ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪ ಅಮ್ಮನ ಮಾತು ಮೀರಿ, ಬಸ್ ಡ್ರೈವರ್ ಅನ್ನು ಮದುವೆಯಾದ ಇಂಜಿನಿಯರಿಂಗ್ ಹುಡುಗಿ, ಅದೇ ಕಾರಣಕ್ಕೆ ಪೋಷಕರು ಇದೀಗ ಏನು ಮಾಡಿದ್ದಾರೆ ಗೊತ್ತೇ??

273

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮನೆಯವರ ವಿರೋಧದ ನಡುವೆಯೂ ಕೂಡ ಪ್ರೇಮವಿವಾಹ ಆಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಮನೆಯವರು ಮಕ್ಕಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೋ ಇಲ್ಲವೇ ಮಕ್ಕಳು ಮನೆಯವರ ಮೇಲೆ ನಂಬಿಕೆ ಬಿಟ್ಟಿದ್ದಾರೋ ಗೊತ್ತಾಗುತ್ತಿಲ್ಲ. ಅದೇನೇ ಇರಲಿ ಇನ್ನು ನಾವು ಹೇಳುತ್ತಿರುವ ವಿಚಾರವೂ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟಿದ್ದಾಗಿದೆ‌. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ತೆಲುಗು ರಾಜ್ಯದಲ್ಲಿ. ಲಕ್ಷ್ಮಿ ಪೂಜಿತಾ ಎನ್ನುವಾಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಈ ಸಂದರ್ಭದಲ್ಲಿ ವಿಶ್ವನಾಥ ಎನ್ನುವ ಹುಡುಗ ಆಕೆ ಕಾಲೇಜಿಗೆ ಹೋಗುತ್ತಿದ್ದ ಬಸ್ಸಿನ ಡ್ರೈವರ್ ಆಗಿದ್ದ. ತೆಲುಗು ಸಿನಿಮಾ ಕಥೆಗಳಂತೆ ಇವರಿಬ್ಬರ ನಡುವೆ ಕೂಡ ಇದೇ ರೀತಿ ಪ್ರೀತಿಸಂಬಂಧ ಮೂಡಿಬರುತ್ತದೆ. ಲಕ್ಷ್ಮಿ ಪೂಜಿತ ತೆನಾಲಿ ಬಳಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ತಾರಕಕ್ಕೇರಿ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗುತ್ತಾರೆ. ಹೌದು ಗೆಳೆಯರೆ ವಿಶ್ವನಾಥ ಹಾಗೂ ಲಕ್ಷ್ಮಿ ಪೂಜಿತ ಇಬ್ಬರು ಕೂಡ ಇದೇ ಏಪ್ರಿಲ್ 11ರಂದು ಮದುವೆಯಾಗಿದ್ದಾರೆ. ಮದುವೆಯಾದ ನಂತರ ಇಬ್ಬರೂ ಕೂಡ ಅನಂತವರಂ ನಲ್ಲಿದ್ದಾರೆ.

ಇವರಿಬ್ಬರು ಪ್ರೀತಿಸಿ ಮದುವೆಯಾಗಿರುವುದು ಲಕ್ಷ್ಮಿ ಪೂಜಿಳ ಮನೆಯವರಿಗೆ ಸುತಾರಾಂ ಇಷ್ಟ ಇರುವುದಿಲ್ಲ. ಇನ್ನು ಈಗ ನಾವು ಹೇಳಲು ಹೊರಟಿರುವ ಘಟನೆ ನಡೆದಿರುವುದು ಇದೇ ಸೋಮವಾರದಂದು. ಲಕ್ಷ್ಮಿ ಪೂಜಿತ ತನ್ನ ಅತ್ತೆ ಮನೆಗೆ ಬಂದಾಗ ಅವರ ಮನೆಯವರಿಗೆ ಹುಷಾರಿಲ್ಲ ಎನ್ನುವುದಾಗಿ ಹೇಳಲಾಯಿತು. ಆದರೂ ಕೂಡ ಲಕ್ಷ್ಮಿ ಪೂಜಿತ ಇದರ ಮೇಲೆ ನಂಬಿಕೆಯನ್ನು ಇಡಲಿಲ್ಲ. ಆಗ ಆಕೆಯ ತಂದೆ ಹಾಗೂ ಸಹೋದರ ಮತ್ತು ಇನ್ನಿತರ ಯುವಕರು ಆಕೆಯನ್ನು ಬಲವಂತವಾಗಿ ಕರೆದೊಯ್ಯುತ್ತಾರೆ. ಈ ಸಂದರ್ಭದಲ್ಲಿ ಆಕೆಯ ಗಂಡ ವಿಶ್ವನಾಥ ತಪ್ಪಿಸಲು ಪ್ರಯತ್ನಪಟ್ಟರು ಕೂಡ ಆತನನ್ನು ಹಲ್ಲೆಗೈದು ಲಕ್ಷ್ಮಿ ಪೂಜಿತ ಳನ್ನು ಕರೆದುಕೊಂಡು ಹೋಗುತ್ತಾರೆ. ಇನ್ನು ಈ ಕುರಿತಂತೆ ಈಗಾಗಲೇ ಸ್ಥಳೀಯ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣವನ್ನು ವಿಶ್ವನಾಥ ದಾಖಲಿಸಿದ್ದಾನೆ. ತನಿಖೆ ಇನ್ನಷ್ಟು ನಡೆಯಬೇಕಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.