ವಿರಾಟ್ ಕೊಹ್ಲಿ ರವರ ಕಳಪೆ ಆಟ ನೋಡಿ ಬೇಸರಗೊಂಡ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ. ಹೇಳಿದ್ದೇನು ಗೊತ್ತೇ??

ವಿರಾಟ್ ಕೊಹ್ಲಿ ರವರ ಕಳಪೆ ಆಟ ನೋಡಿ ಬೇಸರಗೊಂಡ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಎನ್ನುವುದು ಸಾಕಷ್ಟು ಚಿತ್ರವಿಚಿತ್ರ ಘಟನೆಗಳಿಗೆ ಕಾರಣವಾಗಿದೆ. ಈಗಾಗಲೇ ಈ ಬಾರಿಯ ಐಪಿಎಲ್ ನಲ್ಲಿ ಚಾಂಪಿಯನ್ ತಂಡಗಳು ಪಂದ್ಯಗಳನ್ನು ಗೆಲ್ಲಲು ಹೆಣಗಾಡುತ್ತಿರುವುದನ್ನು ಕೂಡ ನಾವು ನೋಡುತ್ತಿದ್ದೇವೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಹೊಸ ಚಾಂಪಿಯನ್ ಅನ್ನು ನೋಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇನ್ನು ಈ ಬಾರಿ ಅದೆಷ್ಟೋ ಆಟಗಾರರು ಫಾರ್ಮ್ ನಲ್ಲಿ ಇಲ್ಲದೇ ಇರುವವರು ಉತ್ತಮ ಲಯಕ್ಕೆ ವಾಪಸಾಗಿದ್ದಾರೆ.

ಹೌದು ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ, ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಹಾಗೂ ಉಮೇಶ್ ಯಾದವ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ವಿರಾಟ್ ಕೊಹ್ಲಿ ರವರು ಇನ್ನು ಕೂಡ ಅವರ ನಿಜವಾದ ಪರ್ಫಾರ್ಮೆನ್ಸ್ ನೀಡುವುದಕ್ಕೆ ವಿಫಲರಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ನಾಯಕತ್ವದ ಜವಾಬ್ದಾರಿಯಿಂದಾಗಿ ವಿರಾಟ್ ಕೊಹ್ಲಿ ರವರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎನ್ನುವುದಾಗಿ ಭಾವಿಸಲಾಗಿತ್ತು.

ಡುಪ್ಲೆಸಿಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ವಹಿಸಿಕೊಂಡರು ಕೂಡ ವಿರಾಟ್ ಕೊಹ್ಲಿ ಅವರು ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಇದು ಕೇವಲ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಕ್ರಿಕೆಟ್ ಕಾಮೆಂಟೇಟರ್ ಹಾಗೂ ಮಾಜಿ ಕ್ರಿಕೆಟಿಗರಿಗೆ ಕೂಡ ಬೇಸರವನ್ನು ತರಿಸುತ್ತಿದೆ. ಅದರಲ್ಲೂ ಮಾಜಿ ಕ್ರಿಕೆಟಿಗ ರೊಬ್ಬರು ವಿರಾಟ್ ಕೊಹ್ಲಿ ರವರ ಈ ಪ್ರದರ್ಶನವನ್ನು ನೋಡಿ ನಮಗೆ ದುಃಖವಾಗುತ್ತಿದೆ ಕಣ್ಣೀರು ಬರುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಹೌದು ಗೆಳೆಯರೇ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ರವರು ವಿರಾಟ್ ಕೊಹ್ಲಿ ರವರು ಇದಾಗಲೇ 8 ಪಂದ್ಯಗಳಿಂದ ಕೇವಲ 119 ರನ್ನುಗಳನ್ನು ಗಳಿಸಿರುವುದು ಅದರಲ್ಲೂ ಎರಡು ಪಂದ್ಯಗಳಲ್ಲಿ ಮೊದಲ ಎಸೆತಕ್ಕೆ 0 ರನ್ನಿಗೆ ಔಟ್ ಆಗಿರುವುದು ಇದೆಲ್ಲವೂ ಕೂಡ ಆಕಾಶ್ ಚೋಪ್ರಾ ರವರಿಗೆ ಸಾಕಷ್ಟು ಬೇಸರವನ್ನು ಮೂಡಿಸಿದೆಯಂತೆ. ಆದರೆ ಇಂದಿಗೂ ಕೂಡ ಆಕಾಶ್ ಚೋಪ್ರಾ ರವರು ವಿರಾಟ್ ಕೊಹ್ಲಿ ರವರು ಮತ್ತೊಮ್ಮೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಯಾಕೆಂದರೆ ವಿರಾಟ್ ಕೊಹ್ಲಿ ರವರು ಒಬ್ಬ ಕೇವಲ ಕ್ರಿಕೆಟಿಗೆ ಮಾತ್ರವಲ್ಲದೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಭಾವನೆ ಕೂಡ ಆಗಿದ್ದಾರೆ. ಹೀಗಾಗಿ ಅವರ ಕಂಬ್ಯಾಕ್ ಭಾರತೀಯ ಕ್ರಿಕೆಟ್ ತಂಡಕ್ಕೆ ನಿಜಕ್ಕೂ ಕೂಡ ಲಾಭಕರವಾಗಿ ಪರಿಣಮಿಸಲಿದೆ ಎಂಬುದು ಇಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ.