ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟೂರ್ನಿಯಲ್ಲಿ ಎರಡನೇ ಸೋಲನ್ನು ಕಂಡ ಮೇಲೆ ಪಂದ್ಯ ಮುಗಿದ ಬಳಿಕ ಷಾಕಿಂಗ್ ಹೇಳಿಕೆ ನೀಡಿದ ಪಾಂಡ್ಯ, ಬೇಕಿತ್ತಾ ಇವೆಲ್ಲ ಎಂದ ನೆಟ್ಟಿಗರು. ಏನು ಗೊತ್ತೇ?

126

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಎನ್ನುವುದು ಸಾಕಷ್ಟು ಅಚ್ಚರಿಗಳಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಸೇರ್ಪಡೆಯಾದ ಮೊದಲ ವರ್ಷದಲ್ಲೇ ಹೊಸ ತಂಡಗಳು ಅತ್ಯುತ್ತಮವಾದ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಗುಜರಾತ್ ಟೈಟನ್ಸ್ ತಂಡ ಅತ್ಯುತ್ತಮ ಬಲಿಷ್ಠ ತಂಡವಾಗಿ ಈ ಬಾರಿಯ ಟೂರ್ನಮೆಂಟಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ರವರ ನಾಯಕತ್ವದ ಬಗ್ಗೆ ಅಂತೂ ಎಲ್ಲರೂ ಕೂಡ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇವಲ ನಾಯಕನಾಗಿ ಮಾತ್ರವಲ್ಲದೆ ಒಬ್ಬ ಆಟಗಾರನಾಗಿ ಯೂ ಕೂಡ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿದ್ದಾರೆ.

ಆದರೆ ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ಎದುರು ಸೋತಿದೆ. ಚೇಸಿಂಗ್ ನಲ್ಲಿ ಬಲಿಷ್ಠವಾಗಿದ್ದ ಗುಜರಾತ್ ಟೈಟನ್ಸ್ ತಂಡ ಪಂಜಾಬ್ ತಂಡದ ಎದುರು ಮೊದಲು ಬ್ಯಾಟಿಂಗ್ ಮಾಡಿ ಸೋತಿತು ಎಂದು ಹೇಳಬಹುದಾಗಿದೆ. ಅದರಲ್ಲೂ ಪಂಜಾಬ್ ತಂಡದ ಕಗಿಸೋ ರಬಾಡ ಹಾಗೂ ಶಿಖರ್ ಧವನ್ ರವರ ಉತ್ತಮ ಆಟದಿಂದಾಗಿ ಗುಜರಾತ್ ತಂಡ ಸೋತಿತು ಎಂದು ಹೇಳಬಹುದಾಗಿದೆ.

ಇನ್ನು ಈ ಸೋಲಿನ ಕುರಿತಂತೆ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ರವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಚೇಸಿಂಗ್ ಮಾಡುವಾಗ ಸುಲಭದಲ್ಲಿ ಗೆದ್ದು ಕೊಳ್ಳುತ್ತಿದ್ದೆವು ಆದರೆ ಈ ಬಾರಿ ಮೊದಲು ಬ್ಯಾಟಿಂಗ್ ಮಾಡುವ ಕಷ್ಟದ ನಿರ್ಧಾರಕ್ಕೆ ಬಂದೆವು. ಯಾಕೆಂದರೆ ಮುಂದೊಂದು ದಿನ ನಮಗೆ ಮೊದಲನೇ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ ಅದಕ್ಕೆ ನಾವು ಹೇಗೆ ತಯಾರಾಗಿರಬೇಕು ಎನ್ನುವ ಕಾರಣದಿಂದಾಗಿ ನಮ್ಮ ಕಂಫರ್ಟ್ ಜೋನ್ ನಿಂದ ಹೊರಬಂದು ಆಟವಾಡಿದ್ದೇವೆ. ನಮ್ಮ ತಪ್ಪುಗಳನ್ನು ಅರಿತುಕೊಂಡು ಯಾವ ರೀತಿ ಇದಕ್ಕೆ ತಯಾರಾಗಬೇಕು ಎಂಬುದನ್ನು ಕೂಡ ಅರಿತುಕೊಂಡಿದ್ದೇವೆ ಎಂಬುದಾಗಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ, ಆದರೆ ಇದಕ್ಕೆ ನೆಟ್ಟಿಗರು ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಇದು ಆರಂಭಿಕ ಪಂದ್ಯಗಳಲ್ಲ, ಫೈನಲ್ಸ್ ಹತ್ತಿರ ಬರುವಾಗ ಆತ್ಮವಿಶ್ವಾಸ ಮುಖ್ಯ ಸೋತರೆ ಅದು ಕಡಿಮೆಯಾಗುತ್ತದೆ ಎಂದಿದ್ದಾರೆ. ಇದೊಂದು ರೀತಿಯಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಪ್ರಯೋಗಾತ್ಮಕ ಪಂದ್ಯವಾಗಿತ್ತು ಎಂದರೆ ತಪ್ಪಾಗಲಾರದು.

Get real time updates directly on you device, subscribe now.