ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಚೀನಾ ದೇಶಕ್ಕೂ ಕ್ಯಾರೇ ಎನ್ನದೆ ಬಾಂಗ್ಲಾದೇಶದ ಅತಿ ದೊಡ್ಡ ಬಂದರು ಭಾರತಕ್ಕೆ, ಈ ಭರ್ಜರಿ ಆಫರ್ ಹಿಂದಿನ ಉದ್ದೇಶ ಏನು ಗೊತ್ತೇ?? ಭಾರಕ್ಕಾಗುವ ಲಾಭವೇನು ಗೊತ್ತೇ??

119

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಂಗ್ಲಾದೇಶ ತನ್ನ ಅತ್ಯಂತ ಪ್ರಮುಖ ಹಾಗೂ ದೊಡ್ಡ ಬಂದರು ಆಗಿರುವ ಚಿತ್ತಗಾಂಗ್ ಬಂದರನ್ನು ಉಪಯೋಗಿಸಿಕೊಳ್ಳಿ ಎನ್ನುವುದಾಗಿ ನಮ್ಮ ದೇಶಕ್ಕೆ ಆಫರ್ ನೀಡಿದೆ. ಬಾಂಗ್ಲಾದೇಶದ ಶೇಕಡ 70ರಷ್ಟು ರಫ್ತು ಹಾಗೂ ಆಮದು ನಡೆಯುವುದು ಇದೇ ಬಂದರಿನಲ್ಲಿ. ಬಾಂಗ್ಲಾದೇಶದ ಆರ್ಥಿಕತೆಯ ಪ್ರಮುಖ ಜೀವಾಳವಾಗಿರುವ ಈ ಬಂದರನ್ನು ಉಪಯೋಗಿಸಿಕೊಳ್ಳಲು ಭಾರತ ದೇಶಕ್ಕೆ ಆಫರ್ ನೀಡುತ್ತಿರುವುದು ಆದರೂ ಯಾಕೆ ಇದರಿಂದ ಆಗುವಂತಹ ಉಪಯೋಗವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚೆಗಷ್ಟೇ ನಮ್ಮ ವಿದೇಶಾಂಗ ಸಚಿವರಾಗಿರುವ ಎಸ್ ಜೈಶಂಕರ್ ಅವರು ಭೂತಾನ್ ಹಾಗೂ ಬಾಂಗ್ಲಾದೇಶಕ್ಕೆ ವಿದೇಶಿ ಪ್ರವಾಸಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಭಾಗಿನ ದೇಶದ ಪ್ರಧಾನಿಯಾಗಿರುವ ಶೇಕ್ ಹಸೀನಾ ಯಾಕೆ ನೀವು ನಮ್ಮ ಚಿತ್ತಗಾಂಗ್ ಬಂದರನ್ನು ಉಪಯೋಗಿಸಬಾರದು ಎನ್ನುವ ಪ್ರಸ್ತಾವನೆ ಇಟ್ಟಿದ್ದಾರೆ. ಇದನ್ನು ಕೇಳಿದ ಜಯಶಂಕರ್ ಅವರಿಗೆ ಕೊಂಚಮಟ್ಟಿಗೆ ಆಶ್ಚರ್ಯ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇದು ಭಾರತಕ್ಕೆ ಸಾಕಷ್ಟು ಲಾಭದಾಯಕ ಬಂದರಾಗಿದೆ. ಇಷ್ಟೊಂದು ಪ್ರಮುಖ ಬಂದರಾಗಿರುವ ಚಿತ್ತಗಾಂಗ್ ಬಂದರನ್ನು ಭಾರತಕ್ಕೆ ನೀಡಲು ಬಾಂಗ್ಲಾದೇಶ ಯಾಕೆ ಚಿಂತಿಸುತ್ತಿದೆ ಎಂಬುದನ್ನು ನೋಡುವುದಾದರೆ ಅಲ್ಲಿ ಕೂಡ ಕೆಲವೊಂದು ಕಾರಣಗಳಿವೆ ಅದನ್ನು ತಿಳಿಸುತ್ತೇವೆ ಬನ್ನಿ.

ಮೊದಲನೇದಾಗಿ ಹೇಳುವುದಾದರೆ ಬಾಂಗ್ಲಾದೇಶದ ಪಕ್ಕದ ರಾಜ್ಯವಾಗಿರುವ ಮಾಯನ್ಮಾರ್ ಜೊತೆಗೆ ಬಾಂಗ್ಲಾದೇಶದ ಸಂಬಂಧ ಚೆನ್ನಾಗಿಲ್ಲ. ಅಲ್ಲಿ ಮಿಲಿಟರಿ ಆಡಳಿತವಿದ್ದರೂ ಕೂಡ ಆರ್ಥಿಕವಾಗಿ ಅದು ಚೆನ್ನಾಗಿ ಬೆಳೆಯುತ್ತಿದೆ. ಮುಂದೊಂದು ದಿನ ಇದು ಬಾಂಗ್ಲಾದೇಶಕ್ಕೆ ಕುತ್ತಾಗಬಹುದಾದಂತಹ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲದೆ ಈಗಾಗಲೇ ಭಾರತ ಮಾಯನ್ಮಾರ್ ನಲ್ಲಿ ಕೂಡ ಒಂದು ಬಂದರನ್ನು ಸಿದ್ಧಪಡಿಸಿದೆ. ಒಂದು ವೇಳೆ ಸಂಪೂರ್ಣವಾಗಿ ಈ ಕಾರಣಕ್ಕಾಗಿ ಭಾರತ ಮಾಯನ್ಮಾರ್ ಜೊತೆಗೆ ಸಂಬಂಧವನ್ನು ವೃದ್ಧಿಸಿ ಕೊಂಡರೆ ಬಾಂಗ್ಲಾದೇಶಕ್ಕೆ ಕಷ್ಟ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕಾಗಿಯೇ ಬಾಂಗ್ಲಾದೇಶ ಈ ಆಫರನ್ನು ನೀಡಿದೆ ಎಂಬುದಾಗಿ ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಭಾರತದ ಹಲವಾರು ಕಂಪನಿಗಳು ಕೂಡ ಈಗಾಗಲೇ ಬಾಂಗ್ಲಾದೇಶದಲ್ಲಿ ಬಂದು ತಮ್ಮ ಬ್ರಾಂಚ್ ಗಳನ್ನು ಆರಂಭಿಸಿದೆ. ಹೀಗಾಗಿ ಭಾರತ ಹಾಗೂ ಬಾಂಗ್ಲಾದೇಶದ ಕನೆಕ್ಟಿವಿಟಿ ಗೆ ಚಿತ್ತಗಾಂಗ್ ಬಂದರೂ ಪ್ರಮುಖ ಕಾರಣವಾಗಿ ಹಾಗೂ ಲಾಭದಾಯಕ ಮಾರ್ಗವಾಗಿ ಪರಿಣಮಿಸಲಿದೆ.

ಇನ್ನು ಒಂದು ಕಾಲದಲ್ಲಿ ಬಾಂಗ್ಲಾದೇಶದಲ್ಲಿ ಅಕ್ರಮ ಕಾರ್ಯಗಳು ಜಾಸ್ತಿಯಾದ ಸಂದರ್ಭದಲ್ಲಿ ವಿಶೇಷ ಪಡೆಯನ್ನು ಉಪಯೋಗಿಸಿಕೊಂಡು ಅಂತಹ ಕೆಲಸ ಮಾಡುತ್ತಿದ್ದವರನ್ನು ಸದೆಬಡೆಯಲಾಗಿತ್ತು. ಈ ಸಂದರ್ಭದಲ್ಲಿ ಇನ್ನೋಸೆಂಟ್ ಜನರನ್ನು ಕೂಡ ಮುಗಿಸಲಾಗಿತ್ತು ಎಂಬುದಾಗಿ ಅಮೆರಿಕ ಇಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗಿದೆ ಎಂಬುದಾಗಿ ಬಾಂಗ್ಲಾದೇಶದ ಮೇಲೆ ನಿಷೇಧವನ್ನು ಹೇರಿತ್ತು. ಈ ಕಾರಣಕ್ಕಾಗಿ ಭಾರತದೇಶ ಮಧ್ಯವರ್ತಿಯಾಗಿ ಇದನ್ನು ಸರಿ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಭಾರತ ದೇಶಕ್ಕೆ ಇಟ್ಟಿರುವ ಬಾಂಗ್ಲದೇಶ ಅದಕ್ಕೆ ಕಾಂಪ್ಲಿಮೆಂಟರಿ ಯಾಗಿ ಚಿತ್ತಗಾಂಗ್ ಬಂದರಿನಲ್ಲಿ ತನ್ನ ಕಾರ್ಯಗಳನ್ನು ನಿರ್ವಹಿಸುವಂತಹ ಅವಕಾಶವನ್ನು ನೀಡುವ ಆಫರ್ ನೀಡಿದೆ.

ಇನ್ನು ಮತ್ತೊಂದು ವಿಚಾರವೆಂದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ರೀಲಂಕದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತೀಯ ಮೋಟಾರ್ ವಾಹನ ಸಂಸ್ಥೆಗಳ ಆಗಿರುವ ಟಾಟಾ ಬಜಾಜ್ ಮಹಿಂದ್ರ ಅಶೋಕ್ ಲೇಲ್ಯಾಂಡ್ ಹೀಗೆ ಹಲವಾರು ಸಂಸ್ಥೆಗಳು ಶ್ರೀಲಂಕಾವನ್ನು ಬಿಟ್ಟು ಬಾಂಗ್ಲಾದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸು ವಂತಹ ಕಡೆಗೆ ಯೋಚನೆಯನ್ನು ಪ್ರಾರಂಭಿಸಿದೆ. ಈಗಾಗಲೇ ಟಾಟಾ ಸಂಸ್ಥೆ ಬಹುತೇಕ ಬಾಂಗ್ಲಾದೇಶದ ಮಾರುಕಟ್ಟೆಯನ್ನು ವ್ಯಾಪಿಸಿದೆ ಹಾಗೂ ಕೃಷಿ ಯಂತ್ರೋಪಕರಣ ಹಾಗೂ ವಾಹನಗಳ ಕ್ಷೇತ್ರದಲ್ಲಿ ಮಹಿಂದ್ರ ಸಂಸ್ಥೆ ತನ್ನ ಪಾರಮ್ಯವನ್ನು ಮೆರೆಯಲು ಪ್ರಯತ್ನಪಡುತ್ತಿದೆ. ಈಗ ಅಶೋಕ್ ಲೇಲ್ಯಾಂಡ್ ಹಾಗೂ ಬಜಾಜ್ ಕಂಪನಿಗಳು ಕೂಡ ಈ ಕಡೆಗೆ ನಮ್ಮ ಗಮನವನ್ನು ಹರಿಸಿವೆ.

ಒಂದು ಕಡೆ ಶ್ರೀಲಂಕಾದಲ್ಲಿ ನೆಲೆನಿಂತಿರುವ ಭಾರತದ ಕಂಪನಿಗಳು ಬಾಂಗ್ಲಾದೇಶದತ್ತ ಮುಖಮಾಡಿದೆ ಇನ್ನೊಂದು ಕಡೆ ಬಾಂಗ್ಲಾದೇಶ ತನ್ನ ಪ್ರಮುಖ ಬಂದರು ಆಗಿರುವ ಚಿತ್ತಗಾಂಗ್ ಬಂದರನ್ನು ಭಾರತಕ್ಕೆ ನೀಡುವಂತಹ ಆಫರ್ ನೀಡಿದೆ. ಒಟ್ಟಾರೆಯಾಗಿ ಖಂಡಿತವಾಗಿ ಈ ಪ್ರಕ್ರಿಯೆಯಲ್ಲಿ ಭಾರತ ದೇಶಕ್ಕೆ ಲಾಭ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ವಿಚಾರಗಳ ಕುರಿತಂತೆ ಭಾರತದೇಶ ಮುಂದಿನ ದಿನಗಳಲ್ಲಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ನಾವು ಕಾದುನೋಡಬೇಕಾಗಿದೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.