ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಕುರಿತಂತೆ ಮಾಜಿ ಕ್ರಿಕೆಟಿಗ ಆರ್ ಪಿ ಸಿಂಗ್ ಹೇಳಿದ್ದೇನು ಗೊತ್ತಾ?? ಅಸಮಾಧಾನ ವ್ಯಕ್ತ ಪಡಿಸಿದ ಕೊಹ್ಲಿ ಫ್ಯಾನ್ಸ್.

ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಕುರಿತಂತೆ ಮಾಜಿ ಕ್ರಿಕೆಟಿಗ ಆರ್ ಪಿ ಸಿಂಗ್ ಹೇಳಿದ್ದೇನು ಗೊತ್ತಾ?? ಅಸಮಾಧಾನ ವ್ಯಕ್ತ ಪಡಿಸಿದ ಕೊಹ್ಲಿ ಫ್ಯಾನ್ಸ್.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ವಿರಾಟ್ ಕೊಹ್ಲಿ ರವರು ಸಾಕಷ್ಟು ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಇದು ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತಲೆನೋ’ವಾಗಿ ಪರಿಣಮಿಸಿದೆ ಎಂದರು ತಪ್ಪಾಗಲಾರದು. ಅದರಲ್ಲಿ ಎರಡು ಬಾರಿ ಶೂನ್ಯಕ್ಕೆ ಉಂಟಾಗಿರುವುದು ಮತ್ತಷ್ಟು ಈ ಕುರಿತಂತೆ ಎಲ್ಲರೂ ತಲೆಕೆಡಿಸಿಕೊಳ್ಳುವಂತಾಗಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೊದಲು ವಿರಾಟ್ ಕೊಹ್ಲಿ ಅವರು ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ ಅವರು ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಾಯಕನ ಸ್ಥಾನದಿಂದ ರಾಜೀನಾಮೆ ಪಡೆದುಕೊಂಡು ಕೇವಲ ಆಟಗಾರನಾಗಿ ಉಳಿದುಕೊಳ್ಳುತ್ತಾರೆ. ಅದರಲ್ಲೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ಉತ್ತಮವಾಗಿ ಪ್ರದರ್ಶನವನ್ನು ನೀಡುತ್ತಿತ್ತು. ಆದರೆ ಅವರು ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇಬ್ಬರು ಆಟಗಾರರ ಕಳಪೆ ಪ್ರದರ್ಶನ ಎನ್ನುವುದು ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟಾಗುವಂತೆ ಮಾಡಿತು.

ಹೀಗಾಗಿ ಅದರಲ್ಲಿ ಒಬ್ಬರಾದ ಅನುಜ್ ರಾವತ್ ರವರನ್ನು ತಂಡದಿಂದ ಹೊರಕ್ಕೆ ಹಾಕಲಾಗಿತ್ತು. ಇನ್ನೊಬ್ಬ ರಾಗಿರುವ ವಿರಾಟ್ ಕೊಹ್ಲಿ ರವರು ಮತ್ತೆ ತಮ್ಮ ನೀರಸ ಪ್ರದರ್ಶನವನ್ನು ಮುಂದುವರಿಸಿದ್ದಾರೆ ಇದರಿಂದಾಗಿ ತಂಡ ಸಾಕಷ್ಟು ಹಿನ್ನಡೆಯನ್ನು ಅನುಭವಿಸುವಂತಾಗಿದೆ ಎಂದರೆ ತಪ್ಪಾಗಲಾರದು. ಈ ಕುರಿತಂತೆ ಮಾಜಿ ಕ್ರಿಕೆಟಿಗ ಆಗಿರುವ ಆರ್ ಪಿ ಸಿಂಗ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ರವರು ತಂಡದ ಪ್ರಮುಖ ಆಟಗಾರ ಅಥವಾ ಗ್ರೇಟೆಸ್ಟ್ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಈಗ ಅವರು ಇರುವಂತಹ ಫಾರ್ಮ್ ನಲ್ಲಿ ಅವರನ್ನು ತಂಡದಲ್ಲಿ ಮುಂದುವರಿಸುವುದು ತಂಡಕ್ಕೆ ಹಿನ್ನೆಡೆ ಆಗಬಹುದಾಗಿದೆ. ಕನಿಷ್ಠ ಆರ್ಸಿಬಿ ತಂಡ ಅವರಿಗೆ ಇನ್ನೂ ಒಂದರಿಂದ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಬೇಕು. ಒಂದು ವೇಳೆ ವಿರಾಟ್ ಕೊಹ್ಲಿ ರವರು ಯಶಸ್ವಿಯಾದರೆ ಓಕೆ ಇಲ್ಲದಿದ್ದರೆ ಅವರಿಗೆ ಅವರ ತಪ್ಪನ್ನು ತಿದ್ದಿಕೊಳ್ಳಲು ವಿಶ್ರಾಂತಿ ಅಥವಾ ಅವರದೇ ಆದಂತಹ ಸ್ಪೇಸ್ ನೀಡಬೇಕು ಎನ್ನುವುದಾಗಿ ಹೇಳಿದ್ದಾರೆ. ಆರ್ ಪಿ ಸಿಂಗ್ ಅವರ ಈ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.