ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತಾನು ಯಾರಿಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ ಎಂದು ತಿಳಿಸಿದ ಸುನಿಲ್ ನರೈನ್, ಆ ಭಾರತೀಯ ಆಟಗಾರ ಯಾರು ಗೊತ್ತೇ??

6,057

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಹೊಸ ರೀತಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಟಾಸ್ ಗೆದ್ದ ಬಹುತೇಕ ನಾಯಕರು ಬೌಲಿಂಗ್ ಆಯ್ದುಕೊಳ್ಳುತ್ತಿದ್ದಾರೆ. ಶೇ 90ರಷ್ಟು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡವೇ ಗೆಲ್ಲುತ್ತಿದೆ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸಹ ಈ ಭಾರಿ ಉತ್ತಮವಾಗಿ ಆಡುತ್ತಿದ್ದು, ಪ್ಲೇ ಆಫ್ ಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ.

ಇನ್ನು ಇದೇ ವೇಳೆ ತಂಡದ ಇತರ ಬೌಲರ್ ಗಳು ಸಾಕಷ್ಟು ದುಬಾರಿಯಾದರೂ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಈ ಬೌಲರ್ ಮಾತ್ರ ಕಡಿಮೆ ರನ್ ನೀಡಿ ಪ್ರಮುಖ ಹಂತದಲ್ಲಿ ಮಹತ್ವದ ವಿಕೆಟ್ ತೆಗೆಯುತ್ತಾರೆ. ಆತ ಬೇರೆ ಯಾರೂ ಅಲ್ಲ,ವೆಸ್ಟ್ ಇಂಡೀಸ್ ತಂಡದ ಸುನಿಲ್ ನರೈನ್. ಕಳೆದ ಹತ್ತು ವರ್ಷಗಳಿಂದ ಸುನಿಲ್ ನರೈನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ಇದಲ್ಲದೇ ವೆಸ್ಟ್ ಇಂಡೀಸ್ ತಂಡದ ಪರ ಆಡಿ ಎರಡು ಟಿ 20 ವಿಶ್ವಕಪ್ ಗೆಲುವಿಗೂ ಪಾತ್ರರಾಗಿದ್ದಾರೆ.

ಇನ್ನು ಇತ್ತಿಚೆಗಷ್ಟೇ ಮಾತನಾಡುತ್ತಾ ಸುನಿಲ್ ನರೈನ್ ತಮ್ಮ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ ಗಳಿಗೆಯಿಂದ ಹಿಡಿದು ಇಲ್ಲಿಯವರೆಗೂ ನಡೆದ ಹಲವಾರು ಮಹತ್ತರವಾದ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಈ ಆಟಗಾರನಿಗೆ ಬೌಲಿಂಗ್ ಮಾಡಲು ನನಗೆ ಬಹಳ ಕಷ್ಟವಾಗುತ್ತಿತ್ತು. ಹೇಗೆ ಬೌಲಿಂಗ್ ಮಾಡಿದರೂ ಅವರು ಸಿಕ್ಸರ್, ಬೌಂಡರಿ ಭಾರಿಸುತ್ತಿದ್ದರು. ಹಾಗಾಗಿ ಅವರಿಗೆ ಬೌಲಿಂಗ್ ಮಾಡುವ ಸಮಯದಲ್ಲಿ ನನಗೆ ಬಹಳ ಕಷ್ಟವಾಗುತ್ತಿತ್ತು ಎಂದು ಹೇಳಿದರು. ಅಷ್ಟಕ್ಕೂ ನರೈನ್ ಹೇಳಿದ ಆ ಆಟಗಾರ ಬೇರೆ ಯಾರು ಅಲ್ಲ , ಅದು ನಮ್ಮ ಭಾರತದ ಡ್ಯಾಶಿಂಗ್ ಓಪನರ್. ಹೌದು ನಜಾಫಘಡದ ನವಾಬ್ ವಿರೇಂದ್ರ ಸೆಹ್ವಾಗ್ ರವರಿಗೆ ಬೌಲಿಂಗ್ ಮಾಡಲು ನರೈನ್ ಗೆ ಬಹಳಷ್ಟು ಭಯವಾಗುತ್ತಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.