ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆತನಂತಹ ಬೌಲರ್ ಅನ್ನು ನೋಡಿಲ್ಲ ಎಂದು ಭಾರತದ ಆಟಗಾರನನ್ನು ಆಯ್ಕೆ ಮಾಡಿದ ಗ್ರೇಮ್ ಸ್ಮಿತ್, ಯಾರು ಆ ಮಾಜಿ ಬೌಲರ್ ಗೊತ್ತೇ??

2,259

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದ ಕೆಲವೊಂದು ಕ್ರಿಕೆಟ್ ಪ್ರತಿಭೆಗಳು ಬೆಳಕಿಗೆ ಬರುವುದು ಐಪಿಎಲ್ ಟೂರ್ನಮೆಂಟ್ ಸಂದರ್ಭದಲ್ಲಿ ಎಂದರೆ ತಪ್ಪಾಗಲಾರದು. ಅದರಲ್ಲೂ ಈ ಬಾರಿ ಐಪಿಎಲ್ ಟೂರ್ನಮೆಂಟ್ ನಲ್ಲಿ ಹಲವಾರು ಯುವ ಉದಯೋನ್ಮುಖ ಪ್ರತಿಭೆಗಳು ಬೆಳಕಿಗೆ ಬಂದಿದೆ. ಮಾಜಿ ಕ್ರಿಕೆಟಿಗರು ಈಗಾಗಲೇ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಿಸಿ ಎಂಬುದಾಗಿ ಕೂಡ ಬೇಡಿಕೆಯನ್ನಿಡಲು ಪ್ರಾರಂಭಿಸಿದ್ದಾರೆ. ನಮ್ಮ ಭಾರತೀಯ ಕ್ರಿಕೆಟ್ ಸಂಸ್ಥೆ ಪ್ರತಿಭಾವಂತ ಆಟಗಾರರಿಗೆ ಮೊದಲ ಪ್ರಶಸ್ತಿಯನ್ನು ನೀಡುವುದನ್ನು ಮೊದಲಿನಿಂದಲೂ ಕೂಡ ನಿರ್ವಹಿಸಿಕೊಂಡು ಬಂದಿದೆ.

ಹೀಗಾಗಿ ಇಂದಿನವರೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಉತ್ತಮ ಆಟಗಾರರು ಆಡಿ ಹೋಗಿದ್ದಾರೆ. ಅದರಲ್ಲೂ ಒಬ್ಬ ಆಟಗಾರನ ಕುರಿತಂತೆ ಐಪಿಎಲ್ ಕಾಮೆಂಟರಿ ಮಾಡುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಆಗಿರುವ ಗ್ರೇಮ್ ಸ್ಮಿತ್ ದೊಡ್ಡಮಟ್ಟದಲ್ಲಿ ಗುಣಗಾನ ಮಾಡಿದ್ದಾರೆ. ಹೌದು ಗೆಳೆಯರೇ ಗ್ರೇಮ್ ಸ್ಮಿತ್ ರವರು ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಸಾಕಷ್ಟು ಪಂದ್ಯಗಳಲ್ಲಿ ಗೆದ್ದು ಕೊಟ್ಟಿರುವ ಆಟಗಾರನಾಗಿದ್ದಾರೆ. ಆದರೆ ಅವರು ಆಡಿರುವ ಅದೆಷ್ಟು ಬೌಲರ್ ಗಳ ಪಟ್ಟಿಯಲ್ಲಿ ಭಾರತೀಯ ಬೌಲರನ್ನು ಬಹುವಾಗಿ ಹೊಗಳಿದ್ದಾರೆ ಅಂದಮೇಲೆ ಖಂಡಿತವಾಗಿ ಆತ ವಿಶೇಷವಾದ ಸಾಧನೆಯನ್ನೇ ಮಾಡಿರಬೇಕು ಅಲ್ಲವೇ.

ಹೌದು ಗೆಳೆಯರೆ ಗ್ರೇಮ್ ಸ್ಮಿತ್ ರವರು ಇಂತಹ ಬೌಲರನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿಲ್ಲ ಎಂಬುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಆ ಆಟಗಾರ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಗ್ರೇಮ್ ಸ್ಮಿತ್ ಅವರು ಹೊಗಳಿರುವ ಬೌಲರ್ ಇನ್ಯಾರು ಅಲ್ಲ ಜಹೀರ್ ಖಾನ್. ಜಹೀರ್ ಖಾನ್ ಹಾಗೂ ಗ್ರೇಮ್ ಸ್ಮಿತ್ ಇಬ್ಬರೂ ಕೂಡ ಮುಖಾಮುಖಿಯಾಗಿ 27 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 14 ಬಾರಿ ಗ್ರೇಮ್ ಸ್ಮಿತ್ ರವರ ವಿಕೆಟನ್ನು ಜಹೀರ್ ಖಾನ್ ರವರು ಉರುಳಿಸಿದ್ದಾರೆ. ನನ್ನ ಜೀವಮಾನದಲ್ಲಿ ಆಡಿರುವಂತಹ ಅತ್ಯುತ್ತಮ ಬೌಲರ್ ಜಹೀರ್ ಖಾನ್ ಆಗಿದ್ದಾರೆ ಎಂಬುದಾಗಿ ಹೇಳಿದ್ದು ಅವರು ಸ್ವಿಂಗ್ ಹಾಗೂ ಸ್ಪೀಡ್ನಲ್ಲಿ ಅತ್ಯಂತ ಕಂಟ್ರೋಲ್ ಹೊಂದಿದ್ದಾರೆ ಎಂಬುದಾಗಿ ಕೂಡ ಹೊಗಳಿದ್ದಾರೆ. ಗ್ರೇಮ್ ಸ್ಮಿತ್ ರವರ ಅಭಿಪ್ರಾಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.