚಾಹಲ್ 19 ಕ್ಕೂ ಹೆಚ್ಚು ವಿಕೆಟ್ ಗಳಿಸಿ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಇವರಿಬ್ಬರಿಗೆ ಪ್ರತಿಸ್ಪರ್ಧಿಗಳೆಂಬಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸಮನ್,ಕನ್ನಡಿಗ ಕೆ.ಎಲ್.ರಾಹುಲ್ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ರಾಹುಲ್ ಇರುವ ಫಾರ್ಮ್ ನಲ್ಲಿ ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲದೀಪ್ ಯಾದವ್ ಸಹ ತಮ್ಮ ಗೆಳೆಯ ಯುಜವೇಂದ್ರ ಚಾಹಲ್ ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಕೋಚ್ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಆರೆಂಜ್ ಕ್ಯಾಪ್ ಗೆಲ್ಲುವ ಬಗ್ಗೆ ಬೇರೆಯದೇ ಅಭಿಪ್ರಾಯ ಹೇಳಿದ್ದಾರೆ. ರವಿಶಾಸ್ತ್ರಿ ಪ್ರಕಾರ ಸದ್ಯ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಬಟ್ಲರ್ ಮುಂದಿದ್ದರೂ, ಉಳಿದ ಪಂದ್ಯಗಳನ್ನು ಗಮನಕ್ಕೆ ತೆಗೆದುಕೊಂಡರೆ ರಾಹುಲ್ ರವರೇ ಬಟ್ಲರ್ ಗಿಂತಲೂ ಜಾಸ್ತಿ ರನ್ ಗಳಿಸಬಹುದು. ಒಮ್ಮೆ ಕೆ‌.ಎಲ್.ರಾಹುಲ್ ಫಾರ್ಮ್ ಕಂಡುಕೊಂಡರೇ ಅದನ್ನು ಅದ್ಭುತ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ. ಆದರೇ ಬಟ್ಲರ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಾರೆ. ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ಬಟ್ಲರ್ ಗಿಂತಲೂ ರಾಹುಲ್ ನಿಪುಣರು. ಹಾಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಪ್ರವೇಶಿಸಿ ಫೈನಲ್ ಆಡಿದ್ದೇ,ಆದರೇ ಕೆ.ಎಲ್.ರಾಹುಲ್ ರವರೇ ಆರೆಂಜ್ ಕ್ಯಾಪ್ ವಿಜೇತರಾಗುವ ಎಲ್ಲಾ ಸಂಭವ ಸೃಷ್ಟಿಯಾದರೂ ಅಚ್ಚರಿ ಇಲ್ಲ ಎಂಬುದನ್ನು ರವಿಶಾಸ್ತ್ರಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.