ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಚೆನ್ನೈ ವಿರುದ್ಧ ಆರ್ಸಿಬಿ ತಂಡದಲ್ಲಿ ನಡೆಯಬಹುದಾದ ಬದಲಾವಣೆಗಳು ಏನು ಗೊತ್ತೇ?? ಕ್ರಮಾಂಕದಲ್ಲಿ ಏನೇನು ಬದಲಾವಣೆ ಆಗಬಹುದು ಗೊತ್ತೇ??

ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಚೆನ್ನೈ ವಿರುದ್ಧ ಆರ್ಸಿಬಿ ತಂಡದಲ್ಲಿ ನಡೆಯಬಹುದಾದ ಬದಲಾವಣೆಗಳು ಏನು ಗೊತ್ತೇ?? ಕ್ರಮಾಂಕದಲ್ಲಿ ಏನೇನು ಬದಲಾವಣೆ ಆಗಬಹುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಒಂದು ಅಂತಿಮ ಹಂತಕ್ಕೆ ಬಂದು ನಿಂತಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಹೊರತುಪಡಿಸಿದರೇ, ಉಳಿದ ಎಂಟು ತಂಡಗಳು ಪ್ಲೇ ಆಫ್ ಗೆ ಪ್ರವೇಶ ಪಡೆಯಲು ಹರಸಾಹಸ ಪಡುತ್ತಿವೆ. ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಗೆ ತನ್ನ ಪ್ರವೇಶವನ್ನು ಖಾತ್ರಿ ಪಡಿಸಿಕೊಂಡಿದೆ. ಉಳಿದ ಮೂರು ಸ್ಥಾನಗಳಿಗೆ ಏಳು ತಂಡಗಳು ಹೋರಾಡುತ್ತಿವೆ. ಈ ನಡುವೆ ಉತ್ತಮ ಲಯದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಉತ್ತಮ ರನ್ ರೇಟ್ ಆಧಾರದಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ರೇಸ್ ನಲ್ಲಿ ಉಳಿಯಲಿದೆ.

ಈ ನಿಟ್ಟಿನಲ್ಲಿ ಇಂದು ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎದುರಿಸಲಿದೆ. ಕಳೆದ ಭಾರಿ ಮುಖಾಮುಖಿಯಾಗಿದ್ದಾಗ 19 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತ್ತು. ಇನ್ನು ಕಳೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್ ಗಳಿಸಿದ್ದರೂ, ಬೌಲರ್ ಗಳ ಕಳಪೆ ಪ್ರದರ್ಶನದಿಂದ ಸೋಲನ್ನು ಅನುಭವಿಸಬೇಕಾಯಿತು. ಇನ್ನು ಬ್ಯಾಟಿಂಗ್ ನಲ್ಲಿ ಸಹ ವಿರಾಟ್ ಕೊಹ್ಲಿ ಲಯಕ್ಕೆ ಮರಳಿದರೂ, ಟಿ 20 ಇನ್ನಿಂಗ್ಸ್ ನಂತಹ ಬ್ಯಾಟಿಂಗ್ ಬರಲಿಲ್ಲ. ಹಾಗಾಗಿ ಟಾರ್ಗೆಟ್ ಸೆಟ್ ಮಾಡಲು ಇನ್ನು ಹದಿನೈದರಿಂದ ಇಪ್ಪತ್ತು ರನ್ನುಗಳು ಕಡಿಮೆಯಾದವು. ಹಾಗಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಆರ್ಸಿಬಿ ತಂಡ ಈ ಭಾರಿ ಗೆಲ್ಲಲು ಶತಾಯಗತಾಯ ಪ್ರಯತ್ನಿಸುತ್ತಿದೆ. ತಂಡದಲ್ಲಿ ಕೆಲವು ಬದಲಾವಣೆಗಳನ್ನು ಸಹ ಎದುರು ನೋಡುತ್ತಿದೆ.

ಆದರೇ ಮೂಲಗಳ ಪ್ರಕಾರ ಆರ್ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ತಂಡದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮಹಿಪಾಲ್ ಲೋಮ್ರೋರ್ ಹಾಗೂ ರಜತ್ ಪಾಟೀದಾರ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಕಳೆದ ಪಂದ್ಯದಲ್ಲಿ ತೋರಿಸಿದ್ದಾರೆ. ಹಾಗಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳು ಆಗಬಹುದು ಎಂದು ಹೇಳಲಾಗಿದೆಯೇ ಹೊರತು, ತಂಡದಲ್ಲಿ ಬೇರೆ ಯಾವುದೇ ಬದಲಾವಣೆ ಇರುವುದಿಲ್ಲ. ಬೌಲರ್ ಗಳು ಹಾಗೂ ಬ್ಯಾಟ್ಸ್ಮನ್ ಗಳು ತಮ್ಮ ಜವಾಬ್ದಾರಿ ಅರಿತು ಆಡಿದ್ದೇ, ಆರ್ಸಿಬಿ ಪುನಃ ಗೆಲುವಿನ ಲಯಕ್ಕೆ ಮರಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ : ಫಾಪ್ ಡು ಪ್ಲೇಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ಶಹಬಾಜ್ ಅಹಮದ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್,ವನಿಂದು ಹಸರಂಗ, ಹರ್ಷಲ್ ಪಟೇಲ್, ಮಹಮದ್ ಸಿರಾಜ್, ಜೋಶ್ ಹೇಜಲ್ವುಡ್.