ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆರ್ಸಿಬಿ ತಂಡದಲ್ಲಿ ಆರಂಭಿಕ ಆಟಗಾರರ ವೈಫಲ್ಯ, ಹಿರಿಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ ಪರಿಹಾರವೇನು ಗೊತ್ತೇ?? ಹೀಗೇ ಮಾಡಿದರೇ ಒಳ್ಳೆಯದು ಎಂದ ಫ್ಯಾನ್ಸ್.

ಆರ್ಸಿಬಿ ತಂಡದಲ್ಲಿ ಆರಂಭಿಕ ಆಟಗಾರರ ವೈಫಲ್ಯ, ಹಿರಿಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ ಪರಿಹಾರವೇನು ಗೊತ್ತೇ?? ಹೀಗೇ ಮಾಡಿದರೇ ಒಳ್ಳೆಯದು ಎಂದ ಫ್ಯಾನ್ಸ್.

2,209

ನಮಸ್ಕಾರ ಸ್ನೇಹಿತರೇ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಎರಡು ಸೋಲು ಹಾಗೂ ಐದು ಗೆಲುವುಗಳ ಮೂಲಕ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವಂತಹ ನಂಬಿಕೆಯನ್ನು ಇನ್ನಷ್ಟು ದೃಢೀಕರಿಸಿದೆ‌‌. ಅದರಲ್ಲೂ ನಿನ್ನೆ ಲಕ್ನೋ ತಂಡದ ವಿರುದ್ಧ ಡುಪ್ಲೆಸಿಸ್ ರವರು ನಾಯಕನ ಆಟವಾಡಿದ್ದಾರೆ.

Follow us on Google News

64 ಎಸೆತಗಳಲ್ಲಿ ಬರೋಬ್ಬರಿ 96 ರನ್ನುಗಳನ್ನು ಬಾರಿಸಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಬೌಲಿಂಗ್ ವಿಭಾಗದಲ್ಲಿ ಜೋಶ್ ಹೆಝಲ್ ವುಡ್ ನಾಲ್ಕು ವಿಕೆಟ್ ಗಳನ್ನು ಕಿತ್ತು ಗೆಲುವಿಗೆ ಸಹಕಾರಿಯಾಗಿದ್ದಾರೆ. ಒಟ್ಟಾರೆಯಾಗಿ ನಿನ್ನೆ ಸಂಘಟಿತ ಪ್ರದರ್ಶನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕಾರಣವಾಯಿತು ಎಂದರೆ ತಪ್ಪಾಗಲಾರದು. ಆದರೆ ಆರಂಭಿಕ ಆಟಗಾರರ ನೀರಸ ಪ್ರದರ್ಶನ ಮತ್ತೆ ಮುಂದುವರೆದಿದೆ ಇದು ನಿನ್ನೆಯ ಪಂದ್ಯದಲ್ಲಿ ಕೂಡ ಮತ್ತೊಮ್ಮೆ ಸಾಬೀತಾಗಿದೆ. ಇದರ ಕುರಿತಂತೆ ಪರಿಹಾರದ ಮಾತುಗಳು ಎಂಬಂತೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಗಿರುವ ಸಂಜಯ್ ಮಂಜ್ರೇಕರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ ಅವರು ಈ ಸಮಸ್ಯೆಯ ಕುರಿತಂತೆ ನೀಡಿರುವ ಅಭಿಪ್ರಾಯ ಏನು ಎಂಬುದನ್ನು ತಿಳಿಯೋಣ ಬನ್ನಿ. ನಿನ್ನೆಯ ಪಂದ್ಯದಲ್ಲಿ ಡುಪ್ಲೆಸಿಸ್ ರವರೊಂದಿಗೆ ಓಪನಿಂಗ್ ಬ್ಯಾಟಿಂಗ್ ಮಾಡಿದ ಯುವ ಆಟಗಾರ ಅನುಜ್ ರವತ್ ಕೇವಲ ಒಂದು ಬೌಂಡರಿ ಬಾರಿಸಿ ಔಟ್ ಆಗುತ್ತಾರೆ. ಇನ್ನು ವಿರಾಟ್ ಕೊಹ್ಲಿ ರವರಂತೂ ಮೊದಲ ಎಸೆತದಲ್ಲಿ ಔಟಾಗಿ ಗೋಲ್ಡನ್ ಡಕ್ ಔಟ್ ಆಗುತ್ತಾರೆ. ಹೀಗಾಗಿ ಸಂಜಯ್ ಮಂಜ್ರೇಕರ್ ರವರು ಹೇಳುವುದೇನೆಂದರೆ ಡುಪ್ಲೆಸಿಸ್ ಅವರೊಂದಿಗೆ ವಿರಾಟ್ ಕೊಹ್ಲಿ ಓಪನಿಂಗ್ ಗೆ ಕಳುಹಿಸಿ ಅನುಜ್ ರಾವತ್ ರವರನ್ನು ವಿರಾಟ್ ಕೊಹ್ಲಿ ರವರ ಒನ್ ಡೌನ್ ಸ್ಥಾನದಲ್ಲಿ ಆಡಿಸಿದರೆ ಆರಂಭಿಕ ಬ್ಯಾಟಿಂಗ್ ಪ್ರದರ್ಶನದಲ್ಲಿ ಕೊಂಚ ಬದಲಾವಣೆ ಕಂಡು ಬರಬಹುದಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ನಿಜಕ್ಕೂ ಇದು ಒಳ್ಳೆಯ ಪರಿಹಾರ ಎಂದಿದ್ದಾರೆ. ಈ ಕುರಿತಂತೆ ಕೋಚ್ ಮೈಕ್ ಹಸನ್ ಹಾಗೂ ನಾಯಕ ಡುಪ್ಲೆಸಿಸ್ ರವರು ಕೊಂಚಮಟ್ಟಿಗೆ ವಿಚಾರವನ್ನು ಮಾಡಬೇಕಾಗಿರುವುದು ಸಮಂಜಸವಾಗಿದೆ.