ಭಾರತದ ಭವಿಷ್ಯ ಟೆಸ್ಟ್ ನಾಯಕನನ್ನು ಹೆಸರಿಸಿ, ಈತನೇ ನಾಯಕನಾಗಬೇಕು ಎಂದ ಯುವರಾಜ್, ಆ ಯುವ ಆಟಗಾರ ಯಾರು ಗೊತ್ತೇ??

ಭಾರತದ ಭವಿಷ್ಯ ಟೆಸ್ಟ್ ನಾಯಕನನ್ನು ಹೆಸರಿಸಿ, ಈತನೇ ನಾಯಕನಾಗಬೇಕು ಎಂದ ಯುವರಾಜ್, ಆ ಯುವ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಕೊಹ್ಲಿ ರವರು ಭಾರತ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ ಗಳಲ್ಲಿ ನಾಯಕತ್ವವನ್ನು ತೊರೆದಿದ್ದು ರೋಹಿತ್ ಶರ್ಮಾ ರವರು ಸಂಪೂರ್ಣ ಗಾಯಕನಾಗಿ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ 14 ಸತತ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಐಪಿಎಲ್ ನಲ್ಲಿ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ರೋಹಿತ್ ಶರ್ಮಾ ರವರ ನಾಯಕತ್ವ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಈ ಬಾರಿ ಆಸ್ಟ್ರೇಲಿಯಾದಲ್ಲಿ ಟಿ ಟ್ವೆಂಟಿ ವರ್ಲ್ಡ್ ಕಪ್ ಕೂಡ ನಡೆಯಲಿದೆ.

ಹೀಗಾಗಿ ರೋಹಿತ್ ಶರ್ಮಾ ರವರು ತಮ್ಮ ನಾಯಕತ್ವದ ಸ್ಕಿಲ್ ಕುರಿತಂತೆ ಕೊಂಚಮಟ್ಟಿಗೆ ಹಾರ್ಡ್ ವರ್ಕ್ ಮಾಡುವುದು ಅಗತ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಅವರು ಒಬ್ಬ ಯುವ ಆಟಗಾರರ ಹೆಸರನ್ನು ಹೇಳಿ ಭವಿಷ್ಯದ ಟೆಸ್ಟ್ ನಾಯಕನನ್ನಾಗಿ ಈಗಲೇ ಇವರನ್ನು ಸಿದ್ಧಪಡಿಸುವುದು ಒಳ್ಳೆಯದು ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ದೀರ್ಘಕಾಲ ಕ್ಕಾಗಿ ರೋಹಿತ್ ಶರ್ಮಾ ಅವರನ್ನು ಮೂರು ಫಾರ್ಮ್ಯಾಟ್ ಗಳಲ್ಲಿ ನಾಯಕನಾಗಿ ಆಯ್ಕೆ ಮಾಡಲಾಗಿದೆ ಹೀಗಾಗಿ ಮತ್ತೊಬ್ಬರನ್ನು ನಾಯಕನನ್ನಾಗಿ ಸೆಲೆಕ್ಟ್ ಮಾಡುವುದು ಸಾಧ್ಯವಿಲ್ಲ. ಆದರೂ ಯುವರಾಜ್ ಸಿಂಗ್ ಯಾವ ಆಟಗಾರನ ಕುರಿತಂತೆ ಈ ರೀತಿ ಮಾತನಾಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೆ ಯುವರಾಜ್ ಸಿಂಗ್ ಅವರು ಮಾತನಾಡಿರುವುದು ರಿಷಬ್ ಪಂತ್ ಅವರ ಕುರಿತಂತೆ. ಹೌದು ಗೆಳೆಯರೇ ಈಗಲೇ ಅವರನ್ನು ನಾಯಕನನ್ನಾಗಿ ಸಿದ್ಧಪಡಿಸಿದರೆ ಭವಿಷ್ಯದಲ್ಲಿ ಅವರು ಉತ್ತಮ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಾಧ್ಯವಿದೆ ಯಾಕೆಂದರೆ ಮಹೇಂದ್ರ ಸಿಂಗ್ ಧೋನಿ ರವರನ್ನು ಕೂಡ ಹೀಗೆಯೇ ಸಿದ್ಧಪಡಿಸಲಾಗಿತ್ತು. ವಿಕೆಟ್ ಕೀಪರ್ ಆಗಿ ಮೈದಾನದ ಪ್ರತಿಯೊಂದು ಕೋನಗಳನ್ನು ಕೂಡ ನೋಡಲು ಸಾಧ್ಯವಿದೆ ಹೀಗಾಗಿ ಕ್ರಿಕೆಟ್ ಕುರಿತಂತೆ ಎಲ್ಲರಿಗಿಂತ ಹೆಚ್ಚಿನ ಜ್ಞಾನ ವಿಕೆಟ್ ಕೀಪರ್ ಗೆ ಇರುತ್ತದೆ ಹೀಗಾಗಿ ರಿಷಬ್ ಪಂತ್ ರವರಿಗೆ ಟೆಸ್ಟ್ ನಾಯಕತ್ವವನ್ನು ನೀಡುವುದು ಸೂಕ್ತ ಎಂಬುದಾಗಿ ಅವರ ಪರ ಬ್ಯಾಟ್ ಬೀಸಿದ್ದಾರೆ. ಯುವರಾಜ್ ಸಿಂಗ್ ಅವರ ಈ ಸ್ಟೇಟ್ಮೆಂಟ್ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.