ಒಂದು ಕಡೆ 7 ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮ ರವರಿಂದ ಬೇಡದ ದಾಖಲೆ ಸೃಷ್ಟಿ. ಶ್ರೇಷ್ಠ ಆಟಗಾರನಿಗೆ ಇದೆಂತ ದಾಖಲೆ ಗೊತ್ತೇ??

ಒಂದು ಕಡೆ 7 ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮ ರವರಿಂದ ಬೇಡದ ದಾಖಲೆ ಸೃಷ್ಟಿ. ಶ್ರೇಷ್ಠ ಆಟಗಾರನಿಗೆ ಇದೆಂತ ದಾಖಲೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಸೀಸನ್ ಎನ್ನುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಜಕ್ಕೂ ಕೂಡ ಕೆಟ್ಟ ಸೀಸನ್ ಆಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಬರೋಬರಿ ಆಡಿರುವ ಏಳು ಪಂದ್ಯಗಳಲ್ಲಿ ಏಳು ಪಂದ್ಯವನ್ನು ಕೂಡ ಮುಂಬೈ ಇಂಡಿಯನ್ಸ್ ತಂಡ ಸೋತು ಸುಣ್ಣವಾಗಿದೆ. ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡ ಇಂತಹ ಒಂದು ಕೆಟ್ಟ ಫಲಿತಾಂಶವನ್ನು ಎದುರು ನೋಡ ಬೇಕಾಗುವ ಪರಿಸ್ಥಿತಿ ಬರುತ್ತದೆ ಎಂಬುದನ್ನು ಅವರು ಕನಸು-ಮನಸಿನಲ್ಲಿಯೂ ಕೂಡ ಊಹಿಸಿರಲು ಸಾಧ್ಯವಿಲ್ಲ.

ಇನ್ನು ಇಂದು ಮುಂಬೈ ಇಂಡಿಯನ್ ತಂಡ ಐಪಿಎಲ್ ನ ತನ್ನ ಬದ್ಧವೈರಿ ಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕೊನೆಯ ಓವರಿನಲ್ಲಿ ಮೂರು ವಿಕೆಟ್ಗಳ ಸೋಲನ್ನು ಕಂಡಿದೆ. ಈ ಮೂಲಕ ತನ್ನ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಕೊನೆಯ ಕನಸನ್ನು ಕೂಡ ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಹೇಳಬಹುದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸೋತರು ಕೂಡ ಇಲ್ಲಿ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ದಾಖಲೆ ಹೊಗಳು ವಂತದ್ದಲ್ಲ ಬದಲಾಗಿ ನಿಜಕ್ಕೂ ಕೂಡ ವಿಚಿತ್ರವಾದ ದಾಖಲೆ ಎಂದು ಹೇಳಬಹುದಾಗಿದೆ‌.

ಹೌದು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಶೂನ್ಯ ರನ್ನಿಗೆ ಔಟ್ ಆಗಿರುವವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ರವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪಿಯುಸಿ ಚಾವ್ಲಾ ಹರ್ಭಜನ್ ಸಿಂಗ್ ಪಾರ್ಥಿವ್ ಪಟೇಲ್ ರವರ ಹೆಸರಿನಲ್ಲಿ 13 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಕಾಣಿಸಿಕೊಂಡಿತ್ತು. ಆದರೆ ರೋಹಿತ್ ಶರ್ಮಾ ರವರು 14ನೇ ಬಾರಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಇಂಥ ದಾಖಲೆಯನ್ನು ಕೂಡ ಮುರಿದಿದ್ದಾರೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ರವರು ನೀರಸವಾದ ಪ್ರದರ್ಶನವನ್ನು ನೀಡಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ 114 ರನ್ನುಗಳನ್ನು ಮಾತ್ರ ಬಾರಿಸಿದ್ದಾರೆ. ತಂಡದ ನಾಯಕನಂತೆ ತಂಡವು ಕೂಡ ಸಂಪೂರ್ಣ ವೈಫಲ್ಯವನ್ನು ಈ ಬಾರಿ ಐಪಿಎಲ್ ನಲ್ಲಿ ಕಂಡಿದೆ. ಈ ಕುರಿತಂತೆ ನಿಮ್ಮ ರಿಯಾಕ್ಷನ್ ಏನು ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.