ಎಲ್ಲಾ ಪಂದ್ಯಗಳನ್ನು ಸೋತಿರುವ ತಂಡವನ್ನು ಗೆಲ್ಲಿಸಲು ಮತ್ತೊಬ್ಬ ಆಟಗಾರನನ್ನು ಕರೆತರಲು ಮುಂದಾದ ರೋಹಿತ್. ರೋಹಿತ್ ಪ್ಲಾನ್ ಏನು ಗೊತ್ತೇ??

ಎಲ್ಲಾ ಪಂದ್ಯಗಳನ್ನು ಸೋತಿರುವ ತಂಡವನ್ನು ಗೆಲ್ಲಿಸಲು ಮತ್ತೊಬ್ಬ ಆಟಗಾರನನ್ನು ಕರೆತರಲು ಮುಂದಾದ ರೋಹಿತ್. ರೋಹಿತ್ ಪ್ಲಾನ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಮಂಕು ಕವಿದಂತೆ ಆರಕ್ಕೆ ಆರು ಪಂದ್ಯಗಳನ್ನು ಸೋತು ಸುಣ್ಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಸಮರ್ಥಕರು ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಕೂಡ ವಹಿಸಿಕೊಂಡಿರುವುದರಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದಾಗಿ ತೆರೆಮರೆಯಲ್ಲಿ ರೋಹಿತ್ ಶರ್ಮಾ ರವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಆದರೆ ಚಾಂಪಿಯನ್ ಎನಿಸಿಕೊಂಡಿರುವ ತಂಡ ಉತ್ತಮ ಆಟಗಾರರನ್ನು ಹೊಂದಿದ್ದರೂ ಕೂಡ ಸತತವಾಗಿ 6 ಪಂದ್ಯಗಳನ್ನು ಸೋಲುವುದು ಎಂದರೆ ತಮಾಷೆಯ ಮಾತಲ್ಲ. ಮುಂಬೈ ಇಂಡಿಯನ್ಸ್ ತಂಡಕ್ಕಿಂತ ವೀಕ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಯಾವುದೇ ಕಾರಣಗಳು ಕೂಡ ನೀಡುವುದಕ್ಕೆ ನೆಪಮಾತ್ರ ಹೊರತು ನಿಜವಾದ ಕಾರಣವನ್ನು ಹೊಂದಿಲ್ಲ ಎಂದು ಹೇಳಬಹುದಾಗಿದೆ. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ಪ್ರಮುಖ ಆಟಗಾರನಾಗಿದ್ದ ಜೋಫ್ರಾ ಆರ್ಚರ್ ಕೂಡ ಈ ಬಾರಿ ತಂಡವನ್ನು ಸೇರಿಕೊಂಡಿಲ್ಲ. ಇದು ತಂಡದ ಮನೋಬಲವನ್ನು ಕುಸಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಈ ಕಾರಣಕ್ಕಾಗಿಯೇ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಒಬ್ಬ ಆಟಗಾರನನ್ನು ತಂಡಕ್ಕೆ ಕರೆ ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ ಅದಕ್ಕೆ ಕಾರಣ ಕೂಡ ಇದೆ. ಈ ಎಲ್ಲ ವಿಚಾರಗಳ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ರೋಹಿತ್ ಶರ್ಮಾ ಅವರು ತಂಡಕ್ಕೆ ಕರೆತರಬೇಕೆಂದು ಆಟಗಾರ ಇನ್ಯಾರು ಅಲ್ಲ ಮುಂಬೈ ತಂಡದ ಮಾಜಿ ಆಟಗಾರ ಧವಳ್ ಕುಲಕರ್ಣಿ. ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಈಗಾಗಲೇ ಸಾಕಷ್ಟು ನಿಸ್ತೇಜವಾಗಿ ಇರುವಂತೆ ಕಾಣುತ್ತಿದೆ. ಅದರಲ್ಲೂ ಈ ಬಾರಿಯ ಐಪಿಎಲ್ ಪಂದ್ಯಾಟಗಳು ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ಸ್ಟೇಡಿಯಂ ಗಳಲ್ಲಿ ನಡೆಯುತ್ತಿದೆ. ಧವಳ್ ಕುಲಕರ್ಣಿ ಕೂಡ ಮುಂಬೈ ನವರೇ ಆಗಿರುವುದರಿಂದಾಗಿ ಅವರಿಗೆ ಇಲ್ಲಿನ ಪಿಚ್ ಕುರಿತಂತೆ ಸಾಕಷ್ಟು ಜ್ಞಾನ ಇರುತ್ತದೆ. ಈಗಾಗಲೇ ಅವರು ಈ ಬಾರಿಯ ಕಾಮೆಂಟೇಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಜೋಪ್ರಾ ಅರ್ಚರ್ ಬದಲಿಗೆ ಧವಳ್ ಕುಲಕರ್ಣಿ ರವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯಶಸ್ವಿಯಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.