ಕರುನಾಡ ವಾಣಿ
ಇದು ನಿಮ್ಮ ಧ್ವನಿ

ದೇಶದೆಲ್ಲೆಡೆ ಸದ್ದು ಮಾಡುವಂತಹ ನಿರ್ಧಾರ ತೆಗೆದುಕೊಳ್ಳುತ್ತಿರುವ ಅಸ್ಸಾಂನಲ್ಲಿ ಗುವಾಹಟಿ ಪಾಲಿಕೆ ಎಲೆಕ್ಷನ್ ಫಲಿತಾಂಶ ಪ್ರಕಟ, ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿಹೋದದ್ದು ಹೇಗೆ ಗೊತ್ತೇ??

89

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮ್ಮ ತಿಳಿದಿರುವಂತೆ ಬಹುತೇಕ ಭಾರತದ ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಬಿಜೆಪಿ ಮಿತ್ರ ಪಕ್ಷಗಳ ಆಡಳಿತ ಹೆಚ್ಚಾಗಿದೆ. ಯಾಕೆಂದರೆ ಬಿಜೆಪಿ ಪಕ್ಷವನ್ನು ನಂಬಿ ಜನರು ನೀಡಿರುವ ತೀರ್ಪಾಗಿದೆ ಎಂದು ಹೇಳಬಹುದಾಗಿದೆ. ಇಂದು ನಾವು ಮಾತನಾಡಲು ಹೊರಟಿರುವುದು ಅಸ್ಸಾಂನ ಗುವಾಹಟಿ ಪಾಲಿಕೆಯ ಎಲೆಕ್ಷನ್ ಕುರಿತಂತೆ. ಹೌದು ಇದರಲ್ಲಿ ಕೂಡ ಬಿಜೆಪಿ ಹಾಗೂ ಬಿಜೆಪಿಯ ಮಿತ್ರಪಕ್ಷಗಳು ಕ್ಲೀನ್-ಸ್ವೀಪ್ ಸಾಧಿಸಿವೆ ಎಂದರೆ ತಪ್ಪಾಗಲಾರದು. ಮತ್ತೆ ಮತ್ತೆ ಬಿಜೆಪಿ ಪಕ್ಷ ಜನರ ಮೆಚ್ಚುಗೆಗೆ ಕಾರಣವಾಗುತ್ತಿರುವುದು ಹೇಳಿರುವ ಕೆಲಸಗಳನ್ನು ನಿರ್ವಹಿಸಿರುವ ಕಾರಣಕ್ಕಾಗಿಯೇ ಎಂದು ಹೇಳಬಹುದಾಗಿದೆ.

ಗುವಾಹಟಿಯ ಪಾಲಿಕೆ ಎಲೆಕ್ಷನ್ ನಲ್ಲಿ ಬಿಜೆಪಿ ಹಾಗೂ ಬಿಜೆಪಿ ಪಕ್ಷದ ಮಿತ್ರ ಪಕ್ಷವಾಗಿರುವ ಎಜೆಪಿ 60ರಲ್ಲಿ 58 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ನಗರ ಹಾಗೂ ಈಶಾನ್ಯ ಗುವಾಹಟಿಯಲ್ಲಿ ಬಿಜೆಪಿ 52 ಸ್ಥಾನವನ್ನು ಗೆದ್ದರೆ ಬಿಜೆಪಿಯ ಮಿತ್ರ ಪಕ್ಷವಾಗಿರುವ ಎಜೆಪಿ(AGP) ಆರು ಸ್ಥಾನಗಳನ್ನು ಗೆದ್ದುಕೊಂಡಿದೆ. ಇದೇ ಸಂದರ್ಭದಲ್ಲಿ ಬಿಜೆಪಿಯ ನಂತರ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಕೂಡ ಸಾಧ್ಯವಾಗಿಲ್ಲ ಎನ್ನುವುದು ಮತ್ತೊಂದು ಗಮನಿಸಬೇಕಾಗಿರುವಂತಹ ವಿಚಾರ. ಈ ಮೂಲಕ ಜನರು ಕಾಂಗ್ರೆಸ್ ಪಕ್ಷದ ಮೇಲೆ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ‌.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ಆರಂಭಿಸಿದೆ ಎಂದು ಹೇಳಬಹುದಾಗಿದೆ. ಈ ಬಾರಿ ಪಾಲಿಕೆ ಚುನಾವಣೆಯ ವಾರ್ಡ್ ಗಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಲಾಗಿತ್ತು. ಅದರಲ್ಲೂ ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ 50% ಮಹಿಳೆಯರಿಗೆ ಮೀಸಲಾತಿ ನೀಡಲಾಗಿತ್ತು ಎನ್ನುವುದು ಕೂಡ ಗಮನಾರ್ಹವಾಗಿದೆ. ಇದರಲ್ಲಿ ಮೂರು ಬಿಜೆಪಿ ಅಭ್ಯರ್ಥಿಗಳು ಯಾವುದೇ ವಿರೋಧವಿಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದರು ಎನ್ನುವುದು ಕೂಡ ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಗುವಾಹಟಿ ಪಾಲಿಕೆಯ ಈ ಎಲೆಕ್ಷನ್ ನಲ್ಲಿ ಅನಾಯಾಸವಾಗಿ ಗೆದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಮೇಲೆ ಜನರು ಇರುವಂತಹ ನಂಬಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಗಳಾಗಿರುವ ಹಿಮಂತ್ ಬಿಸ್ವಾ ಶರ್ಮ ರವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ

Get real time updates directly on you device, subscribe now.