ಆರ್ಸಿಬಿಯನ್ನು ಟ್ರೊಲ್ ಮಾಡಲು ಪ್ರಯತ್ನ ಪಟ್ಟ ಲಕ್ನೋ ತಂಡದ ಅಡ್ಮಿನ್ ಗೆ ಆರ್ಸಿಬಿ ಗೆ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??

ಆರ್ಸಿಬಿಯನ್ನು ಟ್ರೊಲ್ ಮಾಡಲು ಪ್ರಯತ್ನ ಪಟ್ಟ ಲಕ್ನೋ ತಂಡದ ಅಡ್ಮಿನ್ ಗೆ ಆರ್ಸಿಬಿ ಗೆ ಕೊಟ್ಟ ಖಡಕ್ ಉತ್ತರ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಐಪಿಎಲ್ ಗೆ ಭರ್ಜರಿ ಆರಂಭ ಸಿಕ್ಕಿದ್ದು ಅರ್ಧದಷ್ಟು ಪಂದ್ಯಗಳು ಈಗಾಗಲೇ ಮುಗಿದಿದೆ. ಇನ್ನು ಇತ್ತೀಚಿಗಷ್ಟೇ ಅಂದರೆ ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಗೆಲುವಿನ ಸಾಧಿಸಿದೆ. ಹೌದು ಗೆಳೆಯರೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಆಟಗಾರರ ವಿಫಲತೆಯನ್ನು ಪಡೆಯಿತು. ಅನುಜ್ ರಾವತ್ ಕೇವಲ ನಾಲ್ಕು ರನ್ನುಗಳಿಗೆ ಔಟಾದರೆ ಕೊಹ್ಲಿ ರವರು ಮೊದಲ ಎಸೆತಕ್ಕೆ ಕ್ಯಾಚ್ ನೀಡಿ ಆಗಿರುತ್ತಾರೆ. ಇದರ ನಡುವೆ ಕೂಡ ಆರಂಭಿಕ ಬ್ಯಾಟ್ಸ್ಮನ್ ಹಾಗೂ ತಂಡದ ಕಪ್ತಾನನಾಗಿ ಇರುವ ಡುಪ್ಲೆಸಿಸ್ ರವರು ಬರೋಬ್ಬರಿ 96 ರನ್ನುಗಳನ್ನು ಬಾರಿಸುವ ಮೂಲಕ ತಂಡದ ಮೊತ್ತ 181 ಆಗುವಂತೆ ಮಾಡಿದ್ದಾರೆ.

ಈ ಮೂಲಕ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 182 ರನ್ನುಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಆದರೆ ಎರಡನೇ ಬ್ಯಾಟಿಂಗ್ ಗೆ ಇಳಿದ ಲಕ್ನೋ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಭಾವಿ ಬೌಲರ್ ಆಗಿರುವ ಆಸ್ಟ್ರೇಲಿಯಾದ ಜೋಶ್ ಹೆಝಲ್ ವುಡ್ ರವರ ಬೌಲಿಂಗ್ ದಾಳಿಗೆ ಕೇವಲ 163 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ 18 ರನ್ನುಗಳು ಗೆಲುವನ್ನು ದಾಖಲಿಸಲು ಯಶಸ್ವಿಯಾಯಿತು. ಇನ್ನು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅದರಲ್ಲೂ ಟ್ವಿಟರ್ನಲ್ಲಿ ತಂಡದ ಪೇಜ್ ಅಡ್ಮಿನಗಳು ಪರಸ್ಪರ ಒಬ್ಬರನ್ನೊಬ್ಬರು ಕಾಲೆಳೆಯುವುದನ್ನು ಹಾಗೂ ತಮಾಷೆಗಾಗಿ ಟೀಕಿಸುವುದನ್ನು ಮಾಡುತ್ತಲೇ ಇರುತ್ತಾರೆ.

ಪಂದ್ಯ ಆರಂಭಕ್ಕೂ ಮುನ್ನ ಲಕ್ನೋ ತಂಡದ ಅಡ್ಮಿನ್ ಟ್ವಿಟರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾತೆಯನ್ನು ಟ್ಯಾಗ್ ಮಾಡಿ ಇಂದು ನಿಮಗೆ ಗೆಲ್ಲಲು ಸಾಧ್ಯವಾಗುವುದಿಲ್ಲ ಎನ್ನುವುದಾಗಿ ಟೀಕಿಸಿದ್ದರು. ಪಂದ್ಯ ಮುಗಿಯುವವರೆಗೂ ಕೂಡ ಸುಮ್ಮನಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವಿಟರ್ ಅಡ್ಮಿನ್ ಪಂದ್ಯ ಮುಗಿದ ನಂತರ ತಂಡ ಗೆದ್ದ ನಂತರ ಕೆಜಿಎಫ್ ಚಾಪ್ಟರ್ 1ರಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಹೇಳಿರುವ ಇಫ್ ಯೂ ಥಿಂಕ್ ಯೂ ಆರ್ ಬ್ಯಾಡ್ ಐ ಎಮ್ ಯೂ ಆರ್ ಡ್ಯಾಡ್ ಎನ್ನುವುದಾಗಿ ಖಡಕ್ ರಿಪ್ಲೈ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷವನ್ನು ನೀಡಿದ್ದಾರೆ. ತಂಡಗಳ ಸಾಮಾಜಿಕ ಖಾತೆಗಳ ನಡುವೆ ಇಂತಹ ಹಾಸ್ಯಾಸ್ಪದ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಆನ್ಲೈನ್ ನಲ್ಲಿ ಕೂಡ ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ಸಿಗುತ್ತದೆ.