ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಂದು ಫ್ರಾಂಚೈಸಿ ಗಳು ಹರ್ಷಲ್ ರವರಿಗೆ ಮಾತು ನೀಡಿ ನಂತರ ಮಾಡಿದ್ದು ಏನು ಗೊತ್ತೇ?? ತನಗಾದ ಮೋಸವನ್ನು ತೆರೆದಿಟ್ಟ ಹರ್ಷಲ್ ಪಟೇಲ್.

57

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ವಿಭಾಗದಲ್ಲಿ ಪ್ರತಿಬಾರಿ ವೀಕ್ ಆಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಕೊರತೆಯನ್ನು ಕಳೆದ ಬಾರಿಯಿಂದ ಈವರೆಗೂ ನೀಗಿಸಿರುವುದು ಯಾರೆಂದರೆ ಅದು ನಮ್ಮೆಲ್ಲರ ನೆಚ್ಚಿನ ಬೌಲರ್ ಆಗಿರುವ ಹರ್ಷಲ್ ಪಟೇಲ್ ರವರು. ಹೌದು ಗೆಳೆಯರೆ ಕಳೆದ ಬಾರಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಹರ್ಷಲ್ ಪಟೇಲ್ ರವರು ಪರ್ಪಲ್ ಕ್ಯಾಪ್ ಪ್ರಶಸ್ತಿಗೆ ಪಾತ್ರರಾಗಿದ್ದು ದಾಖಲೆಯ 31 ವಿಕೆಟ್ ಗಳನ್ನು ಕಬಳಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರವಸೆಯ ಬೌಲರ್ ಆಗಿ ಕಾಣಿಸಿಕೊಂಡಿದ್ದರು.

ಅದಕ್ಕೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಟೇಲ್ ರನ್ನು ಕೋಟಿ ಕೋಟಿ ಸುರಿದು ಖರೀದಿಸಿದೆ. ಇನ್ನು ಇತ್ತೀಚಿಗಷ್ಟೇ ಹರ್ಷಲ್ ಪಟೇಲ್ ರವರು ಸಾಕಷ್ಟು ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಮೊದಲನೇದಾಗಿ ಇತ್ತೀಚಿಗಷ್ಟೆ ಹರ್ಷಲ್ ಪಟೇಲ್ ರವರ ಅಕ್ಕ ಅಕಾಲಿಕವಾಗಿ ಮರಣ ಹೊಂದಿದ್ದು ಅಕ್ಕನ ಆಸೆಯಂತೆ ಮತ್ತೆ ಕ್ರಿಕೆಟ್ ಆಡಲು ಮರಳಿದ್ದು ಎಲ್ಲರ ಮನವನ್ನು ಗೆದ್ದಿದ್ದಾರೆ. ಇನ್ನು ಮೊನ್ನೆ ನಡೆದ ರಾಜಸ್ಥಾನ ರಾಯಲ್ ವಿರುದ್ಧದ ಪಂದ್ಯದಲ್ಲಿ ರಿಯಾನ್ ಪರಾಗ್ ಹಾಗೂ ಹರ್ಷಲ್ ಪಟೇಲ್ ರವರ ನಡುವೆ ನಡೆದಂತಹ ಮಾತಿನ ಚಕಮಕಿಯಲ್ಲಿ ಕೂಡ ಹರ್ಷಲ್ ಪಟೇಲ್ರವರು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಇತ್ತೀಚಿಗಷ್ಟೆ ಹರ್ಷಲ್ ಪಟೇಲ್ ರವರು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನವನ್ನು ನೀಡಿದ್ದು ಈ ಸಂದರ್ಭದಲ್ಲಿ ತಮಗೆ ಆದಂತಹ ಮೋಸದ ಕುರಿತಂತೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಹರ್ಷಲ್ ಪಟೇಲ್ ರವರಿಗೆ ಆದಂತಹ ಮೋಸವಾದರೂ ಏನೆಂಬುದು ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೇ ಇದು ನಡೆದಿರುವುದು 2018 ರಲ್ಲಿ. 2018 ರಲ್ಲಿ ಹಲವಾರು ತಂಡಗಳು ಹರ್ಷಲ್ ಪಟೇಲ್ ರವರನ್ನು ಖರೀದಿಸುವ ಭರವಸೆಯನ್ನು ನೀಡಿದ್ದರಂತೆ. ಆದರೆ ಹರಾಜಿನಲ್ಲಿ ಯಾರೂ ಕೂಡ ಹರ್ಷಲ್ ಪಟೇಲ್ ರವರನ್ನು ಖರೀದಿಸುವ ಮನಸ್ಸು ಮಾಡಲಿಲ್ಲ. ನಂತರ ಕೊನೆಗೆ ಡೆಲ್ಲಿ ತಂಡ ಹರ್ಷಲ್ ಪಟೇಲ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸುತ್ತದೆ. ಆ ವರ್ಷ ಹರ್ಷಲ್ ಪಟೇಲ್ ರವರು ಹೇಳಿಕೊಳ್ಳುವಂತಹ ಪ್ರದರ್ಶನವನ್ನು ಕೂಡ ನೀಡಲಿಲ್ಲ. ಆದರೆ ಈ ಘಟನೆ ಅವರಿಗೆ ತಾನು ಮೋಸ ಹೋದೆ ಎಂಬ ಅನುಭವವನ್ನು ಹೊಂದುವಂತೆ ಮಾಡುತ್ತದೆ. ಈ ಕುರಿತಂತೆ ಸಂಪೂರ್ಣವಾಗಿ ವಿವರವಾಗಿ ಹೇಳದಿದ್ದರೂ ಕೂಡ ಪರೋಕ್ಷವಾಗಿ ತಮಗಾದಂತಹ ಮೋಸದ ವಿವರವನ್ನು ನೀಡಿದ್ದಾರೆ.

Get real time updates directly on you device, subscribe now.