ಏರ್ಟೆಲ್ ನಲ್ಲಿ ಯಾವುದು ಬೆಸ್ಟ್ ಪ್ಲಾನ್ ಗೊತ್ತೆ?? ಏರ್ಟೆಲ್ ಪರಿಚಯ ಮಾಡಿರುವ ಬೊಂಬಾಟ್ ಪ್ಲಾನ್ ಗಳು ಯಾವ್ಯಾವು ಗೊತ್ತೇ??

ಏರ್ಟೆಲ್ ನಲ್ಲಿ ಯಾವುದು ಬೆಸ್ಟ್ ಪ್ಲಾನ್ ಗೊತ್ತೆ?? ಏರ್ಟೆಲ್ ಪರಿಚಯ ಮಾಡಿರುವ ಬೊಂಬಾಟ್ ಪ್ಲಾನ್ ಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ಟೆಲಿಕಾಂ ಕ್ಷೇತ್ರದಲ್ಲಿ ಪ್ರೈವೇಟ್ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಭಾರತದ ಲೀಡಿಂಗ್ ಟೆಲಿಕಾಂ ಕಂಪನಿ ಆಗಿರುವ ರಿಲಯನ್ಸ್ ಒಡೆತನದ ಜಿಯೋಗೆ ನಮ್ಮ ಭಾರತದ ಮತ್ತೊಂದು ಕಂಪನಿ ಯಾಗಿರುವ ಏರ್ಟೆಲ್ ಸಾಕಷ್ಟು ಕಾಂಪಿಟೇಶನ್ ನೀಡುತ್ತಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರನ್ನು ಇನ್ನಷ್ಟು ತನ್ನೆಡೆಗೆ ಸೆಳೆದುಕೊಳ್ಳಲು ಹಲವಾರು ಹೊಸ ಹೊಸ ಕಡಿಮೆಬೆಲೆಯ ದೊಡ್ಡ ಉಪಯೋಗದ ಯೋಜನೆಗಳನ್ನು ಪರಿಚಯಿಸುತ್ತಿದೆ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ಏರ್ಟೆಲ್ ಸಂಸ್ಥೆ 999 ರೂಪಾಯಿಗಳ ಹೊಸ ಯೋಜನೆಯೊಂದನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಇದರಲ್ಲಿ ದೈನಂದಿನ ಡೇಟಾ ಸೇರಿದಂತೆ ಮೆಸೇಜ್ ಹಾಗೂ ಅನಿಮಿಯತ ಕರೆಗಳು ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮಾತ್ರವಲ್ಲದೆ ಏರ್ಟೆಲ್ ನ ಹಲವಾರು ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆಯನ್ನು ಕೂಡ ಒದಗಿಸುತ್ತಿದೆ. ಇನ್ನು ಈ ಹೊಸ ಯೋಜನೆಯಿಂದ ಯಾವೆಲ್ಲಾ ಉಪಯೋಗಗಳು ಇದೆ ಎನ್ನುವುದನ್ನು ನಿಮಗೆ ವಿವರವಾಗಿ ವಿವರಿಸುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಈ ಪ್ರೀಪೇಯ್ಡ್ ಪ್ಲಾನ್ ನಲ್ಲಿ 84 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಅಂದರೆ ಸರಿಸುಮಾರು ಮೂರು ತಿಂಗಳು ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಉಚಿತ ಅನ್ಲಿಮಿಟೆಡ್ ಲೋಕಲ್ ಹಾಗೂ ನ್ಯಾಷನಲ್ ಕರೆಗಳನ್ನು ಮಾಡಬಹುದಾಗಿದೆ. ಪ್ರತಿದಿನ 100 ಮೆಸೇಜ್ಗಳು ಹಾಗೂ 2.5 ಜಿಬಿ ಹೈಸ್ಪೀಡ್ ಇಂಟರ್ನೆಟ್ ಡೇಟಾ ಸೌಲಭ್ಯ ದೊರಕಲಿದೆ. ಅಮೆಜಾನ್ ಪ್ರೈಮ್ ನ ಒಂದು ತಿಂಗಳ ಉಚಿತ ಚಂದಾದಾರಿಕೆ ಸಿಗಲಿದೆ. ಏರ್ಟೆಲ್ ಸಂಸ್ಥೆಯ ಮ್ಯೂಸಿಕ್ ಅಪ್ಲಿಕೇಶನ್ ಆಗಿರುವ ವಿಂಕ್ ಮ್ಯೂಸಿಕ್ ನ ಉಚಿತ ಚಂದಾದಾರಿಕೆ ಕೂಡ ಇದರಲ್ಲಿ ಸಿಗುತ್ತದೆ. ಹಲೋ ಟ್ಯೂನ್ ಗಳು ಸೇರಿದಂತೆ ಫಾಸ್ಟ್ ಟ್ಯಾಗ್ ನಲ್ಲಿ 100 ರೂಪಾಯಿ ಕ್ಯಾಶ್ಬ್ಯಾಕ್ ದೊರೆಯುತ್ತಿರುವುದು ಈ ರಿಚಾರ್ಜ್ ಪ್ಲಾನ್ ನಲ್ಲಿ ಸಿಗುತ್ತಿರುವ ಲಾಭವಾಗಿದೆ.

ಇನ್ನು ಏರ್ಟೆಲ್ ಸಂಸ್ಥೆ 699 ರೂಪಾಯಿಯ ಪ್ರಿಪೇಡ್ ಪ್ಲಾನನ್ನು ಕೂಡ ಪರಿಚಯಿಸಿದೆ. ಇದರಲ್ಲಿ 56 ದಿನಗಳ ವ್ಯಾಲಿಡಿಟಿ ಯೊಂದಿಗೆ ಉಚಿತ ಕರೆಗಳ ಸೇವೆ ಕೂಡ ಸಿಗಲಿದೆ. ಇದರಲ್ಲಿ ದೈನಂದಿನ 3gb ಇಂಟರ್ನೆಟ್ ಹೈಸ್ಪೀಡ್ ಹಾಗೂ ನೂರು ಉಚಿತ ಮೆಸೇಜ್ ಗಳ ಸೌಲಭ್ಯ ಕೂಡ ಸಿಗಲಿದೆ. ಅಮೆಜಾನ್ ಪ್ರೈಮ್ ಸೇರಿದಂತೆ ಏರ್ಟೆಲ್ ನ ಅಪ್ಲಿಕೇಶನ್ಗಳು ಆಗಿರುವ ವಿಂಕ್ ಮ್ಯೂಸಿಕ್ ಎಕ್ಸ್ಟ್ರೀಮ್ ಹೀಗೆ ಹಲವಾರು ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಸಿಗಲಿದೆ. ಈ ಹೊಸ ಪ್ಲಾನನ್ನು ಕೂಡ ನೀವು ಉಪಯೋಗಿಸಬಹುದಾಗಿದೆ.

ಮತ್ತೊಂದು ಏರ್ಟೆಲ್ ಸಂಸ್ಥೆಯ ಹೊಸ ಪ್ಲಾನ್ ಏನೆಂದರೆ 265 ರೂಪಾಯಿಯ ಪ್ಲಾನ್. 28 ದಿನಗಳ ವ್ಯಾಲಿಡಿಟಿ ಜೊತೆಗೆ ಬರುವಂತಹ ಯೋಜನೆ ನಿಮಗೆ ದೈನಂದಿನ 1gb ಹೈಸ್ಪೀಡ್ ಇಂಟರ್ನೆಟ್ ಮತ್ತು 100 ಎಸ್ಎಂಎಸ್ ಗಳನ್ನು ಮಾಡುವಂತಹ ಸೌಲಭ್ಯವನ್ನು ಒದಗಿಸಲಿದೆ. ಕೇವಲ ಮೊಬೈಲ್ ನಲ್ಲಿ ಮಾತ್ರ ಉಪಯೋಗಿಸುವಂತೆ ಒಂದು ತಿಂಗಳ ಅಮೆಜಾನ್ ಪ್ರೈಮ್ ಉಚಿತ ಸಬ್ಸ್ಕ್ರಿಪ್ಷನ್ ಸಿಗಲಿದೆ.

299 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಕೆ ಅನುಗುಣವಾಗಿ 1.5 ಜಿಬಿ ಇಂಟರ್ನೆಟ್ ಹೈ ಸ್ಪೀಡ್ ದೊರೆಯಲಿದೆ. ನೂರು ಮೆಸೇಜುಗಳು ಕೂಡ ಉಚಿತವಾಗಿ ದೈನಂದಿನ ವಾಗಿ ವ್ಯಾಲಿಡಿಟಿ ಮುಗಿಯುವವರೆಗೂ ಸಿಗಲಿದೆ. ಪಾಸ್ಟ್ ಟ್ಯಾಗ್ ನಲ್ಲಿ 100 ರೂಪಾಯಿ ಕ್ಯಾಶ್ಬ್ಯಾಕ್ ಸೇರಿದಂತೆ ಏರ್ಟೆಲ್ ಸಂಸ್ಥೆಯ ಎಲ್ಲಾ ಅಪ್ಲಿಕೇಶನ್ಗಳ ಮೇಲೆ ಉಚಿತ ಚಂದಾದಾರಿಕೆ ಸಿಗಲಿದೆ. ನೀವು ಗಳಷ್ಟು ಏರ್ಟೆಲ್ ಸಂಸ್ಥೆ ಪರಿಚಯಿಸಿರಿ ವಂತಹ ಹೊಸ ಪ್ರೀಪೇಯ್ಡ್ ರಿಚಾರ್ಜ್ ಪ್ಲಾನ್ ಗಳಾಗಿವೆ. ಹೀಗಾಗಿ ನೀವು ಕೂಡ ಏರ್ಟೆಲ್ ಚಂದಾದಾರರಾಗಿ ಇದ್ದರೆ ಈ ಹೊಸ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ.