ಐಪಿಎಲ್ ಗು ಮುನ್ನ ಭರವಸೆ ಮೂಡಿಸಿ ಈಗ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಳ್ಳಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ಐಪಿಎಲ್ ಗು ಮುನ್ನ ಭರವಸೆ ಮೂಡಿಸಿ ಈಗ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಳ್ಳಬಹುದಾದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ರ ಪ್ಲೇ ಆಫ್ ರೇಸ್ ನಿಧಾನವಾಗಿ ಅಂತಿಮಗೊಳ್ಳುತ್ತಿದೆ. ಆದರೇ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಹಲವರಿಗೆ ಈಗ ಟೀಮ್ ಇಂಡಿಯಾದಿಂದ ಹೊರಬೀಳುವ ಭಯ ಎದುರಾಗಿದೆ. ಐಪಿಎಲ್ ಮುಗಿದ ನಂತರ ಆ ಆಟಗಾರರು ಪುನಃ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸ ನಡೆಸಬೇಕಿದೆ. ಬನ್ನಿ ಅಂತಹ ಟಾಪ್ 5 ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ಟಾಪ್ 5 : ಭುವನೇಶ್ವರ್ ಕುಮಾರ್ – ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಭುವನೇಶ್ವರ್ ಕುಮಾರ್ ಉತ್ತಮ ಲಯದಲ್ಲಿದ್ದರೂ ವಿಕೇಟ್ ಪಡೆಯುವಲ್ಲಿ ಎಡವುತ್ತಿದ್ದಾರೆ. ಅದಲ್ಲದೇ ಟೀಂ ಇಂಡಿಯಾದಲ್ಲಿ ಮಹಮದ್ ಶಮಿ, ಜಸಪ್ರಿತ್ ಬುಮ್ರಾ ಸ್ಥಾನ ಗಟ್ಟಿಯಾಗಿದೆ. ಮೂರನೇ ವೇಗಿ ಸ್ಥಾನಕ್ಕೆ ಉಮ್ರಾನ್ ಮಲೀಕ್ ಸೇರಿದಂತೆ ಇತರ ವೇಗಿಗಳು ತೀವ್ರ ಪೈಪೋಟಿ ನೀಡುತ್ತಿರುವ ಕಾರಣ ಭುವಿ ತಂಡದಿಂದ ಹೊರಬೀಳುವ ಸಾಧ್ಯತೆ ಇದೆ.

ಟಾಪ್ 4 : ರುತುರಾಜ್ ಗಾಯಕ್ವಾಡ್ – ಕಳೆದ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ವಿಜೇತರಾಗಿದ್ದ ರುತುರಾಜ್ ಗಾಯಕ್ವಾಡ್ ಬ್ಯಾಟ್ ನಿಂದ ಈ ಭಾರಿ ರನ್ ಗಳು ಬರುತ್ತಿಲ್ಲ. ಹಾಗಾಗಿ ಈ ಭಾರಿ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಕಷ್ಟ. ಕಳೆದ ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆಯೇನು ಮಾಡಿಲ್ಲ.

ಟಾಪ್ 3 : ಶಾರ್ದೂಲ್ ಠಾಕೂರ್ – ಸ್ವಿಂಗ್ ಬೌಲರ್ ಶಾರ್ದೂಲ್ ಜಾದೂ ಈ ಭಾರಿಯ ಐಪಿಎಲ್ ನಲ್ಲಿ ಎಲ್ಲಿಯೂ ಸಹ ಕಾಣಲಿಲ್ಲ. ಬ್ಯಾಟಿಂಗ್ ನಲ್ಲಿ ಸಹ ಮಿಂಚಲಿಲ್ಲ. ಹೀಗಾಗಿ ಶಾರ್ದೂಲ್ ಠಾಕೂರ್ ರವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.

ಟಾಪ್ 2 : ವೆಂಕಟೇಶ್ ಅಯ್ಯರ್ – ಹಾರ್ದಿಕ್ ಪಾಂಡ್ಯ ಬದಲು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ವೆಂಕಟೇಶ್ ಅಯ್ಯರ್ ಈಗ ಕಳಪೆ ಪ್ರದರ್ಶನದಿಂದ ಕೆಕೆಆರ್ ತಂಡದ ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಕ್ಕೆ ವಾಪಸ್ ಆದರೇ, ವೆಂಕಟೇಶ್ ಅಯ್ಯರ್ ತಂಡದಿಂದ ಹೊರಬೀಳಲಿದ್ದಾರೆ.

ಟಾಪ್ 1 : ಇಶಾನ್ ಕಿಶನ್ – ವಿಕೆಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ಈ ಭಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದಲ್ಲದೇ ವಿಕೆಟ್ ಕೀಪರ್ ಬ್ಯಾಟ್ಸಮನ್ ಗಳಾಗಿ ತಂಡದಲ್ಲಿ ರಿಷಭ್ ಪಂತ್ ಹಾಗೂ ಕೆ.ಎಲ್.ರಾಹುಲ್ ಇರುವ ಕಾರಣ, ಇಶಾನ್ ಕಿಶನ್ ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.