ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶಹಬಾಜ್ ಅಹಮದ್ ಆಟದ ಕುರಿತು ಮೊದಲ ಬಾರಿಗೆ ಮಾತನಾಡಿದ ಮೈಕ್ ಹೆಸನ್, ಹೇಳಿದ್ದೇನು ಗೊತ್ತೇ??

51

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ನಿಮಗೆಲ್ಲಾ ತಿಳಿದಿರುವಂತೆ ಬಹಳಷ್ಟು ರೋಚಕವಾಗಿ ಸಾಗುತ್ತಿದೆ. ಪ್ಲೇ ಆಫ್ ಪ್ರವೇಶಿಸಲು ಆರು ತಂಡಗಳು ತುರುಸಿನ ಸ್ಪರ್ಧೆಗೆ ಇಳಿದಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಈ ಭಾರಿ ಉತ್ತಮ ಪ್ರದರ್ಶನ ನೀಡಿದ್ದು, ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿದೆ. ಹೀಗಾಗಿ ಉಳಿದಿರುವ ಏಳು ಪಂದ್ಯಗಳಲ್ಲಿ ಕನಿಷ್ಠ ನಾಲ್ಕರಲ್ಲಿ ಗೆದ್ದರೇ, ಪ್ಲೇ ಆಫ್ ಪ್ರವೇಶ ಖಚಿತವಾಗುತ್ತದೆ.

ಇನ್ನು ಆರ್ಸಿಬಿಯ ಈ ಉತ್ತಮ ಪ್ರದರ್ಶನದ ಬಗ್ಗೆ ಮಾತನಾಡಿರುವ ಆರ್ಸಿಬಿ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಆಟಗಾರರ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅದರಲ್ಲೂ ಈ ಸರಣಿಯ ಎಲ್ಲಾ ಪಂದ್ಯಗಳಲ್ಲಿ ತಂಡದ ಆಪತ್ಭಾಂದವ ಎನಿಸಿಕೊಂಡಿರುವ ಆಲ್ ರೌಂಡರ್ ಶಹಬಾಜ್ ಅಹಮದ್ ರನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಹೆಸನ್ ಶಹಭಾಷ್ ಅಹಮದ್ ಎಂದು ಹೇಳಿದ್ದಾರೆ.

ಆರ್ಸಿಬಿಯ ಮೊದಲ ಪಂದ್ಯ ಪಂಜಾಬ್ ಕಿಂಗ್ಸ್ ಬಿಟ್ಟರೇ, ಉಳಿದೆಲ್ಲಾ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ಶಹಬಾಜ್ ಅಹಮದ್, ತಂಡವನ್ನು ಕೇವಲ ಸಂಕಷ್ಟದಿಂದ ಪಾರು ಮಾಡಿದ್ದಲ್ಲದೇ, ರನ್ ಗತಿ ಸಹ ಹೆಚ್ಚಿಸಿ, ತಂಡ ಉತ್ತಮ ರನ್ ಗಳಿಸಲು ಕಾರಣರಾಗಿದ್ದಾರೆ. ಅದಲ್ಲದೇ ಬೌಲಿಂಗ್ ನಲ್ಲಿಯೂ ಸಹ ಉತ್ತಮ ಲೈನ್ ಎಂಡ್ ಲೆಂಗ್ತ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದ್ದಾರೆ.ಇನ್ನು ಫೀಲ್ಡಿಂಗ್ ನಲ್ಲಿಯೂ ಸಹ ಉತ್ತಮವಾಗಿರುವ ಶಹಬಾಜ್ ಅಹಮದ್, ಪಾಯಿಂಟ್ ಹಾಗೂ ಬೌಂಡರಿ ಲೈನ್ ನಲ್ಲಿ ಅನೇಕ ಬಾರಿ ತಮ್ಮ ಚುರುಕಿನ ಕ್ಷೇತ್ರ ರಕ್ಷಣೆಯಿಂದ ಹಲವಾರು ರನ್ ಗಳನ್ನು ತಡೆದಿದ್ದಲ್ಲದೇ, ಉತ್ತಮವಾದ ಕ್ಯಾಚ್ ಗಳನ್ನು ಸಹ ಪಡೆದಿದ್ದಾರೆ. ಹೀಗಾಗಿ ಮೈಕ್ ಹೆಸನ್ ಶಹಬಾಜ್ ಅಹಮದ್ ರನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.