ರೋಹಿತ್ ಮೇಲೆ ಅಂದು ದಿನೇಶ್ ಕೋಪ ಮಾಡಿಕೊಂಡದ್ದು ಯಾಕೆ ಗೊತ್ತೇ?? ಕಾರ್ತಿಕ್ ಕುರಿತು ನಾಯಕ ರೋಹಿತ್ ಹೇಳಿದ್ದೇನು ಗೊತ್ತೇ?

ರೋಹಿತ್ ಮೇಲೆ ಅಂದು ದಿನೇಶ್ ಕೋಪ ಮಾಡಿಕೊಂಡದ್ದು ಯಾಕೆ ಗೊತ್ತೇ?? ಕಾರ್ತಿಕ್ ಕುರಿತು ನಾಯಕ ರೋಹಿತ್ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ರೋಹಿತ್ ಶರ್ಮಾ ರವರು ಪೂರ್ಣ ಪ್ರಮಾಣದಲ್ಲಿ ತನ್ನ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ತಾನು ಸಂಪೂರ್ಣ ನಾಯಕತ್ವವನ್ನು ವಹಿಸಿಕೊಂಡ ಮೇಲೆ ಮೂರು ಫಾರ್ಮೆಟ್ ಗಳಲ್ಲಿ ಸತತ 14 ಪಂದ್ಯಗಳಲ್ಲಿ ಜಯಭೇರಿ ಸಾಧಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ತನ್ನ ಹೆಸರನ್ನು ಬರೆಯುವ ನಿಟ್ಟಿನಲ್ಲಿ ಮುಂದುವರೆದಿದ್ದಾರೆ. ಆದರೆ ಈಗ ಐಪಿಎಲ್ ನಲ್ಲಿ ಮಾತ್ರ ಐದು ಬಾರಿಯ ಚಾಂಪಿಯನ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ರವರು ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲಿ ಕೂಡ ನೀರಸವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ.

ಅದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿರುವ ದಿನೇಶ್ ಕಾರ್ತಿಕ್ ರವರು ಫಿನಿಶರ್ ಜವಾಬ್ದಾರಿಯಲ್ಲಿ ಕಂಬ್ಯಾಕ್ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇವರಿಬ್ಬರ ನಡುವೆ ನಡೆದಿರುವಂತಹ ಘಟನೆ ಈಗ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನು ಪಡೆದುಕೊಂಡಿದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ನಡೆದಿರುವಂತಹ ಈ ಘಟನೆಯನ್ನು ರೋಹಿತ್ ಶರ್ಮಾ ರವರು ನೆನಪಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ತಾನು ಮೊದಲು ಬ್ಯಾಟಿಂಗ್ ಗೆ ಹೋಗುತ್ತೇನೆ ಎಂಬುದಾಗಿ ರೋಹಿತ್ ಶರ್ಮ ರವರ ಬಳಿ ಕೇಳಿಕೊಂಡಿದ್ದರಂತೆ.

ಆಗ ರೋಹಿತ್ ಶರ್ಮಾ ಅವರು ಬೇಡ ಎಂದು ಹೇಳಿದ್ದಕ್ಕೆ ದಿನೇಶ್ ಕಾರ್ತಿಕ್ ರವರು ತುಂಬಾನೇ ಕೋಪ ಮಾಡಿಕೊಂಡಿದ್ದಾರಂತೆ. ಅದೂ ಬೇರೆ ಬಾಂಗ್ಲಾದೇಶ ವಿರುದ್ಧ ಫೈನಲ್ ಪಂದ್ಯ. ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ರವರು ಪಂದ್ಯದಲ್ಲಿ ರನ್ ಔಟ್ ಆಗಿ ಬರುತ್ತಾರೆ ಆಗ ದಿನೇಶ್ ಕಾರ್ತಿಕ್ ರವರಿಗೆ ನಾಲ್ಕನೇ ಕ್ರಮಾಂಕದಲ್ಲಿ ನೀನು ಹೋಗು ಎನ್ನುವುದಾಗಿ ಹೇಳಿದಾಗ ಅವರು ಕೋಪದಿಂದಲೇ ಅಸಮಾಧಾನದಿಂದ ಓಕೆ ಎನ್ನುವುದಾಗಿ ಉತ್ತರಿಸುತ್ತಾರೆ. ಆಗ ದಿನೇಶ್ ಕಾರ್ತಿಕ್ ರವರು ನಾಲ್ಕನೇ ಕ್ರಮಾಂಕಕ್ಕೆ ಕ್ರೀಸಿಗೆ ಇಳಿಯುತ್ತಾರೆ. ಕೊನೆಯ ಎಸೆತದಲ್ಲಿ 5 ರನ್ ಬೇಕಾಗಿತ್ತು. ಆಗ ದಿನೇಶ್ ಕಾರ್ತಿಕ್ ರವರು ಸಿಕ್ಸ್ ಬಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಪಂದ್ಯದ ನಂತರ ರೋಹಿತ್ ಶರ್ಮಾ ರವರ ಬಳಿಗೆ ಪಾರ್ಟಿಯಲ್ಲಿ ಸಾರಿ ರೋಹಿತ್ ನನಗೆ ನೀನು ಕಳುಹಿಸಿದ ಕ್ರಮಾಂಕವೇ ಬೆಸ್ಟ್ ಎನಿಸುತ್ತೆ ಎಂಬುದಾಗಿ ಹೇಳಿದ್ದರಂತೆ. ಒಂದು ಲೆಕ್ಕದಲ್ಲಿ ಇದೆ ಬಂದಿದೆ ಮೂಲಕ ದಿನೇಶ್ ಕಾರ್ತಿಕ್ ರವರು ಫಿನಿಶರ್ ಜವಾಬ್ದಾರಿಯನ್ನು ತಿಳಿದುಕೊಂಡರು ಎಂದು ಹೇಳಬಹುದಾಗಿದೆ.