ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಾಳಿನ ಹೈದರಾಬಾದ್ ವಿರುದ್ಧ ಪಂದ್ಯಕ್ಕೂ ಮುನ್ನ ಆರ್ಸಿಬಿಯಲ್ಲಿ ನಡೆಯಲಿದೆಯೇ ಮಹಾ ಬದಲಾವಣೆ?? ಯಾರು ಇನ್ ಯಾರು ಔಟ್ ಆಗಬಹುದು ಗೊತ್ತೇ??

134

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಟಾಟಾ 2022 ರ ಅರ್ಧದಷ್ಟು ಪಂದ್ಯಗಳು ಮುಗಿದಿವೆ. ದ್ವಿತೀಯಾರ್ಧದ ಟೂರ್ನಮೆಂಟ್ ಪಂದ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಬಲಿಷ್ಠ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲಿದೆ. ಸನ್ರೈಸರ್ಸ್ ಹೈದರಾಬಾದ್ ಕಂಡ ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿತ್ತು. ಆದರೆ ಈಗ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರುಗಡೆ ಸಮಾನವಾದ ಪ್ರದರ್ಶನವನ್ನು ನೀಡುವ ಭರವಸೆಯನ್ನು ನೀಡಿದೆ.

ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡುವಾಗ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು ಎನ್ನುವುದಾಗಿ ಕ್ರಿಕೆಟ್ ಪಂಡಿತರು ಈಗಾಗಲೇ ಸಲಹೆ ಹಾಗೂ ಲೆಕ್ಕಾಚಾರವನ್ನು ಕೂಡ ನೀಡಿದ್ದಾರೆ. ಇಷ್ಟೊಂದು ಬಲಿಷ್ಠವಾಗಿ ಕಂಡರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬದಲಾವಣೆಗಳನ್ನು ಮಾಡಲೇಬೇಕೆಂದು ಕ್ರಿಕೆಟ್ ಪಂಡಿತರು ಯಾಕೆ ಹೇಳುತ್ತಿದ್ದಾರೆ ಹಾಗಾದರೆ ಆಟಗಾರರು ಯಾರು ಎನ್ನುವುದರ ತಿಳಿಯೋಣ ಬನ್ನಿ. ಮೊದಲಿಗೆ ಪ್ರಮುಖವಾಗಿ ತಂಡದ ಆರಂಭಿಕ ಆಟಗಾರನಾಗಿರುವ ಯುವ ಕ್ರಿಕೆಟಿಗ ಅನುಜ್ ರಾವತ್ ರವರನ್ನು ಬೆಂಚ್ ಮಾಡಲೇಬೇಕೆಂದು ಕ್ರಿಕೆಟ್ ಪಂಡಿತರು ಸಲಹೆ ನೀಡಿದ್ದಾರೆ.

ಈಗಾಗಲೇ ಹಲವಾರು ಅವಕಾಶವನ್ನು ಅನುಜ್ ರವರಿಗೆ ನೀಡಿದ್ದರೂ ಕೂಡ ಅವರು ಅದರ ಸದುಪಯೋಗವನ್ನು ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಅವರ ಬದಲಿಗೆ ತಂಡದಲ್ಲಿ ಓಪನರ್ ಬ್ಯಾಟ್ಸ್ ಮ್ಯಾನ್ ಸ್ಥಾನಕ್ಕೆ ಮಹಿಪಾಲ್ ಲೋಮ್ರೋರ್ ರವರನ್ನು ಆಯ್ಕೆ ಮಾಡಬೇಕಾಗಿದೆ. ಅವರಿಗೆ ಯಾವುದೇ ಬ್ಯಾಟಿಂಗ್ ಸ್ಥಾನವನ್ನು ನೀಡಿದರೂ ಕೂಡ ಸರಿಯಾಗಿ ನಿರ್ವಹಿಸಬಲ್ಲ ಅಂತಹ ಅನುಭವ ಇದೆ. ಇನ್ನು ವನಿಂದು ಹಸರಂಗ ಕೂಡ ಸ್ಪಿನ್ ಬೌಲಿಂಗ್ ನಲ್ಲಿ ಕೊಂಚಮಟ್ಟಿಗೆ ರನ್ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಹೀಗಾಗಿ ಅವರ ಬದಲಿಗೆ ಸ್ಪಿನ್ ಬೌಲರ್ ಆಗಿರುವ ಕರಣ್ ಶರ್ಮ ರವರನ್ನು ತರಬೇಕು ಎನ್ನುವುದಾಗಿ ಕ್ರಿಕೆಟ್ ಪಂಡಿತರು ಸಲಹೆ ನೀಡಿದ್ದಾರೆ. ತಂಡದ ನಾಯಕನಾಗಿರುವ ಡುಪ್ಲೆಸಿಸ್ ರವರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈ ಪ್ಲಾನನ್ನು ಕಾರ್ಯರೂಪಕ್ಕೆ ತರುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Get real time updates directly on you device, subscribe now.