ದಿನೇಶ್ ಕಾರ್ತಿಕ್ ಮುಂದಿನ ವಿಶ್ವಕಪ್ ಸ್ಥಾನ ಪಡೆಯುವುದು ಬಹುತೇಕ ಅನುಮಾನ, ಡಿಕೆಗೆ ಅಡ್ಡಗಾಲು ಹಾಕಿರುವ ಆಟಗಾರ ಯಾರು ಗೊತ್ತೇ??

ದಿನೇಶ್ ಕಾರ್ತಿಕ್ ಮುಂದಿನ ವಿಶ್ವಕಪ್ ಸ್ಥಾನ ಪಡೆಯುವುದು ಬಹುತೇಕ ಅನುಮಾನ, ಡಿಕೆಗೆ ಅಡ್ಡಗಾಲು ಹಾಕಿರುವ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಗೊತ್ತಿರುವ ಹಾಗೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುವ ನಿಜವಾದ ಕಾರಣಗಳಲ್ಲಿ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ಪ್ರದರ್ಶನವು ಕೂಡ ಅಡಗಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ರಾಯಲ್ ಚಾಲೆಂಜರ್ಸ್ ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಳ್ಳುವ ಮೂಲಕ ದಿನೇಶ್ ಕಾರ್ತಿಕ್ ರವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬಹುದು ಎನ್ನುವುದಾಗಿ ಹಲವಾರು ಮಾಜಿ ಕ್ರಿಕೆಟಿಗರು ದಿನೇಶ್ ಕಾರ್ತಿಕ್ ರವರ ಪರವಾಗಿ ಬ್ಯಾಟ್ ಬೀಸಿದ್ದಾರೆ

ಅದರಲ್ಲೂ ದಿನೇಶ್ ಕಾರ್ತಿಕ್ ಅವರೇ ಸ್ವತಹ ಹೇಳಿರುವಂತೆ ಐಪಿಎಲ್ ನಲ್ಲಿ ನಾನು ಈಗ ತೋರಿಸುತ್ತಿರುವ ಪ್ರದರ್ಶನ ಕೇವಲ ಕ್ರಿಕೆಟ್ ನ ಒಂದುಭಾಗವಷ್ಟೇ. ಆದರೆ ದೇಶಕ್ಕಾಗಿ ಏನನ್ನಾದರೂ ಸಾಧಿಸಿ ತೋರಿಸುವ ಛಲ ನನ್ನಲ್ಲಿ ಅಗಾಧವಾಗಿದೆ ಎಂಬುದಾಗಿ ಹೇಳಿ ಈ ಬಾರಿಯ t20 ವರ್ಲ್ಡ್ ಕಪ್ ಗೆ ತಾನು ಸಿದ್ದನಾಗಿದ್ದೇನೆ ಎನ್ನುವ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಕೇವಲ ಮಾತು ಮಾತ್ರ ಅಲ್ಲದೆ ದಿನೇಶ್ ಕಾರ್ತಿಕ್ ರವರು ತಮ್ಮ ಬ್ಯಾಟಿಂಗ್ ನಿಂದಲೂ ಕೂಡ ಸಾಬೀತುಪಡಿಸಿ ತೋರಿಸಿದ್ದಾರೆ. ಹೀಗಾಗಿ ಈ ಬಾರಿ ಅವರ ಪ್ರದರ್ಶನವನ್ನು ನೋಡಿದರೆ ಖಂಡಿತವಾಗಿ ಅವರ ಸ್ಥಾನವನ್ನು ಕಸಿದುಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಭಾವಿಸಲಾಗುತ್ತದೆ.

ಆದರೆ ಅವರ ಪ್ರತಿಸ್ಪರ್ಧಿ ಆಟಗಾರ ಈ ಬಾರಿ ಐಪಿಎಲ್ ನಲ್ಲಿಯೇ ಇದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಿನೇಶ್ ಕಾರ್ತಿಕ್ ರವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮಾಡುತ್ತಾರೆ. ಅವರ ಸ್ಥಾನಕ್ಕೆ ಪೈಪೋಟಿ ನೀಡಬಲ್ಲ ಅಂತಹ ಆಟಗಾರ ಕೂಡ ಮಧ್ಯಮ ಕ್ರಮಾಂಕದ ಆಟಗಾರ. ಹೌದು ನಾವು ಮಾತನಾಡುತ್ತಿರುವುದು ಹಾರ್ದಿಕ್ ಪಾಂಡ್ಯ ರವರ ಕುರಿತಂತೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಾರ್ದಿಕ್ ಪಾಂಡ್ಯ ರವರು ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರ ಹೋಗಿದ್ದರು. ಆದರೆ ಹಾರ್ದಿಕ್ ಪಾಂಡ್ಯ ರವರು ಈಗ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ನಾಯಕನಾಗಿ ಅಮೋಘ ಪ್ರದರ್ಶನವನ್ನು ನೀಡುತ್ತಿದ್ದಾರೆ. ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿರುವ ಮೂಲಕಾರಣವೇ ಅವರಾಗಿದ್ದಾರೆ. ಹೀಗಾಗಿ ಈ ಬಾರಿ ಟಿ20 ವರ್ಲ್ಡ್ ಕಪ್ ತಂಡದಲ್ಲಿ ದಿನೇಶ್ ಕಾರ್ತಿಕ್ ರವರ ಸ್ಥಾನಕ್ಕೆ ಪೈಪೋಟಿ ನೀಡಬಲ್ಲ ಅಂತಹ ಮತ್ತೊಬ್ಬ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ. ಇವರಿಬ್ಬರಲ್ಲಿ ಯಾರು ಸೆಲೆಕ್ಟ್ ಆಗಬಹುದು ಎಂಬುದನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮೂಲಕ ತಿಳಿಸಿ.